ಶಿವನನ್ನು ನಿಂದಿಸಿದ ಸನ್ನಿ ವಿರುದ್ಧ ಮತ್ತೆ ಎಫ್ ಐಆರ್
ಮುಜಾಫರ್ ಪುರ(ಬಿಹಾರ), ಜುಲೈ.06: ಹಿಂದೂಗಳ ಪವಿತ್ರ ಕ್ಷೇತ್ರ ವಾರಣಾಸಿ ಹಾಗೂ ಪರಮಶಿವನ ಬಗ್ಗೆ ಕೆಟ್ಟದಾಗಿ ಡೈಲಾಗ್ ಹೊಡೆದಿರುವ ನಟ ಸನ್ನಿ ಡಿಯೋಲ್ ಹಾಗೂ ಮೊಹಲ್ಲಾ ಅಸ್ಸಿ ಚಿತ್ರ ತಂಡಕ್ಕೆ ಮತ್ತೆ ಸಮಸ್ಯೆ ಎದುರಾಗಿದೆ. ವಾರಣಾಸಿ ನಂತರ ಬಿಹಾರದಲ್ಲೂ ದೂರು, ಎಫ್ ಐಆರ್ ದಾಖಲಾಗಿದೆ.
ಅಶ್ಲೀಲ ಪದಗಳ ಬಳಕೆ ಮಾಡಿರುವ ಆರೋಪ ಹೊರೆಸಿ ನಟ ಸನ್ನಿ ಡಿಯೋಲ್ ಹಾಗೂ ಚಿತ್ರಕರ್ಮಿ ಚಂದ್ರಪ್ರಕಾಶ್ ದ್ವಿವೇದಿ ವಿರುದ್ಧ ಸುಧೀರ್ ಕುಮಾರ್ ಝಾ ಎಂಬುವರು ದೂರು ನೀಡಿದ್ದರು. ಬಿಹಾರ ಕೋರ್ಟ್ ಚಿತ್ರತಂಡ ಹಾಗೂ ಪ್ರಮುಖ ಪಾತ್ರಧಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದೆ. [ಮೊಹಲ್ಲಾ ಅಸ್ಸಿ ವಿವಾದ: 'ಸನ್ನಿ' ವಿರುದ್ಧ ಎಫ್ ಐಆರ್]

ನಟ ಸನ್ನಿ ಡಿಯೋಲ್, ರವಿ ಕಿಷನ್, ಟಿವಿ ಧಾರಾವಾಹಿ ಚಾಣಕ್ಯ ಖ್ಯಾತಿಯ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ವಿರುದ್ಧ ಸ್ಥಳೀಯ ಪೊಲೀಸರು ಎಫ್ ಐಆರ್ ಹಾಕಿದ್ದಾರೆ. ಇದಲ್ಲದೆ ಭೇಲುಪುರ್ ಪೊಲೀಸ್ ಠಾಣೆಯಲ್ಲೂ ಇವರೆಲ್ಲರ ಮೇಲೆ ಇದೇ ಕಾರಣಕ್ಕೆ ಪ್ರಕರಣ ದಾಖಲಾಗಿದೆ.
ಹೆಸರಾಂತ ಲೇಖಕ ಕಾಶಿನಾಥ್ ಸಿಂಗ್ ಅವರ 'ಕಾಶಿ ಕಾ ಅಸ್ಸಿ' ಕಾದಂಬರಿ ಆಧಾರಿತ ಚಿತ್ರವಾಗಿರುವ ಮೊಹಲ್ಲಾ ಅಸ್ಸಿಯಲ್ಲಿ ಸನ್ನಿ ಡಿಯೋಲ್ ಅವರು ಪ್ರಮುಖ ಭೂಮಿಕೆಯಲ್ಲಿದ್ದರೆ, ರವಿ ಕಿಶನ್ ಹಾಗೂ ಸಾಕ್ಷಿ ಆನ್ವರ್ ಇನ್ನಿತರ ಪಾತ್ರಧಾರಿಗಳಾಗಿದ್ದಾರೆ. ವಾರಣಾಸಿಯ ಸಂಸ್ಕೃತ ಟೀಚರ್ ಆಗಿ, ಸಾಂಪ್ರದಾಯಿಕ ಶೈಲಿಯ ಜೀವನ ನಡೆಸುವ ಪಾತ್ರಧಾರಿ, ಪಂಡಿತ್ ರೂಪದಲ್ಲಿ ಆಕ್ಷನ್ ಹೀರೋ ಸನ್ನಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications