ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೊನೆಗೂ ಸಿಕ್ತು ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಜಾಮೀನು

ದೆಹಲಿ, ನವೆಂಬರ್ 15: 215 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಸುಕೇಶ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದ ರಕ್ಕಮ್ಮನ ಕೋರ್ಟ್ ಕಚೇರಿ ಅಲೆದಾಟಕ್ಕೆ ಕೊಂಚ ಬ್ರೇಕ್ ಸಿಕ್ಕಂತಾಗಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿಂದ ಜಾಕ್ವೆಲಿನ್‌ಗೆ ಜಾಮೀನು ಸಿಕ್ಕಿದೆ.

ಇದಕ್ಕೂ ಮುನ್ನ ಈ ವಿಷಯವನ್ನು ದೆಹಲಿ ನ್ಯಾಯಾಲಯದಲ್ಲಿ ನವೆಂಬರ್ 11ರಂದು ವಿಚಾರಣೆ ನಡೆಸಲಾಗಿತ್ತು. ಆದರೆ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತು ಮತ್ತು ನವೆಂಬರ್ 15 ರಂದು ಸಂಜೆ 4 ಗಂಟೆಗೆ ದಿನಾಂಕವನ್ನು ನೀಡಿತ್ತು. ಇಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಜಾಕ್ವೆಲಿನ್ 2021 ರ ಜನವರಿಯಲ್ಲಿ ಮೊದಲ ಬಾರಿಗೆ ಸದ್ಯ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಸುಕೇಶ್ ಚಂದ್ರಶೇಖರ್ ಬಗ್ಗೆ ಎಲ್ಲವನ್ನೂ ತಿಳಿದ ಆಕೆ ಆತನನ್ನು ಭೇಟಿಯಾಗಿ ದುಬಾರಿ ಉಡುಗೊರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು ಎನ್ನುವ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಪಾಲುದಾರರಾಗಿದ್ದಾರೆ ಎಂದು ಇಡಿ ಆರೋಪ ಮಾಡಿತ್ತು.

2 ಲಕ್ಷ ಬಾಂಡ್ ಮೇಲೆ ಜಾಮೀನು

2 ಲಕ್ಷ ಬಾಂಡ್ ಮೇಲೆ ಜಾಮೀನು

ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿಂದ ಅವರಿಗೆ ಜಾಮೀನು ಸಿಕ್ಕಿದೆ. 2 ಲಕ್ಷ ವೈಯಕ್ತಿಕ ಬಾಂಡ್ ಮೇಲೆ ಅವರನ್ನು ಖುಲಾಸೆಗೊಳಿಸಲಾಗಿದೆ. ಜಾಕ್ವೆಲಿನ್ ಜಾಮೀನಿನ ಎಲ್ಲಾ ನಿಯಮಗಳನ್ನು ಪಾಲಿಸಬೇಕಿದೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರ ಜಾಮೀನು ವಿಚಾರಣೆ ಹಾಗೂ ನವೆಂಬರ್ 11ರಂದು ನ್ಯಾಯಾಲಯ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ನವೆಂಬರ್ 11 ರಂದು ನ್ಯಾಯಾಲಯ ಪರ ಮತ್ತು ವಿರೋಧದ ವಾದವನ್ನು ಆಲಿಸಿತು. ವಿಚಾರಣೆ ವೇಳೆ ಇಡಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ತನಿಖೆಗೆ ಸಹಕರಿಸಲಿಲ್ಲ. ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷ್ಯವನ್ನು ಹಾಳುಮಾಡಬಹುದು ಎಂದು ಆರೋಪಿಸಿತು. ಈ ಕಾರಣದಿಂದ ಇಡಿ ನಟಿಯ ಜಾಮೀನನ್ನು ವಿರೋಧಿಸಿತ್ತು. ಮಾತ್ರವಲ್ಲದೆ ಜಾಕ್ವೆಲಿನ್ ತಿಳಿಸದೆ ವಿದೇಶಕ್ಕೆ ಓಡಿಹೋಗಬಹುದು. ಹೀಗಾಗಿ ಜಾಕ್ವೆಲಿನ್‌ಗೆ ಜಾಮೀನು ನೀಡಬಾರದು ಎಂದು ಇಡಿ ಜಾಮೀನು ನಿರಾಕರಿಸಿತ್ತು. ಆದರೀಗ ಜಾಕ್ವೆಲಿನ್ ಗೆ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ.

ಸುಕೇಶ್‌ನಿಂದ ದುಬಾರಿ ಉಡುಗೊರೆ ಪಡೆದಿದ್ದ ಜಾಕ್ವಿಲಿನ್

ಸುಕೇಶ್‌ನಿಂದ ದುಬಾರಿ ಉಡುಗೊರೆ ಪಡೆದಿದ್ದ ಜಾಕ್ವಿಲಿನ್

ಜಾಕ್ವೆಲಿನ್ ಫರ್ನಾಂಡಿಸ್ ಅವರ ವಕೀಲರು ನ್ಯಾಯಾಲಯದಲ್ಲಿ ಅವಳನ್ನು ಸಮರ್ಥಿಸುವಾಗ ಇಡಿ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು. ನಟಿ ಯಾವಾಗಲೂ ತನಿಖೆಗೆ ಸಹಕರಿಸುತ್ತಾಳೆ. ಆದರೆ ಇಡಿ ಯಾವಾಗಲೂ ನಟಿಗೆ ಕಿರುಕುಳ ನೀಡುತ್ತಿದೆ ಮತ್ತು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ನಡುವೆ ಉತ್ತಮ ಸಂಬಂಧವಿತ್ತು. ಜಾಕ್ವೆಲಿನ್ ಸುಕೇಶ್‌ನೊಂದಿಗೆ ಎಷ್ಟು ವ್ಯಾಮೋಹ ಹೊಂದಿದ್ದನೆಂದರೆ, ಅವನ ಅಪರಾಧಗಳು ಬಹಿರಂಗವಾದ ನಂತರವೂ ಅವಳು ಅವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಜಾಕ್ವೆಲಿನ್ ಸುಕೇಶ್ ಅವರನ್ನು ಮದುವೆಯಾಗಲು ಬಯಸಿದ್ದರು ಎನ್ನಲಾಗುತ್ತಿದೆ.

215 ಕೋಟಿ ಸುಲಿಗೆ ಮಾಡಿದ್ದು ಹೇಗೆ?

215 ಕೋಟಿ ಸುಲಿಗೆ ಮಾಡಿದ್ದು ಹೇಗೆ?

ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದ ವಂಚಕ. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ 215 ಕೋಟಿ ರೂಪಾಯಿಯನ್ನು ವಸೂಲಿ ಮಾಡಿದ್ದನು. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿ ಆದಿತಿಗೆ ಪೋನ್ ಕಾಲ್ ಗಳನ್ನು ಮಾಡಿ ತನ್ನನ್ನು ತಾನು ಕೇಂದ್ರ ಗೃಹ ಇಲಾಖೆಯ ಅಧಿಕಾರಿ, ಕಾನೂನು ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪತಿಯನ್ನು ಜೈಲಿನಲ್ಲಿ ಬಿಡುಗಡೆ ಮಾಡಿಸಲು ಹಣ ನೀಡಬೇಕೆಂದು ಹೇಳಿದ್ದ.

ವಾಯ್ಸ್ ಮಾಡ್ಯುಲೇಷನ್ ಸಾಫ್ಟ್‌ವೇರ್ ಮತ್ತು ಸ್ಪೂಫಿಂಗ್ ಕರೆಗಳನ್ನು ಬಳಸಿ ಸುಕೇಶ್ ಚಂದ್ರಶೇಖರ್ 215 ಕೋಟಿ ರೂ. ವಂಚನೆ ಮಾಡಿದ್ದನು. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಯಿತು. ಆಗ ಪ್ರಕರಣ ಬೆಳಕಿಗೆ ಬಂದಿದೆ. ವಂಚಕ ಸುಕೇಶ್ ಈ 215 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣವನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ವಿಚಾರಣೆ ನಡೆಸಿದೆ.

ಸುಕೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಫೋಟೋ

ಸುಕೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಫೋಟೋ

ವಂಚನೆ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಸುಕೇಶ್ ವಿಚಾರಣೆ ವೇಳೆ ಜಾಕ್ವೆಲಿನ್ ಹೆಸರನ್ನು ಸುಕೆಶ್ ಬಹಿರಂಗಪಡಿಸಿದ್ದಾರೆ. ಆದರೆ ತಮಗೂ ಸುಕೇಶ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡರೂ ಸುಕೇಶ್ ಅವರೊಂದಿಗಿನ ಅವರ ಅನ್ಯೋನ್ಯವಾದ ಫೋಟೋಗಳು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್ ಮುತ್ತು ಕೊಡುತ್ತಿರುವ ಪೋಟೋಗಳು ಲೀಕ್ ಆಗಿವೆ. ಸುಕೇಶ್ ಚಂದ್ರಶೇಖರ್ ಅವರು ಕೂಡ ಜಾಕ್ವೆಲಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+