Modi In Kashmir: ಇಂದಿನಿಂದ ಮೋದಿ ಜಮ್ಮು ಕಾಶ್ಮೀರ ಪ್ರವಾಸ: ದಾಲ್ ಸರೋವರದ ದಡದಲ್ಲಿ ನಮೋ ಯೋಗ- ಟೈಟ್ ಸೆಕ್ಯೂರಿಟಿ

ಶ್ರೀನಗರ ಜೂನ್ 20: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು-ಕಾಶ್ಮೀರಾ ಪ್ರವಾಸ ಆರಂಭವಾಗಲಿದೆ. ಇತ್ತೀಚೆಗಷ್ಟೇ ನಾಲ್ಕು ಉಗ್ರರ ದಾಳಿಗೆ ಜಮ್ಮು ತತ್ತರಿಸಿದ್ದು ಭಾರೀ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನ (ಜೂನ್ 21) ಪ್ರಧಾನಿ ಮೋದಿ ಕಾಶ್ಮೀರದ ದಾಲ್ ಸರೋವರದ ದಡದಲ್ಲಿ ಯೋಗ ಮಾಡಲಿದ್ದಾರೆ. ಜೊತೆಗೆ ಈ ದಿನ ಕೋಟ್ಯಂತರ ರೂಪಾಯಿ ಮೌಲ್ಯದ ಯೋಜನೆಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಪ್ರಧಾನಿ ಮೋದಿ ಭದ್ರತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Modi s Jammu Kashmir tour from today Security tight

ಯೋಗ ದಿನ ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ಅವರು ಆರು ಸಾವಿರ ಜನರೊಂದಿಗೆ ಸೂರ್ಯ ನಮಸ್ಕಾರ ಮಾಡಲಿದ್ದಾರೆ. ಇಂದು (ಜೂನ್ 20) ಶ್ರೀನಗರ ತಲುಪಲಿರುವ ಮೋದಿ ಅವರು ನಾಳೆ ಬೆಳಗ್ಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಜಮ್ಮು ಕಾಶ್ಮೀರಕ್ಕೆ ಮೊದಲ ಭೇಟಿ ಇದಾಗಿದೆ. ಇತ್ತೀಚೆಗಷ್ಟೇ ಜಮ್ಮುವಿನಲ್ಲಿ ಉಗ್ರರ ದಾಳಿ ನಡೆದಿದ್ದು ಭಾರೀ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿಯ ತಂಡ ಜೂನ್ 19 ಬುಧವಾರದಿಂದಲೇ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್ (ಎಸ್‌ಕೆಐಸಿಸಿ) ಅನ್ನು ನಿಯಂತ್ರಿಸಲಿದೆ ಎಂದು ಭದ್ರತಾ ಸಿದ್ಧತೆಗಳಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Modi s Jammu Kashmir tour from today Security tight

ಭದ್ರತೆ ಹೀಗಿರುತ್ತದೆ?

ಗುರುವಾರ ಮಧ್ಯಾಹ್ನ 3 ಗಂಟೆಯ ನಂತರ ದಾಲ್ ಸರೋವರದಲ್ಲಿ ನೆಹರೂ ಪಾರ್ಕ್‌ನಿಂದ ಚಾರ್ ಚಿನಾರಿವರೆಗೆ ಸಾಮಾನ್ಯ ಜನರಿಗೆ ಬೋಟಿಂಗ್ ನಿಷೇಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ವಾಟರ್‌ವಿಂಗ್ ಸ್ಕ್ವಾಡ್‌ಗಳು ಸರೋವರದ ಭದ್ರತೆಯನ್ನು ನೋಡಿಕೊಳ್ಳಲಿವೆ. ಎಸ್‌ಕೆಐಸಿಸಿ ಕ್ಯಾಂಪಸ್‌ನ ಮೇಲೆ ನಿಗಾ ಇಡಲು ಡ್ರೋನ್‌ಗಳ ಸಹಾಯವನ್ನೂ ತೆಗೆದುಕೊಳ್ಳಲಾಗುತ್ತಿದೆ.

ರೆಡ್ ಜೋನ್

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ವಿಶೇಷವಾಗಿ ಶ್ರೀನಗರ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಶ್ರೀನಗರ ನಗರವನ್ನು ತಾತ್ಕಾಲಿಕವಾಗಿ ರೆಡ್ ಜೋನ್ ಎಂದು ಘೋಷಿಸುವ ಮೂಲಕ, ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಸ್ಥೆಯಿಂದ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್‌ಗಳ ಹಾರಾಟವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ

21 ರಂದು ಯೋಗ ದಿನವಾದ್ದರಿಂದ SKICಯಲ್ಲಿ ಪ್ರಧಾನಿ ಮೋದಿ ಸೂರ್ಯ ನಮಸ್ಕಾರ ಮಾಡುತ್ತಾರೆ. ಹೀಗಾಗಿ ಎಸ್‌ಕೆಐಸಿಗೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಶ್ರೀನಗರ ಸೇರಿದಂತೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನೆಲೆಗೊಂಡಿರುವ ಎಲ್ಲಾ ಪ್ರಮುಖ ಸಂಸ್ಥೆಗಳ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಶ್ರೀನಗರ ನಗರ ಮತ್ತು ಅಕ್ಕಪಕ್ಕದ ಪಟ್ಟಣಗಳಲ್ಲಿನ ಎಲ್ಲಾ ಸಂಬಂಧಪಟ್ಟ ಭದ್ರತಾ ಅಧಿಕಾರಿಗಳಿಗೆ ಆಯಾ ಪ್ರದೇಶಗಳಲ್ಲಿನ ಎಲ್ಲಾ ಅನುಮಾನಾಸ್ಪದ ಅಂಶಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲಾ ಸ್ಥಳಗಳಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಕ್ಯೂಆರ್‌ಟಿ, ಕ್ಯೂಎಟಿ ಮತ್ತು ಸಿಆರ್‌ಟಿಯನ್ನು ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+