ಮೇಘಾಲಯ ಸಿಎಂ ಕಚೇರಿ ಮೇಲೆ ಕಲ್ಲು ತೂರಾಟ, ಐವರು ಭದ್ರತಾ ಸಿಬ್ಬಂದಿಗೆ ಗಾಯ

ತುರಾ, ಜುಲೈ. 24: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಕಚೇರಿ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಿಎಂ ಕಾನ್ರಾಡ್ ಸಂಗ್ಮಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ನೂರಾರು ಜನರು ಕಚೇರಿಯ ಕಾಂಪೌಂಡ್ ಅನ್ನು ಸುತ್ತುವರೆದಿದ್ದರಿಂದ ಅವರು ಇನ್ನೂ ತುರಾದಲ್ಲಿನ ಅವರ ಕಚೇರಿಯೊಳಗೆ ಇದ್ದಾರೆ.

ಗರೋ ಹಿಲ್ಸ್ ಮೂಲದ ನಾಗರಿಕ ಸಮಾಜದ ಗುಂಪುಗಳು ತುರಾದಲ್ಲಿ ಚಳಿಗಾಲದ ರಾಜಧಾನಿಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿವೆ. ಸೋಮವಾರ ಸಂಜೆ ಮುಖ್ಯಮಂತ್ರಿ ಕಚೇರಿಯ ಹೊರಗೆ ನೂರಾರು ಜನರು ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದಾಗ ಗದ್ದಲ ಆರಂಭವಾಯಿತು. ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಎಂ ಕಚೇರಿಯೊಳಗೆ ಕರೆತರಲಾಗಿದೆ.

Mob attacks Meghalaya Chief Ministers Office, 5 Injured

ದೃಶ್ಯಗಳು ಗಾಯಗೊಂಡ ಭದ್ರತಾ ಸಿಬ್ಬಂದಿ ನೆಲದ ಮೇಲೆ ಮಲಗಿರುವುದನ್ನು ತೋರಿಸುತ್ತವೆ. ಕಾನ್ರಾಡ್ ಸಂಗ್ಮಾ ಸುರಕ್ಷಿತವಾಗಿದ್ದರೂ, ಪ್ರತಿಭಟನಾಕಾರರು ಪ್ರವೇಶ ರಸ್ತೆಯನ್ನು ತಡೆದಿದ್ದರಿಂದ ಅವರು ಕಚೇರಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಆದರೆ ಉದ್ವಿಗ್ನವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕಾನ್ರಾಡ್ ಸಂಗ್ಮಾ ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತಿದ್ದಾಗ ಗುಂಪಿನಲ್ಲಿದ್ದ ಕೆಲವರು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ತುರಾದಲ್ಲಿ ಚಳಿಗಾಲದ ರಾಜಧಾನಿಗೆ ಬೇಡಿಕೆಯಿರುವ ನಾಗರಿಕ ಸಮಾಜದ ಗುಂಪುಗಳು ACHIK ಮತ್ತು GHSMCಗೆ ಸೇರಿವೆ. ಚಳಿಗಾಲದ ರಾಜಧಾನಿ ಬೇಡಿಕೆ ಮತ್ತು ಉದ್ಯೋಗ ಮೀಸಲಾತಿ ಕುರಿತು ಚರ್ಚೆಗೆ ಭೇಟಿಯಾಗುವಂತೆ ಕಾನ್ರಾಡ್ ಸಂಗ್ಮಾ ಪ್ರತಿಭಟನಾಕಾರರನ್ನು ಕೇಳಿಕೊಂಡಿದ್ದಾರೆ.

ಸಭೆಯಲ್ಲಿ ಸಂಪುಟದ ಸಚಿವರು ಮತ್ತು ಇತರ ನಾಯಕರು ಭಾಗವಹಿಸಲಿದ್ದಾರೆ. ಮುಂದಿನ ತಿಂಗಳು ರಾಜ್ಯ ರಾಜಧಾನಿಯಲ್ಲಿ ಮಾತುಕತೆಯನ್ನು ಪ್ರಾರಂಭಿಸುವ ಮೊದಲು ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಅವರು ಕೇಳಿಕೊಂಡಿದ್ದಾರೆ. ಕಾನ್ರಾಡ್ ಸಂಗ್ಮಾ ಅವರು ಮೂರು ಗಂಟೆಗಳ ಕಾಲ ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+