ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ, ಇ ಸಿಗರೇಟು ನಿಷೇಧ

|
Google Oneindia Kannada News

ನವದೆಹಲಿ, ಸೆ. 18: ಸತತವಾಗಿ ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ನಾಲ್ಕನೇ ಸುದ್ದಿಗೋಷ್ಠಿಯಲ್ಲಿಂದು ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!

ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರಲು ಮೋದಿ ಸರ್ಕಾರ ಆದೇಶ ಹೊರಡಿಸಿದೆ.

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

"ಅಮೆರಿಕ ಹೊರಹಾಕಿರುವ ಮಾಹಿತಿ ಪ್ರಕಾರ ಆ ದೇಶದಲ್ಲಿ ಶೇ78ರಷ್ಟು ಮಂದಿ ಇ ಸಿಗರೇಟು ಸೇವನೆಯಿಂದ ಮೃತಪಟ್ಟಿದ್ದಾರೆ. ಇ ಸಿಗರೇಟು ಸೇವನೆಯಿಂದ ಸಾವು ಪ್ರಕರಣಗಳು ಯುಎಸ್ ನಲ್ಲಿ ಶೇ 900ರಷ್ಟು ಅಧಿಕವಾಗಿವೆ. ಇದೇ ರೀತಿ ಇತರೆ ದೇಶಗಳಲ್ಲಿನ ದತ್ತಾಂಶಗಳನ್ನು ಪರಿಶೀಲಿಸಿ, ಭಾರತದಲ್ಲಿ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ" ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತದಲ್ಲಿ ಯಾವ ರೀತಿ ನಿಷೇಧ?

ಭಾರತದಲ್ಲಿ ಯಾವ ರೀತಿ ನಿಷೇಧ?

ಯಾವ ರೀತಿ ನಿಷೇಧ?: ಇ-ಸಿಗರೇಟು ಉತ್ಪಾದನೆ, ಆಮದು/ರಫ್ತು, ಮಾರಾಟ, ಶೇಖರಣೆ, ಜಾಹೀರಾತು ನೀಡಿಕೆ, ಬಳಕೆ ಎಲ್ಲವನ್ನು ನಿಷೇಧಿಸಲಾಗಿದೆ. ಎಲೆಕ್ಟ್ರೋನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಮೂಲಕ ಸಿಗುವ ನಿಕೋಟಿನ್ ಸೇವನೆ ಸಾಧನಗಳನ್ನು ನಿಷೇಧಿಸುವಂತೆ ಆರೋಗ್ಯ ಇಲಾಖೆ ಈಗಾಗಲೇ ಶಿಫಾರಸು ಕಳಿಸಿತ್ತು. ಇದನ್ನು ಪರಿಗಣಿಸಿ, ಕೇಂದ್ರ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಬೇಕಾಗಿತ್ತು. ಆದರೆ, ಸ್ವಲ್ಪ ತಡವಾಗಿದ್ದು, ಈಗ ಸಂಪೂರ್ಣ ನಿಷೇಧದ ಆದೇಶ ಜಾರಿಯಾಗಲಿದೆ.

460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್

460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್

ತಂಬಾಕು ಎಲೆಗಳನ್ನು ಸಂಪೂರ್ಣವಾಗಿ ಸುಡದೆ ಬಿಸಿ ಮುಟ್ಟಿಸಿ, ದ್ರವ ರೂಪದ ನಿಕೋಟಿನ್ ಅವಿಯನ್ನು ಸೇವಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗಿವೆ. ಇಂಥ ಸಾಧನಗಳಿಗೆ ಯಾವುದೆ ಲೈಸನ್ಸ್ ಇಲ್ಲ, ಯುವ ಜನಾಂಗದ ದಿಕ್ಕು ತಪ್ಪಿಸಲಾಗುತ್ತಿದೆ, ಸುಮಾರು 460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್ ಗಳು ಭಾರತದಲ್ಲಿವೆ. ಸರಿ ಸುಮಾರು 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯವಿದೆ.

ಕಾನೂನಿಗೆ ತಿದ್ದುಪಡಿ ಅಗತ್ಯವೂ ಇದೆ

ಕಾನೂನಿಗೆ ತಿದ್ದುಪಡಿ ಅಗತ್ಯವೂ ಇದೆ

ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರವು ಈ ಉತ್ಪನ್ನಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಮಾರಾಟದಲ್ಲಿ ನಿಯಂತ್ರಣ ಸಾಧಿಸಬಹುದು ಅಷ್ಟೇ. ಕಾನೂನಿನ ತೊಡಕಿನ ನಡುವೆ ಇ ಸಿಗರೇಟು ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ. ಹೀಗಾಗಿ, ಕಾನೂನಿಗೆ ತಿದ್ದುಪಡಿ ಅಗತ್ಯವೂ ಇದೆ

ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧ

ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧ

ಇ ಸಿಗರೇಟು ಉತ್ಪನ್ನಗಳನ್ನು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆ 1940(ಡಿಸಿಎ) ಸೆಕ್ಷನ್ 3 (ಬಿ) ಅಡಿಯಲ್ಲಿ ತರಲು ಸಾಧ್ಯವಾಗಿಲ್ಲ. ಸೆಕ್ಷನ್ 26 (ಎ) ಅಡಿಯಲ್ಲಿ ನಿಷೇಧಕ್ಕೆ ಯತ್ನಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದಲ್ಲಿ ಮಾತ್ರ ಇ ಸಿಗರೇಟ್, ಇ-ಶೀಶಾ, ಇ ನಿಕೋಟಿನ್, ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧವಿದೆ.

ತಂಬಾಕು ಸೇವನೆ ಸಾವು ಕರ್ನಾಟಕದಲ್ಲಿ ಅಧಿಕ

ತಂಬಾಕು ಸೇವನೆ ಸಾವು ಕರ್ನಾಟಕದಲ್ಲಿ ಅಧಿಕ

ಭಾರತದಲ್ಲಿ 27.4 ಕೋಟಿ ಜನರು ತಂಬಾಕನ್ನು ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ತಂಬಾಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ 35000 ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಬಾಕು ಎಲೆಯಲ್ಲಿ ನಾಲ್ಕು ಸಾವಿರ ರಾಸಾಯನಿಕಗಳಿರುತ್ತವೆ. ಅದರಲ್ಲಿ ನಾಲ್ಕು ನೂರು ಕಾಸ್ಮೋಜೆನಿಕ್ ರಾಸಾಯಕನಿಕಗಳು ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ಡಾ ಚಂದ್ರಕಿರಣ್ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದವರಿಗೆ ಏನು ಶಿಕ್ಷೆ

ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದವರೆಗೆ 5 ಲಕ್ಷ ರೂ. ದಂಡ, 3 ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಸಹಿತ ಸೆರೆಮನೆವಾಸ ವಿಧಿಸಬಹುದು.

English summary
Finance Minister Nirmala Sitharaman: The Union Cabinet has given approval to ban e-cigarettes. It means the production, manufacturing, import/export, transport, sale, distribution, storage and advertising related to e-cigarettes are banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X