ಮೋದಿ ಹೊಸ ಸಂಪುಟದ ಶೇ. 42 ಸಚಿವರ ಮೇಲಿದೆ ಕ್ರಿಮಿನಲ್ ಕೇಸ್, ಶೇ.90 ಮಂದಿ ಕೋಟ್ಯಾಧೀಶರು
ನವದೆಹಲಿ, ಜು.10: ''ಈ ವಾರದ ಆರಂಭದಲ್ಲಿ ಪುನರ್ ರಚನೆ ಮಾಡಲಾದ ಪ್ರಧಾನಿ ನರೇಂದ್ರ ಮೋದಿಯ ಕೇಂದ್ರ ಸಚಿವ ಸಂಪುಟದ 78 ಮಂತ್ರಿಗಳಲ್ಲಿ ಕನಿಷ್ಠ ಶೇ.42 ಸಚಿವರ ವಿರುದ್ದ ಕ್ರಿಮಿನಲ್ ಪ್ರಕರಣಗಳು ಇದೆ ಹಾಗೂ ಈ ಪೈಕಿ ಶೇ.90 ರಷ್ಟು ಮಂದಿ ಕೋಟ್ಯಾಧೀಶರು,'' ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತದಾನ ಹಕ್ಕುಗಳ ಗುಂಪು ಪ್ರಕಟಿಸಿದ ಹೊಸ ವರದಿ ತಿಳಿಸಿದೆ. ಇನ್ನು ''ಈ ಮಂತ್ರಿಗಳ ಪೈಕಿ ನಾಲ್ವರ ಮೇಲೆ ಕೊಲೆ ಯತ್ನಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ,'' ಎಂದು ವರದಿ ಉಲ್ಲೇಖ ಮಾಡಿದೆ.
Recommended Video
ಬುಧವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಖಾತೆ ಹಂಚಿಕೆ ಮಾಡಿದ್ದಾರೆ. ಒಟ್ಟು 15 ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. 28 ಸಂಸದರಿಗೆ ಕೇಂದ್ರ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಆ ಮೂಲಕ, ಪ್ರಧಾನ ಮಂತ್ರಿಗಳ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ ಈಗ 78 ರಷ್ಟಿದೆ.
ಎಡಿಆರ್ ಒಂದು ಮತದಾನದ ಹಕ್ಕುಗಳ ಗುಂಪಾಗಿದ್ದು, ಚುನಾವಣೆಗಳ ಮುಂಚೆ ರಾಜಕಾರಣಿಗಳ ಅಪರಾಧ, ಆರ್ಥಿಕ ಮತ್ತು ಇತರ ಹಿನ್ನೆಲೆ ವಿವರಗಳನ್ನು ಕಂಡುಹಿಡಿಯಲು ಅಫಿಡವಿಟ್‌ಗಳನ್ನು ಒಟ್ಟುಗೂಡಿಸುತ್ತದೆ.

ವಿಸ್ತರಣೆಯ ನಂತರ 17 ನೇ ಲೋಕಸಭೆಯಲ್ಲಿರುವ ಕೇಂದ್ರ ಸಚಿವರ ಪರಿಷತ್ತಿನ ವಿಶ್ಲೇಷಣೆಯನ್ನು ಎಡಿಆರ್ ನಡೆಸಿದೆ. ಈ ವಿಶ್ಲೇಷಣೆ ಪ್ರಕಾರ, ನೂತನ ಸಂಪುಟದಲ್ಲಿರುವ 33 ಮಂತ್ರಿಗಳ ಮೇಲೆ ಅಂದರೆ ಶೇ.42 ರಷ್ಟು ಮಂತ್ರಿಗಳ ಮೇಲೆ ಕ್ರಿಮಿನಲ್ ಕೇಸ್ ಇದೆ. ಇದು ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖವಾಗಿದೆ. ಈ ಪೈಕಿ, 24 ಮಂತ್ರಿಗಳ (ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇ.31) ವಿರುದ್ಧ ''ಗಂಭೀರ'' ಕ್ರಿಮಿನಲ್ ಪ್ರಕರಣಗಳು ಇದೆ. ಈ ಪ್ರಕರಣಗಳಲ್ಲಿ ಕೊಲೆ, ಕೊಲೆ ಯತ್ನ ಅಥವಾ ದರೋಡೆ ಪ್ರಕರಣಗಳು ಸೇರಿದೆ.
ಇದಲ್ಲದೆ, ಹೊಸ ಕೇಂದ್ರ ಕ್ಯಾಬಿನೆಟ್‌ನ (70 ಮಂತ್ರಿಗಳು) ಸುಮಾರು ಶೇ.90 ರಷ್ಟು ಸದಸ್ಯರು ಕೋಟ್ಯಾಧಿಪತಿಗಳು. ಅಂದರೆ ಈ ಮಂತ್ರಿಗಳ ಒಟ್ಟು ಆಸ್ತಿಯನ್ನು 10 ಮಿಲಿಯನ್ (ಒಂದು ಕೋಟಿ) ಎಂದು ಘೋಷಿಸಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ. ನಾಲ್ಕು ಮಂತ್ರಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ (379 ಕೋಟಿಗೂ ಹೆಚ್ಚು), ಪಿಯೂಷ್ ಗೋಯಲ್ (95 ಕೋಟಿಗೂ ಹೆಚ್ಚು), ನಾರಾಯಣ್ ರಾಣೆ (87 ಕೋಟಿಗೂ ಹೆಚ್ಚು) ಮತ್ತು ರಾಜೀವ್ ಚಂದ್ರಶೇಖರ್ (64 ಕೋಟಿಗೂ ಹೆಚ್ಚು) ರನ್ನು ಅಧಿಕ ಆಸ್ತಿ ಹೊಂದಿರುವ ಮಂತ್ರಿಗಳು ಎಂದು ಗುರುತಿಸಲಾಗಿದೆ.

ಇನ್ನು ಪ್ರತಿ ಸಚಿವರಿಗೆ ಸರಾಸರಿ 16.24 ಕೋಟಿ ಆಸ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ವರದಿಯು ಅತೀ ಕಡಿಮೆ ಆಸ್ತಿ ಹೊಂದಿರುವವರನ್ನು ಉಲ್ಲೇಖಿಸಿದೆ. ತ್ರಿಪುರಾದ ಪ್ರತಿಮಾ ಭೂಮಿಕ್ (6 ಲಕ್ಷಕ್ಕೂ ಹೆಚ್ಚು), ಪಶ್ಚಿಮ ಬಂಗಾಳದ ಜಾನ್ ಬಾರ್ಲಾ (14 ಲಕ್ಷಕ್ಕೂ ಹೆಚ್ಚು), ರಾಜಸ್ಥಾನದ ಕೈಲಾಶ್ ಚೌಧರಿ (24 ಲಕ್ಷಕ್ಕೂ ಹೆಚ್ಚು), ಒಡಿಶಾದ ಬಿಶ್ವೇಶ್ವರ (27 ಲಕ್ಷಕ್ಕಿಂತ ಹೆಚ್ಚು) ಮತ್ತು ಮಹಾರಾಷ್ಟ್ರದ ವಿ ಮುರಲೀಧರನ್ (27 ಲಕ್ಷಕ್ಕೂ ಹೆಚ್ಚು) ಆಸ್ತಿ ಇದೆ ಎಂದು ವರದಿ ತಿಳಿಸಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications