ಶೀಘ್ರವೇ ನೂತನ ಮಾದರಿಯ ವಿದ್ಯುತ್ ಮೀಟರ್: ಪಿಯೂಶ್ ಗೋಯೆಲ್

ಮೋದಿ ಸರ್ಕಾರದಿಂದ ಶೀಘ್ರವೇ ಸ್ಮಾರ್ಟ್ ವಿದ್ಯುತ್ ಮೀಟರ್. ಕೇಂದ್ರದ ಇಂಧನ ಸಚಿವ ಪಿಯೂಶ್ ಗೋಯೆಲ್ ಹೇಳಿಕೆ.

ನವದೆಹಲಿ, ಆಗಸ್ಟ್ 11: ನೂತನ ಮಾದರಿಯ ಸ್ಮಾರ್ಟ್ ವಿದ್ಯುತ್ ಮೀಟರ್ ಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯೆಲ್ ಅವರು ಶುಕ್ರವಾರ ಈ ವಿಚಾರ ತಿಳಿಸಿದ್ದಾರೆ.

ಹಾಲಿ ಚಾಲ್ತಿಯಲ್ಲಿರುವ ವಿದ್ಯುತ್ ಮೀಟರ್ ಗಳು 10ರಿಂದ 15 ಸಾವಿರ ರು.ಗಳವರೆಗೆ ಬೆಲೆ ಬಾಳುತ್ತವೆ. ಆದರೆ, ಹೊಸ ಮೀಟರ್ ಗಳು 1 ಸಾವಿರ ರು.ಗಳಿಗೇ ಗ್ರಾಹಕರಿಗೆ ಲಭ್ಯವಾಗುತ್ತವೆ ಎಂದು ಅವರು ತಿಳಿಸಿದರು.

Modi government to bring Smart electricity meters to your home

ಇನ್ನು, ಈ ಹೊಸ ಮೀಟರ್ ಗಳು ಮತ್ತಷ್ಟು ಹೆಚ್ಚು ನಿಖರವಾಗಿ ವಿದ್ಯುತ್ ಬಳಕೆಯನ್ನು ಸೂಚಿಸಬಲ್ಲವು ಎಂದು ತಿಳಿಸಿದ ಸಚಿವರು, ಅವನ್ನು ಮನೆ ಹಾಗೂ ಗೃಹ ಬಳಕೆಗೂ ಬಳಸಬಹುದು ಎಂದರು.

ಕೇಂದ್ರ ಸರ್ಕಾರವು ಈಗಾಗಲೇ ಈ ಮೀಟರ್ ಗಳ ತಯಾರಿಗೆ ಅಸ್ತು ಎಂದು ತಿಳಿಸಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವೇ ಮೊದಲ ಬೋಣಿ ಗ್ರಾಹಕ ರಾಜ್ಯವಾಗಿ ಹೊರಹೊಮ್ಮಿದೆ ಎಂದ ಗೋಯೆಲ್, ಉತ್ತರ ಪ್ರದೇಶ ಸರ್ಕಾರ 1 ಲಕ್ಷ ಮೀಟರ್ ಗಳನ್ನು ಕೊಳ್ಳುವುದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+