ಚುನಾವಣೆ ಸೋತ ಸಚಿವನ ಮನೆಗೆ ಮೋದಿ ಮ್ಯಾಜಿಕ್ ಬೀಗ ಮುದ್ರೆ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 17: ಉತ್ತರ ಪ್ರದೇಶದ ರಾಜಧಾನಿಯಾದ ಲಖನೌದಲ್ಲಿರುವ ಮಾಜಿ ಶಾಸಕರೊಬ್ಬರ ಮನೆಗೆ ಮೋದಿ ಮ್ಯಾಜಿಕ್ ಅನ್ನೋ ಹೆಸರಿನ ಬೀಗ ಬಿದ್ದಿದೆ! ಹೌದು. ಅಚ್ಚರಿಯಾದರೂ ಇದು ಸತ್ಯ.

ಇತ್ತೀಚೆಗೆ ನಡೆದ ಆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋತ ಶಾಸಕರು, ಅಲ್ಲಿನ ಶಾಸಕರ ಕ್ವಾರ್ಟಸ್ ನಲ್ಲಿ ತಮಗೆ ನೀಡಲಾಗಿದ್ದ ನಿವಾಸಗಳನ್ನು ತೆರವುಗೊಳಿಸಿದ್ದಾರೆ. ಹಾಗೆಯೇ, ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮಲ್ಹೋತ್ರಾ ಅವರೂ ತಮ್ಮ ನಿವಾಸವನ್ನು ತೆರವುಗೊಳಿಸಿದ್ದಾರೆ.

'Modi Magic' Lock Seen Outside House Of Defeated Samajwadi Party MLA

ಆದರೆ, ಮರುದಿನ ಅವರ ಮನೆಯನ್ನು ಹೊರಗಿನಿಂದ ನೋಡಿದವರಿಗೆ ಅಚ್ಚರಿ ಕಾದಿದೆ. ರವಿದಾಸ್ ಅವರ ಮನೆಗೆ ಮೋದಿ ಮ್ಯಾಜಿಕ್ ಎಂಬ ಹೆಸರಿನ ಎರಡು ಬೀಗಗಳನ್ನು ಜಡಿಯಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಅವರ ಮನೆಗೆ ಹಾಕಿರುವ ಬೀಗದ ಚಿತ್ರವನ್ನು ಎಎನ್ಐ ತನ್ನ ಟ್ವೀಟ್ ಜತೆಗೆ ಪ್ರಕಟಿಸಿದೆ.

ಮಲ್ಹೋತ್ರಾ ಅವರು 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೆಣಸಿ ಗೆದ್ದಿದ್ದರು. ಆದರೆ, ಈ ಬಾರಿ ಬಿಜೆಪಿಯ ಬ್ರಿಜೇಶ್ ಪಾಠಕ್ ವಿರುದ್ಧ ಸೋತಿದ್ದಾರೆ.

ಕುತೂಹಲದ ವಿಚಾರವೆಂದರೆ, ಈ ಬೀಗಗಳನ್ನು ಬೀಗ ಹಾಗೂ ಬೀಗದ ಕೈ ತಯಾರಿಕೆಗೆ ಹೆಸರುವಾಸಿಯಾದ ಅಲೀಗಢದಲ್ಲಿ ತಯಾರಿಸಲಾಗಿರುವುದು ಪತ್ತೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Samajwadi leader Ravidas Malhotra vaccates government quarters after his defeat in recent assembly elections, his home has been locked by Modi magic locks.
Please Wait while comments are loading...