ಸೋನಿಯಾ ಗಾಂಧಿ ಆಪ್ತನ ನಿವಾಸದ ಮೇಲೆ ಇಡಿ ದಾಳಿ
ನವದೆಹಲಿ, ಜೂನ್ 27: ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಜಾರಿ ನಿರ್ದೇಶನಾಲಯ (ಇಡಿ) ಪ್ರಮುಖ ರಾಜಕಾರಣಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ.
Recommended Video
ಸೋನಿಯಾ ಗಾಂಧಿ ಪರಮಾಪ್ತ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿವಾಸದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಸಂದೇಸರ ಸಮೂಹ ಕಂಪನಿಯ ಹದಿನೈದು ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಅಹ್ಮದ್ ಪಟೇಲ್ ಶಾಮೀಲಾಗಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ, ಇದೇ ಮೊದಲ ಬಾರಿ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಮನಿ ಲಾಂಡ್ರಿಂಗ್ ಕಾಯ್ದೆಯಡಿ, ಇಡಿಯ ಮೂರು ಸದಸ್ಯರ ತಂಡ ಅಹ್ಮದ್ ಪಟೇಲ್ ಅವರ ಕೇಂದ್ರ ದೆಹಲಿಯಲ್ಲಿರುವ ನಿವಾಸಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೊಟೀಸ್ ಕಳುಹಿಸಿತ್ತು.ಆದರೆ, ಕೋವಿಡ್ 19 ಹಾವಳಿ ಹೆಚ್ಚಾಗಿರುವುದರಿಂದ, ಹಿರಿಯ ನಾಗರೀಕರು ಮನೆಯಲ್ಲೇ ಇರಬೇಕು ಎನ್ನುವ ಮಾರ್ಗಸೂಚಿ ಇರುವುದರಿಂದ, ಅಹ್ಮದ್ ಪಟೇಲ್ ವಿಚಾರಣೆಗೆ ಹಾಜರಾಗಿರಲಿಲ್ಲ.
ಸ್ಟೆರ್ಲಿಂಗ್ ಬಯೋಟೆಕ್ ಮಾಲೀಕತ್ವದ ಸಂದೇಸರ ಗ್ರೂಪ್, ಅಹ್ಮದ್ ಪಟೇಲ್ ಅವರ ಪ್ರಭಾವದಿಂದ ವಿವಿಧ ಬ್ಯಾಂಕುಗಳಿಂದ 15 ಸಾವಿರ ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿತ್ತು. ಆದರೆ, ಸಂದೇಸರ ಗ್ರೂಪ್ ಬ್ಯಾಂಕಿಗೆ ಹಣ ಹಿಂದಿರುಗಿಸದ ಆರೋಪವಿತ್ತು. ಬ್ಯಾಂಕ್ ನಿಂದ ಸಾಲ ಕೊಡಿಸಲು ಅಹಮದ್ ಪಟೇಲ್ ಭಾರೀ ಮೊತ್ತದ ಲಂಚವನ್ನು ಪಡೆದಿದ್ದರು ಎನ್ನುವ ಆರೋಪವಿದೆ.












Click it and Unblock the Notifications