Budget 2024: ಬಿಹಾರಕ್ಕೆ ಸಿಗದ ವಿಶೇಷ ಸ್ಥಾನಮಾನ; ನಿತೀಶ್ ಕುಮಾರ್ ಮುಂದಿನ ನಡೆ ಏನು?
ಬಿಜೆಪಿ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಎನ್‌ಡಿಎ ಮೈತ್ರಿಕೂಟದ ಸಹಕಾರವನ್ನು ಪಡೆದಿದೆ. ಬಿಜೆಪಿಗೆ ಸರ್ಕಾರ ರಚಿಸಲು ಬೇಕಾದಷ್ಟು ಸ್ಥಾನಗಳು ಲಭಿಸದ ಕಾರಣ ಮೋದಿ, ಎನ್‌ಡಿಎ ಮೈತ್ರಿ ಕೂಟದತ್ತ ಮುಖ ಮಾಡಬೇಕಾಯಿತು. ಈ ಮೈತ್ರಿ ಕೂಟ ಹೇಗೆ ನಡೆಯುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಆದರೆ ಈಗ ಆರಂಭದಲ್ಲಿ ಈ ಕೂಟದಲ್ಲಿ ಬಿರುಕು ಕಾಣಿಸಿಕೊಳ್ಳಲಿವೆಯಾ ಎಂಬ ಆತಂಕ ಮನೆ ಮಾಡಿದೆ.
ಲೋಕಸಭಾ ಚುನಾವಣೆಗಳು ಮುಗಿದಾಗ ಎನ್‌ಡಿಎ ಮೈತ್ರಿ ಕೂಟ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿತು. ಈ ವೇಳೆ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಗೆ ನಾವು ನಿಮ್ಮ ಬೆಂಬಲಕ್ಕೆ ಸದಾ ಇರುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡಿ ಎಂದು ಮನವಿಯನ್ನು ಸಲ್ಲಿಸಿದ್ದರು.

ಮಂಗಳವಾರ ಬಜೆಟ್
ನಿತೀಶ್ ಕುಮಾರ್ ಅವರು ಪ್ರಧಾನಿ ಮುಂದೆ ಇಟ್ಟ ಬೇಡಿಕೆ ಸಣ್ಣದಾಗಿರಲಿಲ್ಲ. ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನ ಮಾನ ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು. ಈಗ ಬಿಜೆಪಿ ಈ ನಿರ್ಧಾರವನ್ನು ಕೈ ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಧಾನಿ ಮೋದಿ ಸರ್ಕಾರದ ಪುರ್ಣ ಪ್ರಮಾಣದ ಬಜೆಟ್‌ನ್ನು ಮಂಗಳವಾರ (ಜುಲೈ 23) ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ.
ಈ ವೇಳೆ ಎನ್‌ಡಿಎ ಮೈತ್ರಿ ಕೂಟದ ಪಕ್ಷಗಳಾದ ಜೆಡಿಯು ಹಾಗೂ ಟಿಡಿಪಿ ಪಕ್ಷಗಳ ಬೇಡಿಕೆಗೆ ಸರ್ಕಾರ ಕೈ ಗೊಂಡಿರುವ ಕ್ರಮದ ಬಗ್ಗೆ ತಿಳಿಯುತ್ತದೆ. ಆದರೆ ಇದಕ್ಕೂ ಮೊದಲು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಿತೀಶ್ ಕುಮರ್ ಅವರ ಬೇಡಿಕೆ ಬಹು ಚರ್ಚೆಗೆ ಗ್ರಾಸವಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಮೋದಿ ಸರ್ಕಾರ ನಿರಾಕರಿಸಿದೆ ಎಂಬುದು ಈಗ ತಿಳಿದು ಬಂದಿದೆ.
ಬೀಹಾರಕ್ಕೆ ವಿಶೇಷ ಸ್ಥಾನಮಾನ
ಬಿಹಾರಕ್ಕೆ ವಿಶೇಷ ರಾಜ್ಯದ ವಿಚಾರ ಸರ್ವಪಕ್ಷ ಸಭೆಯಲ್ಲಿ ಪ್ರತಿಧ್ವನಿಸಿತು. ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಜೆಡಿಯು ಮತ್ತೊಮ್ಮೆ ವಿಶೇಷ ಸ್ಥಾನಮಾನವನ್ನು ಪ್ರಸ್ತಾಪಿಸಲಾಯಿತು. ಕಾಂಗ್ರೆಸ್ ಅವರ ಬೇಡಿಕೆಯನ್ನು ಬೆಂಬಲಿಸಿತು. ಆದರೆ ಆಂಧ್ರಪ್ರದೇಶದ ಟಿಡಿಪಿಯ ಮೌನವು ಜೆಡಿಯುನ ನೈತಿಕತೆಯನ್ನು ಸ್ವಲ್ಪ ಕಡಿಮೆ ಮಾಡಿತು.

ನಿತೀಶ್ ನಡೆ ಏನು?
ರಾಜ್ಯದ ಅಭಿವೃದ್ಧಿಯನ್ನು ಉತ್ತೇಜಿಸಲು ಕೇಂದ್ರದಿಂದ ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ಅಥವಾ 'ವಿಶೇಷ ಪ್ಯಾಕೇಜ್' ನೀಡಬೇಕೆಂದು ಜೆಡಿಯು ಈ ಬಾರಿ ಒತ್ತಿಹೇಳಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಜೆಡಿಯು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದರು. ವಿಶೇಷ ರಾಜ್ಯ ಸ್ಥಾನಮಾನ ವಿಚಾರದಲ್ಲಿ ನಿತೀಶ್ ಕುಮಾರ್ ಅವರ ಉದ್ದೇಶ ಸರಿಯಾಗಿದೆ.
ಆದರೆ ಈ ವಿಷಯವನ್ನು ಇದೇ ವೇಳೆ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಸರ್ಕಾರ ವಿಶೇಷ ಸ್ಥಾನಮಾನದ ಬದಲಿಗೆ ಬಿಹಾರಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಬಹುದು. ಅಲ್ಲದೆ ಇನ್ನು ಈ ಸರ್ಕಾರಕ್ಕೆ ಐದು ವರ್ಷಗಳು ಬಾಕಿ ಇದ್ದು ಈ ಅವಧಿಯಲ್ಲಿ ಯೋಚಿಸಬಹುದು.
ಪ್ರಧಾನಿ ನರೇಂದ್ರ ಮೋದಿ, ನಿತೀಶ್ ಕುಮಾರ್ ಅವರಿಗೆ ಯಾವ ರೀತಿಯ ಭರವಸೆಯನ್ನು ನೀಡಿದ್ದಾರೆ ಎಂಬುದರ ಮೇಲೆ ಜೆಡಿಯು ನಡೆ ನಿರ್ಧಾರವಾಗಲಿದೆ.












Click it and Unblock the Notifications