ಮೋನಿಕಾ ಹತ್ಯೆಗೆ ಮುನ್ನ ಅಶ್ಲೀಲ ವಿಡಿಯೋ ತೋರಿಸಿದ್ದ ರಾಜ್

Posted By:
Subscribe to Oneindia Kannada

ಪಣಜಿ, ಅಕ್ಟೋಬರ್ 12 : ಸುಗಂಧದ ರಾಣಿ ಮೋನಿಕಾ ಖುರ್ಡೆ ಭೀಕರ ಹತ್ಯೆ ಅಚಾನಕ್ಕಾಗಿ ಆಗಿದ್ದಲ್ಲ. ಬೆಂಗಳೂರಿನಲ್ಲಿ ಬಂಧಿತನಾಗಿರುವ ಆರೋಪಿ ರಾಜ್ ಕುಮಾರ್ ಸಿಂಗ್ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮಾಡಿಕೊಂಡೇ ಈ ಹೇಯ ಕೃತ್ಯ ನಡೆಸಿದ್ದಾನೆ.

ಗೋವಾ ಪೊಲೀಸರ ಕಸ್ಟಡಿಯಲ್ಲಿರುವ ಇರುವ ಪಂಜಾಬ್ ಮೂಲದ ಸೆಕ್ಯೂರಿಟಿ ಗಾರ್ಡ್ ರಾಜ್ ಕುಮಾರ್, ವಿಚಾರಣೆಯ ಸಂದರ್ಭದಲ್ಲಿ ಕೊಲೆ ನಡೆಸಿರುವ ಬಗ್ಗೆ ಎಳೆಎಳೆಯಾಗಿ ವಿವರಣೆಗಳನ್ನು ನೀಡಿದ್ದಾನೆ. ಅಲ್ಲದೆ, ಇನ್ನೂ ಹಲವಾರು ಅಸಹ್ಯಕರ ಸಂಗತಿಗಳು ಕೂಡ ಬಯಲಾಗಿವೆ.

ಸುಂದರಿ ಮೋನಿಕಾಳ ಮೊಟ್ಟಮೊದಲ ನೋಟಕ್ಕೇ ಮಾರುಹೋಗಿದ್ದ ರಾಜ್ ಕುಮಾರ್ ಆಕೆಯನ್ನು ಕಾಮಿಸತೊಡಗಿದ್ದ. ಆಕೆಯೊಡನೆ ತುಸು ಸಲುಗೆ ಬೆಳೆಸಿಕೊಂಡಿದ್ದ, ಆಕೆಯ ಬಗ್ಗೆ ವಿಕೃತ ವಾಂಛೆ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ತನ್ನ ಕಾಮತೃಷೆ ತೀರಿಸಿಕೊಳ್ಳಲು ಹೊಂಚುಹಾಕಿ ಕುಳಿತಿದ್ದ.[ಮೋನಿಕಾ ಪಾತಕಿ ರಾಜ್ ಬೆಂಗಳೂರನ್ನು ಆಯ್ದುಕೊಂಡಿದ್ದೇಕೆ?]

Monika Khurde was shown indecent videos before murder

ಮೋನಿಕಾ ಒಂಟಿಯಾಗಿರುವುದು ತಿಳಿಯುತ್ತಿದ್ದಂತೆ ಎರಡು ದಿನಗಳ ಕಾಲ ಟೆರೇಸ್ ಮೇಲಿಯೇ ಇದ್ದು ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದ. ಸರಿಯಾದ ಸಮಯವನ್ನು ನೋಡಿ ಆಕೆಯ ಮನೆ ಬಲವಂತವಾಗಿ ಪ್ರವೇಶಿಸಿದ್ದಲ್ಲದೆ, ಆಕೆಯ ಕೈಕಾಲು ಕಟ್ಟಿ, ಕತ್ತು ಹಿಸುಕಿ, ದಿಂಬು ಅಮುಕಿ ಹತ್ಯೆ ಮಾಡುವ ಮುನ್ನ ಅತ್ಯಾಚಾರವೆಸಗಿದ್ದ.[ಮೋನಿಕಾ ಗುರ್ಡೆ ಹತ್ಯೆ : ಬೆಂಗಳೂರಿನಲ್ಲಿ ಹಂತಕನ ಬಂಧನ]

ವಿಚಾರಣೆಯ ಸಂದರ್ಭದಲ್ಲಿ 21 ವರ್ಷದ ಯುವಕ ರಾಜ್ ಕುಮಾರ್ ಬಾಯಿಬಿಟ್ಟಿರುವ ಮತ್ತೊಂದು ವಿಕೃತ ಸಂಗತಿಯೆಂದರೆ, ಮೋನಿಕಾಳ ಮೇಲೆ ಎರಡು ಬಾರಿ ಅತ್ಯಾಚಾರವೆಸಗುವ ಮುನ್ನ ಆಕೆಗೆ ಬಲವಂತವಾಗಿ ಅಶ್ಲೀಲ ವಿಡಿಯೋ ಚಿತ್ರಗಳನ್ನು ತೋರಿಸಿದ್ದ ಎಂದು ಉಪ ಪೊಲೀಸ್ ಮಹಾನಿರ್ದೇಶಕ ವಿಮಲ್ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 5ರ ರಾತ್ರಿ ಮೋನಿಕಾ ಮನೆಯೊಳಗೆ ಬಲವಂತವಾಗಿ ನುಗ್ಗಿದ್ದ ರಾಜ್, ಆಕೆಯ ಕತ್ತಿಗೆ ಚಾಕು ಇಟ್ಟು ಬಾತ್ ರೂಂನಲ್ಲಿ ಕರೆದುಕೊಂಡು ಹೋಗಿದ್ದ. ಈ ದಾಳಿಯಿಂದ ಬೆದರಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಹಾಸಿಗೆಗೆ ಎಳೆತಂದು ಕೈಕಾಲು ಕಟ್ಟಿದ್ದ. ನಂತರ ಆಕೆಯ ಬಳಿಯಿದ್ದ ನಾಲ್ಕು ಸಾವಿರ ರು. ಕಿತ್ತುಕೊಂಡಿದ್ದ.

ಇನ್ನಷ್ಟು ಹಣ ಬೇಕೆಂದು ಕೇಳಿ, ಮೋನಿಕಾಳ ಬಳಿಯಿದ್ದ ಡೆಬಿಟ್ ಕಾರ್ಡ್ ಮತ್ತು ಫಾರ್ವರ್ಡ್ ತಿಳಿದುಕೊಂಡ. ಆಕೆಯನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಅಡುಗೆಮನೆ ಹೊಕ್ಕು ಮೊಟ್ಟೆ ಬೇಯಿಸಿಕೊಂಡು ತಿಂದಿದ್ದ. ಈಕೆಯನ್ನು ಹಾಗೆಯೇ ಬಿಟ್ಟರೆ ಎಲ್ಲ ವಿವರ ಪೊಲೀಸರಿಗೆ ತಿಳಿಸುತ್ತಾಳೆಂದು ಹಾಸಿಗೆಯಲ್ಲಿ ಹೊಸಕಿಹಾಕಿದ.

ಅದಕ್ಕೂ ಮುನ್ನ, ಕಟ್ಟಿದ್ದ ಕಾಲನ್ನು ಸಡಿಸಿಲಿ, ಆಕೆಯನ್ನು ಬೆತ್ತಲೆಗೊಳಿಸಿ ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ರಾಜ್ ಕುಮಾರ್. ಇಷ್ಟು ಮುಗಿಸಿ, ನೇರವಾಗಿ ಬಂದು ಬೆಂಗಳೂರು ಸೇರಿಕೊಂಡಿದ್ದಾನೆ. ಎಟಿಎಂವೊಂದರಲ್ಲಿ 50 ಸಾವಿರ ರು.ವರೆಗೆ ಹಣ ತೆಗೆದುಕೊಂಡು, ಅದೇ ಕಾರ್ಡ್ ಬಳಸಿ ಬಟ್ಟೆಬರೆಗಳನ್ನು ಕೊಂಡು, ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್ ನಲ್ಲಿ ಹಾಕಿದ್ದ.

ಆತನ ಜಾಡು ಹಿಡುದು ಸಾಗುತ್ತಿದ್ದ ಗೋವಾ ಪೊಲೀಸರಿಗೆ ಇಷ್ಟು ಮಾಹಿತಿ ಸಾಗಿತ್ತು. ಕೂಡಲೆ ಬೆಂಗಳೂರು ಪೊಲೀಸರಿಗೆ ಆತನ ಇರುವು ಮತ್ತು ಡೆಬಿಟ್ ಕಾರ್ಡ್ ಬಳಕೆಯ ವಿವರ ನೀಡಿದ್ದಾರೆ. ಬೆಂಗಳೂರು ಪೊಲೀಸರು ಭಾನುವಾರ ಆತನನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Murderer of Monika Khurde, model and perfume specialist, has revealed chilling details before Goa police. Rajkumar has shown 3 indecent videos to Monika before robbing, raping and murdering her. He was caught by Bengaluru police on 9th October and handed over to Goa police.
Please Wait while comments are loading...