Maldives: ಭಾರತದ ಬಳಿ ಬೇಡಿಕೊಂಡ ಮಾಲ್ಡೀವ್ಸ್ ಅಧ್ಯಕ್ಷರು ಕೇಳಿಕೊಂಡಿದ್ದು ಏನು?
ಭಾರತದ ಬಗ್ಗೆ ಹಂಗೆ, ಹಿಂಗೆ ಅಂತಾ ಎಗರಾಡುತ್ತಿದ್ದ ಮಾಲ್ಡೀವ್ಸ್ ಪರಿಸ್ಥಿತಿ ಈಗ ಕೈಮೀರಿ ಹೋಗಿದೆ. ಆರ್ಥಿಕವಾಗಿ ಹೀನಾಯ ಸ್ಥಿತಿಗೆ ತಲುಪಿರುವ ಮಾಲ್ಡೀವ್ಸ್ ದೇಶ ಇನ್ನೇನು ಕೆಲವೇ ದಿನಗಳಲ್ಲಿ ಬೀದಿಗೆ ಬೀಳುವ ಸಾಧ್ಯತೆ ಕೂಡ ದಟ್ಟವಾಗಿತ್ತು. ಆದರೆ ಇದನ್ನು ಅರಿತಿರುವ & ತಮ್ಮ ತಪ್ಪು ಅರ್ಥ ಮಾಡಿಕೊಂಡಿರುವ ಮೊಹಮ್ಮದ್ ಮುಯಿಝು ಭಾರತಕ್ಕೆ ಬಂದು ಈ ಸಮಸ್ಯೆಯಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ, ನಾವು ಭಾರತದ ಪರ ಎಂದು ಘೋಷಿಸಿದ್ದಾರೆ!
ಭಾರತದ ಜೊತೆಗೆ ಕಿರಿಕ್ ತೆಗೆದಿದ್ದ ಮಾಲ್ಡೀವ್ಸ್‌ಗೆ ಇದೀಗ, ತನ್ನ ತಪ್ಪಿನ ಅರಿವು ಆಗುತ್ತಿದೆ. ಅಷ್ಟಕ್ಕೂ ಮಾಲ್ದೀವ್ಸ್‌ನಲ್ಲಿ ಇರುವ ಭಾರತೀಯ ಸೈನಿಕರು ಸ್ವದೇಶಕ್ಕೆ ಮರಳುವ ಪ್ರಕ್ರಿಯೆ ಮೇ 10ರ ಒಳಗೆ ಪೂರ್ತಿ ಆಗಬೇಕು ಎಂದು ಒತ್ತಡ ಹೇರಿತ್ತು. ಈ ಹಿನ್ನೆಲೆ ಭಾರತೀಯ ಸೈನಿಕರು ದ್ವೀಪರಾಷ್ಟ್ರ ಮಾಲ್ಡೀವ್ಸ್ ಬಿಟ್ಟು ಭಾರತಕ್ಕೆ ವಾಪಸ್ ಬಂದಿದ್ದರು. ಆ ನಂತರ ಭಾರತದ ಬಗ್ಗೆ ಮಾಲ್ಡೀವ್ಸ್ ದೇಶದ ರಾಜಕಾರಣಿಗಳು ಬಾಯಿಗೆ ಬಂದಂತೆ ಕಮೆಂಟ್ ಮಾಡಿದ್ದರು. ಕೊನೆಗೆ ಇದು ಸರಿಯಾಗೇ ಪಾಠ ಕಲಿಸಿದ್ದು, ಮಾಲ್ಡೀವ್ಸ್ ದೇಶದ ಆರ್ಥಿಕತೆ ಬೀದಿಗೆ ಬಿದ್ದಿದೆ. ಇದೇ ಕಾರಣಕ್ಕೆ ತನ್ನ ದೇಶ ಉಳಿಸಿಕೊಳ್ಳಲು ಭಾರತಕ್ಕೆ ಓಡೋಡಿ ಬಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮಾಡಿರುವುದು ಏನು ಗೊತ್ತಾ?

ಭಾರತದ ಸೇನೆ ಮಾಲ್ಡೀವ್ಸ್‌ಗೆ ವಾಪಸ್?
ಮಾಲ್ಡೀವ್ಸ್ ದೇಶ ಮೈತುಂಬಾ ಸಾಲ ಮಾಡಿಕೊಂಡು ನರಳುತ್ತಿದೆ. ಹೀಗಿದ್ದರೂ ತನ್ನ ಸೊಕ್ಕು & ಅಹಂಕಾರಕ್ಕೆ ಏನೂ ಕಡಿಮೆ ಇಲ್ಲ. ಯಾಕಂದ್ರೆ ಈ ದೇಶ ಭಾರತದ ಬಳಿ ಸಹಾಯ ಪಡೆದು ಕೊನೆಗೆ ಭಾರತದ ವಿರುದ್ಧವೇ ತಿರುಗಿ ಬಿದ್ದಿತ್ತು ಮಾಲ್ಡೀವ್ಸ್. ಹೀಗಿದ್ದಾಗ ಮಾಲ್ಡೀವ್ಸ್ ಬುದ್ಧಿ ಸರಿಯಾಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೂ ಅದೆಲ್ಲಾ ಉಲ್ಟಾ ಆಗಿತ್ತು, ಮತ್ತೊಂದು ಕಡೆ ಮಾಲ್ಡೀವ್ಸ್ & ಭಾರತದ ಸಂಬಂಧ ಹಳಸಿತ್ತು. ಕೊನೆಗೆ ಮಾಲ್ಡೀವ್ಸ್ ದೇಶ ನರಳುವಂತೆ ಆಗಿತ್ತು.
ಹಣದ ಸಹಾಯ ಮಾಡಲಿದೆ ಭಾರತ!
ಮಾಲ್ಡೀವ್ಸ್ ದೇಶ ಸಾಲು ಸಾಲು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿರುವ ಸಮಯದಲ್ಲೇ, ಈ ವಿಚಾರವಾಗಿ ಬುದ್ಧಿ ಕಲಿತಿರುವ ಮಾಲ್ಡೀವ್ಸ್ ಇದೀಗ ಭಾರತದ ಬಳಿ ಬಂದು ಬೇಡಿಕೊಂಡು ಸಹಾಯ ಪಡೆಯಲು ಮುಂದಾಗಿದೆ. ಅಲ್ಲದೆ ಭಾರತದ ಸೇನೆಯನ್ನು ಮರಳಿ ತನ್ನ ನಾಡಿಗೆ ಅಂದ್ರೆ ಮಾಲ್ಡೀವ್ಸ್ ನೆಲಕ್ಕೆ ಕರೆಸಿಕೊಳ್ಳಲು ಈಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಒಪ್ಪಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಭಾರತ ಕೂಡ ಮಾಲ್ಡೀವ್ಸ್‌ಗೆ ಇದೀಗ ಆರ್ಥಿಕ ಸಹಾಯ ಮಾಡಲು ಒಪ್ಪಿಗೆ ಸೂಚಿಸಿದೆ.












Click it and Unblock the Notifications