ಮೋಹನ್ ಭಾಗವತ್ ವಿಜಯದಶಮಿ ಭಾಷಣದ ಮುಖ್ಯಾಂಶಗಳು
ನಾಗ್ಪುರ, ಅಕ್ಟೋಬರ್ 18: 'ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಬಂದರೂ ಅದರ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ' ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ದೂರಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ವಾರ್ಷಿಕ ವಿಜಯದಶಮಿ ಭಾಷಣ ಮಾಡಿದ ಸರಸಂಘಚಾಲಕ್ ಭಾಗವತ್, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ವಾರ್ಷಿಕವಾಗಿ ನಡೆಸುವ ಈ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರೂ ಭಾಗವಹಿಸಿದ್ದಿದ್ದು ವಿಶೇಷ.

ಪ್ರತಿದಾಳಿಗೆ ಭಾರತ ಸಿದ್ಧ!
ಅಕಸ್ಮಾತ್ ಪಾಕಿಸ್ತಾನ ದಾಳಿ ನಡೆಸಿದರೆ, ಅದರ ಗುಂಡೇಟಿಗೆ ಗುಂಡೇಟಿನ ಮೂಲಕವೇ ಉತ್ತರಿಸುತ್ತೇವೆ. ದೇಶಕ್ಕೆ ಭದ್ರತೆಯ ಬಗ್ಗೆ ಪ್ರಜ್ಞೆ ಇದೆ. ಬುಲೆಟ್ಟಿಗೆ ಬುಲೆಟ್ಟಿನ ಉತ್ತರವನ್ನೇ ನೀಡುತ್ತೇವೆ. ಭಾರತ ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾದರೆ ದೇಶದ ಭದ್ರತೆಯೂ ಸಾಕಷ್ಟು ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ರಾಮಮಂದಿರ ನಿರ್ಮಾಣದ ಬಗ್ಗೆ
ತಮ್ಮ ಭಾಷಣದ ನಡುವಲ್ಲಿ ಅಯೋಧ್ಯೆಯ ರಾಮಮಂದಿರ ವಿವಾದದ ಬಗ್ಗೆ ಮಾತನಾಡಿದ ಮೋಹನ್ ಭಾಗವತ್, 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕಾನೂನೊಂದನ್ನು ಜಾರಿಗೆ ತರಬೇಕು ಎಂದು ಅವರು ಬೇಡಿಕೆ ಇಟ್ಟರು. ಅದರಿಂದ ಮಾತ್ರವೇ ಶಾಂತಿಯುತವಾಗಿ ದೇವಾಲಯ ನಿರ್ಮಿಸುವುದಕ್ಕೆ ಸಾಧ್ಯ' ಎಂದು ಭಾಗವತ್ ಹೇಳಿದರು.

ಯೋಧರ ಕುಟುಂಬದ ರಕ್ಷಣೆ ಸರ್ಕಾರದ ಹೊಣೆ
ಯುದ್ಧದಲ್ಲಿ ಹುತಾತ್ಮರಾದ, ಅಥವಾ ದೇಶ ಸೇವೆಯಲ್ಲಿ ನಿರತರಾದ ಯೋಧರ ಕುಟುಂಬದ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಈಗಾಗಲೇ ಈ ಕುರಿತು ಸರ್ಕಾರ ಹಲವು ಕೆಲಸಗಳನ್ನು ಮಾಡಿದೆ. ಆದರೆ ಈ ಕೆಲಸ ಇನ್ನಷ್ಟು ತ್ವರಿತಗತಿಯಲ್ಲಿ ಆಗಬೇಕಿದೆ ಎಂದು ಭಾಗವತ್ ಬೇಡಿಕೆ ಇಟ್ಟರು.

ವಿಜಯ ದಶಮಿ ಭಾಷಣ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು(ಮುಖ್ಯಸ್ಥ) ವಿಜಯದಶಮಿಯಂದು ಮಾಡುವ ವಾರ್ಷಿಕ ಭಾಷಣಕ್ಕೆ ತನ್ನದೇ ಆದ ಮಹತ್ವವಿದೆ. ಪ್ರತಿ ವರ್ಷವೂ ಒಂದಿಲ್ಲೊಂದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವನ್ನು ಆಯ್ದುಕೊಂಡು ಭಾಷಣ ಮಾಡುವುದು ರೂಢಿ. ಈ ವರ್ಷದ ಸಮಾರಂಭಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
|
ಶಬರಿಮಲೆ ವಿವಾದ
ಶಬರಿಮಲೆ ವಿವಾದದ ಬಗ್ಗೆ ಮಾತನಾಡಿದ ಮೋಹನ್ ಜೀ ಭಾಗವತ್ , ಶಬರಿಮಲೆಯಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರಿದ್ದ ನಿಯಮದ ವಿರುದ್ಧ ಕೋರ್ಟಿಗೆ ಹೋಗಿದ್ದವರ್ಯಾರೂ ದೇವಾಲಯಕ್ಕೆ ಹೋಗುವವರಲ್ಲ. ಬಹುಪಾಲು ಮಹಿಳೆಯರು ದೇವಾಲಯದ ನಿಯಮವನ್ನು ಪಾಲಿಸುತ್ತಾರೆ. ಅವರ ಭಾವನೆಗಳನ್ನು ಪರಿಗಣಿಸಲಾಗಿಲ್ಲ' ಎಂದರು.












Click it and Unblock the Notifications