ಅಮಿತ್ ಶಾ, ರಾಜನಾಥ್‌ ಸಿಂಗ್‌ ಜೊತೆ ಮೋದಿ ಮಹತ್ವದ ಸಭೆ

ನವದೆಹಲಿ, ಜೂನ್ 29; ಪ್ರಧಾನಿ ನರೇಂದ್ರ ಮೋದಿ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Recommended Video

      China ಕ್ಕೆ ಬುದ್ದಿ ಕಲಿಸಲು ಸಭೆ ಸೇರಿದ ಮೋದಿ, ಶಾ, ರಾಜನಾಥ್ ಸಿಂಗ್ | Oneindia Kannada

      ಮಂಗಳವಾರ ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ರಕ್ಷಣಾ ಸಚಿವ, ಕೇಂದ್ರ ಗೃಹ ಸಚಿವರ ಜೊತೆ ಸಭೆ ನಡೆಯುತ್ತಿದೆ. ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟದ ಬಳಿಕ ಈ ಸಭೆ ನಡೆಯುತ್ತಿದೆ.

      Modi meets Amit Shah, Rajnath Singh And NSA Ajit Doval

      ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳ ಕಾಲ ಲಡಾಕ್‌ಗೆ ಭೇಟಿ ನೀಡಿದ್ದರು. ಬಳಿಕ ಅವರು ದೆಹಲಿಗೆ ವಾಪಸ್ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ಸಭೆ ಭಾರೀ ಮಹತ್ವ ಪಡೆದಿದೆ.

      ಭಾರತೀಯ ವಾಯುಪಡೆ ಹಿಡಿತದಲ್ಲಿರುವ ಜಮ್ಮು ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಲಾಗಿತ್ತು. ಸ್ಫೋಟಕಗಳನ್ನು ಡ್ರೋನ್ ಮೂಲಕ ವಿಮಾನ ನಿಲ್ದಾಣದ ಮೇಲೆ ಹಾಕಲಾಗಿತ್ತು.

      ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯ ತನಿಖೆಯನ್ನು ಎನ್ಐಎಗೆ ವಹಿಸಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಹ ಮೋದಿ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

      ಇನ್ನು ಲಡಾಖ್ ಭೇಟಿಯ ವೇಳೆ ರಾಜನಾಥ್ ಸಿಂಗ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದರು. ಭಾರತ ಶಾಂತಿಯನ್ನು ಬಯಸುತ್ತದೆ. ಯಾವುದೇ ರೀತಿಯ ಪ್ರಚೋದನೆ ನೀಡಿದರೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+