ವಾರಣಾಸಿಯಲ್ಲಿ ಸ್ಟಾರ್ ವಾರ್: ಮೋದಿ, ರಾಹುಲ್, ಮಾಯಾವತಿ, ಅಖಿಲೇಶ್ ಪ್ರಚಾರ

ವಾರಣಾಸಿಯಲ್ಲಿ ನಾಲ್ಕು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜ ಪಕ್ಷಗಳ ನಾಯಕರು ರೋಡ್ ಶೋ, ಬಹಿರಂಗ ಸಭೆಗಳನ್ನು ಒಂದೇ ದಿನ ನಡೆಸಿದ್ದು ವಿಶೇಷವಾಗಿತ್ತು.

ವಾರಣಾಸಿ, ಮಾರ್ಚ್ 4: ಪುರಾಣ ಪ್ರಸಿದ್ಧ ಕ್ಷೇತ್ರವಾದ ವಾರಣಾಸಿಯಲ್ಲಿ ಶನಿವಾರ (ಮಾ. 4) ರಾಜಕೀಯ ತಾರೆಗಳು ಒಂದೇ ದಿನ ಪ್ರತ್ಯಕ್ಷವಾಗಿ ತಮ್ಮ ಪಾಲಿನ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ಆಡಳಿತಾರೂಢ ಪಕ್ಷವಾದ ಸಮಾಜವಾದಿ ಪಕ್ಷದ ನಾಯಕ ಹಾಗೂ ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಒಂದೇ ದಿನ ವಾರಣಾಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.

Modi, Rahul, Akhilesh, Mayavati in Varanasi on same day!

ಶನಿವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ರೋಡ್ ಶೋ ನಡೆಸಿದ ನಂತರ ಜವೂನ್ ಪುರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.[ರಾಜಕೀಯವಾಗಿ ದುರ್ಬಳಕೆಯಾದ ಸರ್ಜಿಕಲ್ ಸ್ಟ್ರೈಕ್: ಮೋದಿ]

ಮೋದಿ ರೋಡ್ ಶೋ ಮುಗಿಯುತ್ತಿದ್ದಂತೆ ವಾರಣಾಸಿ ಜನತೆಯು ಮತ್ತೊಂದು ರೋಡ್ ಶೋ ನೋಡಲು ಸಜ್ಜಾಗಿ ನಿಂತರು. ಈ ಬಾರಿ ರೋಡ್ ಶೋ ನಡೆಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಅವರಿಗೆ, ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೈ ಜೋಡಿಸಿರುವ ಆಡಳಿತಾರೂಢ ಪಕ್ಷವಾದ ಸಮಾಜವಾದಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ಸಹ ಸಾಥ್ ನೀಡಿದರು.

ಇದೇ ವೇಳೆ, ಇತ್ತ ಬೆಳಗ್ಗೆಯೇ ಮಾಯಾವತಿ ಅವರು, ರೊಹಾನಿಯಾದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

Modi, Rahul, Akhilesh, Mayavati in Varanasi on same day!

ಮಾಯಾವತಿ ಗುಡುಗು
ವಾರಣಾಸಿಯ ರೊಹಾನಿಲಾದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುುಖ್ಯಮಂತ್ರಿ ಮಾಯಾವತಿ, 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಮರೆತಿದ್ದಾರೆ. ಇದೇ ವಾರಣಾಸಿ ನೆಲದಿಂದ ಲೋಕಸಭೆಯ ಸದಸ್ಯರಾಗಿರುವ ನರೇಂದ್ರ ಮೋದಿ ಈಗ ಈ ಕ್ಷೇತ್ರದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು.

ಇನ್ನು, ರೋಡ್ ಶೋಗೂ ಮುನ್ನ ಮೋದಿಯವರು ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಹಾಗೂ ರೋಡ್ ಶೋ ಮುಗಿದ ನಂತರ ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದನ್ನು ಉಲ್ಲೇಖಿಸಿದ ಅವರು, ಈಗಾಗಲೇ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಮೋದಿಯವರ ಸಹಾಯಕ್ಕೆ ದೇವರೂ ನಿಲ್ಲುವುದಿಲ್ಲ ಎಂದು ಛೇಡಿಸಿದರು.

ಅಪನಗದೀಕರಣದ ಬಗ್ಗೆ ಪ್ರಸ್ತಾಪಿಸಿದ ಅವರು, ಮೋದಿಯವರು 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ದೇಶದ, ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ಜನತೆಗೆ ಕಷ್ಟಕೊಟ್ಟರು ಎಂದ ಆರೋಪಿಸಿದರು.

ಇದೇ ವೇಳೆ, ಮೋದಿಯವರನ್ನು ವಾರಣಾಸಿಯ ದತ್ತು ಪುತ್ರ ಎಂದು ಉಲ್ಲೇಖಿಸಿ ಮಾಯಾವತಿ, ಈ ಬಾರಿ ದತ್ತು ಪುತ್ರನಿಗೆ ಮತ ಹಾಕುವ ಬದಲು ಈ ನೆಲದ ಮಣ್ಣಿನ ಮಗಳಾದ ತಮಗೆ ಮತ ಹಾಕಬೇಕೆಂದು ಕೋರಿದರು.

Modi, Rahul, Akhilesh, Mayavati in Varanasi on same day!

ಅಖಿಲೇಶ್ ಸವಾಲು
ಅತ್ತ, ಬದೋಹಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ''ನಾನು ಪ್ರಧಾನಿ ಮೋದಿಯವರು ಇದೇ ನೆಲದಿಂದ ಗೆದ್ದು ಸಂಸತ್ ಸದಸ್ಯರಾದರು. ಆನಂತರ, ಪ್ರಧಾನಿಯೂ ಆದರು. ಆದರೆ, ಅವರು ಉತ್ತರ ಪ್ರದೇಶಕ್ಕಾಗಿ ಮಾಡಿರುವ ಯಾವುದಾದರೂ 10 ಒಳ್ಳೆ ಕೆಲಸಗಳನ್ನು ಪಟ್ಟಿ ಮಾಡಿ ಕೊಡಿ ಎಂದು ಸವಾಲು ಹಾಕಿದರು.

ಆನಂತರ, ತಮ್ಮ ಮಾತನ್ನು ಮುಂದುವರಿಸಿ, ಪ್ರಧಾನಿ ಕೆಲಸ ಮಾಡಿಲ್ಲ. ಆದರೆ, ನನ್ನ ಸರ್ಕಾರ, ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶಕ್ಕಾಗಿ ಏನು ಮಾಡಿದೆ ಎಂಬ ಪಟ್ಟಿಯನ್ನು ಕೊಡಬಲ್ಲೆ ಎಂದರು.

''ಮತದಾರರಿಗೆ ಹಣ ಹಂಚಲಾಗಿದೆ ಎಂಬ ಸುದ್ದಿಗಳು ನನ್ನ ಕಿವಿಗೂ ಮುಟ್ಟಿವೆ. ಮತದಾರರೇ, ನೀವು ಯಾರಿಂದಾದರೂ ಹಣ ಪಡೆಯಿರಿ. ಆದರೆ, ಮತವನ್ನು ಮಾತ್ರ ಸೈಕಲ್ (ಸಮಾಜವಾದಿ ಪಕ್ಷದ ಗುರುತು) ಚಿಹ್ನೆಗೇ ಹಾಕಬೇಕು'' ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+