• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!'

By ಯಶೋಧರ ಪಟಕೂಟ
|

ನವದೆಹಲಿ, ಅಕ್ಟೋಬರ್ 13 : ಆಕೆ ಹದಿನೆಂಟು ವರ್ಷದ ಇಂಟರ್ನ್. ಪತ್ರಿಕೋದ್ಯಮದ ಎಬಿಸಿಡಿ ಕಲಿಯಲೆಂದು ಏಷ್ಯನ್ ಏಜ್ ಪತ್ರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದಳು. ಇಂಟರ್ನ್‌ಶಿಪ್‌ನ ಕೊನೆಯ ದಿನವದು. ತನಗೆ ಪತ್ರಿಕೋದ್ಯಮದ ಪಾಠಗಳನ್ನು ಹೇಳಿಕೊಟ್ಟು, ತನಗೆ ಅವಕಾಶ ನೀಡಿದ ಗುರುವಿಗೆ ವಂದಿಸೋಣವೆಂದು ಹೋದಾಗ...

ಧನ್ಯವಾದ ಹೇಳಲೆಂದು ಚಾಚಿದ ಕೈಯನ್ನು ಹಿಡಿದೆಳೆದು, ಎಳೆಹುಡುಗಿಯ ಭುಜವನ್ನು ಹಿಡಿದು ಹತ್ತಿರ ಎಳೆದುಕೊಂಡು, ಸಂಪಿಗೆಯಂತಹ ತುಟಿಗಳ ಮೇಲೆ ದೀರ್ಘವಾಗಿ ಚುಂಬಿಸಿದ್ದರು. ಇಷ್ಟು ಸಾಲದೆಂಬಂತೆ, ತನ್ನ ನಾಲಿಗೆಯನ್ನು ಆ ಹುಡುಗಿಯ ಬಾಯಿಯೊಳಗೆ ಹಾಕಿ ಅಸಹ್ಯಕರವಾಗಿ ವರ್ತಿಸಿದ್ದರು. ಇದು ನಡೆದದ್ದು 2007ರಲ್ಲಿ.

ಜೀವಮಾನದಲ್ಲೇ ಎಂದೂ ಮರೆಯಲಾಗದ ಆ ಭೀಕರ ಘಟನೆಗೆ ಮರು ಜೀವ ತಂದವರು ಅಮೆರಿಕಾದಲ್ಲಿ ಸಿಎನ್ಎನ್ ಸಂಸ್ಥೆಯಲ್ಲಿ ತನಿಖಾ ವರದಿಗಾರ್ತಿಯಾಗಿರುವ ಮಜಲಿ ಡೇ ಪುಯ್ ಕಂಪ್ ಎಂಬ ಪತ್ರಕರ್ತೆ. ಈ ರೀತಿ ಗೌರವ, ಘನತೆ, ವೃತ್ತಿಪರತೆಯನ್ನು ಕಸದಬುಟ್ಟಿಗೆ ಎಸೆದವರು #MeToo ದಾಳಿಗೆ ಸಿಲುಕಿರುವ ಖ್ಯಾತ ಮಾಜಿ ಪತ್ರಕರ್ತ ಮತ್ತು ಹಾಲಿ ಸಂಸದ (ವಿದೇಶಾಂಗ ಖಾತೆಯ ರಾಜ್ಯ ಸಚಿವ) ಎಂಜೆ ಅಕ್ಬರ್ ಅವರು.

ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ, ಅಂತರ ಕಾಯ್ದುಕೊಂಡ ಸರಕಾರ

ಅವರಿಗಾಗ 55 ವರ್ಷ ವಯಸ್ಸು, ಮಜಲಿ ಅವರಿಗೆ 18ರ ಹರೆಯ. ಎಂಜೆ ಅಕ್ಬರ್ ಅವರ ಕಡೆಯ ಮಗಳ ವಯಸ್ಸು ಕೂಡ ಹದಿನೆಂಟಕ್ಕಿಂತ ಆಗ ಹೆಚ್ಚಿತ್ತು. ಅಲ್ಲದೆ ಮಜಲಿ ಅವರ ತಂದೆ ಮತ್ತು ಎಂಜೆ ಅಕ್ಬರ್ ಕೂಡ ಸ್ನೇಹಿತರು. ಆದರೆ ಇವರು ಮಾಡಿದ್ದೇನು? ತನ್ನ ಮಗಳ ಸಮಾನ ಹುಡುಗಿಯನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ, ಪತ್ರಿಕಾ ವೃತ್ತಿಗೂ ಕಳಂಕ ತಂದಿದ್ದರು.

ಕಡೆಯ ದಿನವಂತೂ ಎಲ್ಲಕ್ಕಿಂತ ಅಸಹ್ಯಕರ

ಮಜಲಿ ಅವರಿಗೆ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಫೋಟೋಗಳನ್ನು ಅಕ್ಬರ್ ಅವರಿಗೆ ತೋರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ, ಪ್ರತಿದಿನ ಆ ಫೋಟೋಗಳನ್ನು ಅಕ್ಬರ್ ಅವರಿಗೆ ತೋರಿಸುವುದೇ ಹಿಂಸೆಯ ಸಂಗತಿಯಾಗಿತ್ತು. ಅಷ್ಟು ಅಸಹ್ಯವಾಗಿ ಅವರು ವರ್ತಿಸುತ್ತಿದ್ದರು. ಕಡೆಯ ದಿನವಂತೂ ಎಲ್ಲಕ್ಕಿಂತ ಅಸಹ್ಯಕರವಾಗಿತ್ತು. ಬಳಿಗೆ ಸೆಳೆದು ತುಟಿಗೆ ತುಟಿಯೊತ್ತಿ, ತಮ್ಮ ನಾಲಿಗೆಯನ್ನು ಆಕೆಯ ಬಾಯಲ್ಲಿ ತುರುಕಿದ್ದರು ಎಂದು ಮಜಲಿ ಟ್ವಿಟ್ಟರ್ ನಲ್ಲಿ ನೆನಪಿಸಿಕೊಂಡಿದ್ದಾರೆ.

#ಮಿಟೂ : ವಿನ್ತಾ ನಂದಾ ವಿರುದ್ಧ ಅಲೋಕ್ ನಾಥ್ ಮಾನನಷ್ಟ ಮೊಕದ್ದಮೆ

ನನ್ನ ಕಥೆ ಸಮುದ್ರದೊಳಗಿನ ಒಂದು ಬಿಂದು

ನನ್ನ ಕಥೆ ಸಮುದ್ರದೊಳಗಿನ ಒಂದು ಬಿಂದುವಷ್ಟೆ. ಆದರೆ, ಇದನ್ನು ಹಂಚಿಕೊಳ್ಳುವುದರಿಂದ ಸ್ವಲ್ಪವಾದರೂ ಬದಲಾವಣೆ ಆಗುತ್ತದೆ ಎಂಬ ಆಶಯ ನನ್ನದು. ಅವರು ಮಾಡಿದ್ದು ಅಸಹ್ಯಕರವಾಗಿತ್ತು, ಅವರು ಎಲ್ಲ ಎಲ್ಲೆಗಳನ್ನೂ ಮೀರಿದ್ದರು, ನಾನು ಮತ್ತು ನನ್ನ ಪಾಲಕರು ಅವರ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿದ್ದರು ಎಂದು ಹಫಿಂಗ್ಟನ್ ಪೋಸ್ಟ್ ಗೆ ಅವರು ಕಳುಹಿಸಿರುವ ಪತ್ರದಲ್ಲಿ ಬರೆದಿದ್ದಾರೆ ಮಜಲಿ. ಈ ಘಟನೆಯಾದ ನಂತರ, ಅವರ ವರ್ತನೆಯನ್ನು ಮಜಲಿ ಅವರ ಪಾಲಕರು ಪ್ರಶ್ನಿಸಿದಾಗ, ಪತ್ರಿಕಾರಂಗದಲ್ಲಿ ಇಂಥ ಘಟನೆಗಳು ಅಪಾರ್ಥಕ್ಕೀಡಾಗುತ್ತವೆ, ಇದರ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ ಎಂದು ಹೇಳಿ, ನನ್ನಿಂದ ತಪ್ಪು ನಡೆದಿದ್ದರೆ ಕ್ಷಮಿಸಬೇಕು ಎಂದು ಕೂಡ ಹೇಳಿದ್ದರು.

ಈ ಮೌನವ ತಾಳೆನು! ಅಕ್ಬರ್ ಪ್ರಕರಣದಲ್ಲಿ ಮೋದಿಗೆ ಸ್ವಾಮಿ ಕುಟುಕು!

#MeToo ಅಂದವರು ಮಜಲಿ ಒಬ್ಬರೇ ಅಲ್ಲ

#MeToo ಅಂದವರು ಮಜಲಿ ಒಬ್ಬರೇ ಅಲ್ಲ

ಎಂಜೆ ಅಕ್ಬರ್ ಅವರ ವಿರುದ್ಧ ಮಜಲಿ ಡೇ ಪುಯ್ ಕಂಪ್ ಅವರು ಮಾತ್ರವಲ್ಲ, 21 ವರ್ಷಗಳ ಹಿಂದೆ 1997ರಲ್ಲಿ ಎಂಜೆ ಅಕ್ಬರ್ ಅವರಿಂದ ಅನುಭವಿಸಬಾರದ್ದನ್ನೆಲ್ಲ ಅನುಭವಿಸಿರುವ ಹಿರಿಯ ಪತ್ರಕರ್ತೆ ಗಝಾಲಾ ವಹಾಬ್ (ಫೋರ್ಸ್ ನ್ಯೂಸ್ ಮ್ಯಾಗಜಿನ್ ಎಕ್ಸಿಕ್ಯೂಟಿವ್ ಎಡಿಟರ್) ಎಂಬುವವರು ಕೂಡ ತಮ್ಮ ಮೇಲೆ ಆರು ತಿಂಗಳುಗಳ ಕಾಲ ಸತತವಾಗಿ ನಡೆಸಿದ ಲೈಂಗಿಕ ದೌರ್ಜನ್ಯದ ಲೆಕ್ಕವನ್ನು ಅಕ್ಷರಅಕ್ಷರ ಬಹಿರಂಗಪಡಿಸಿದ್ದಾರೆ. ಏಷ್ಯನ್ ಏಜ್ ಪತ್ರಿಕೆಯಲ್ಲಿ ಎಂಜೆ ಅಕ್ಬರ್ ಕೆಳಗೆ ಕೆಲಸ ಮಾಡಿರುವ ಇನ್ನೂ ಹಲವಾರು ಪತ್ರಕರ್ತೆಯರು ಇದೇ ರೀತಿಯ ಆರೋಪ ಹೊರಿಸಿದ್ದಾರೆ.

ಕೆಕ್ಕರಿಸಿ ನೋಡುವಾಗಲೇ ಏಟುಕೊಟ್ಟು ಕಿರುಚಬೇಕಿತ್ತು 'ಮೀಟೂ'!

ಅಕ್ಬರ್ ಅವರದು ಮೌನವೇ ಉತ್ತರ

ಅಕ್ಬರ್ ಅವರದು ಮೌನವೇ ಉತ್ತರ

ಈ ಎಲ್ಲ ಆರೋಪಗಳ ಬಗ್ಗೆ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿರುವ 67 ವರ್ಷಗಳ ಎಂಜೆ ಅಕ್ಬರ್ ಅವರದು ಮೌನವೇ ಉತ್ತರ. ಅವರೀಗ ಆಫ್ರಿಕಾದಲ್ಲಿದ್ದು, ಇದೇ ಭಾನುವಾರ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಈ ಆರೋಪಗಳಿಗೆ ವಿದೇಶಾಂಗ ಸಚಿವಾಲಯ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತನಿಖೆ ನಡೆಸುವುದಾಗಿ ವಾಗ್ದಾನ ನೀಡಿದ್ದಾರೆ. ಬಿಜೆಪಿಯನ್ನು ಗುರಿಯನ್ನಾಗಿಸಿರುವ ಕಾಂಗ್ರೆಸ್ ಪಕ್ಷ, ಕೂಡಲೆ ಎಂಜೆ ಅಕ್ಬರ್ ಅವರನ್ನು ಪದಚ್ಯುತಗೊಳಿಸಬೇಕು ಎಂದು ದುಂಬಾಲು ಬಿದ್ದಿದೆ.

ಮೀಟೂ ಅಂದವರು ಇನ್ನೂ ಹಲವರಿದ್ದಾರೆ

ಮೀಟೂ ಅಂದವರು ಇನ್ನೂ ಹಲವರಿದ್ದಾರೆ

1993ರಲ್ಲಿ ದೆಹಲಿಯಲ್ಲಿ ಏಷ್ಯನ್ ಏಜ್ ಸೇರಿಕೊಂಡಿದ್ದ ಸುಪರ್ಣಾ ಶರ್ಮಾ ಎಂಬುವವರು ಕೂಡ ತಮ್ಮ ಮೇಲೆ ಎಂಜಿ ಅಕ್ಬರ್ ಅವರು ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಮತ್ತೊಬ್ಬ ಹೆಸರು ಹೇಳಲಿಚ್ಛಿಸದ ಮಹಿಳಾ ಪತ್ರಕರ್ತೆ ಕೂಡ 2004ರಲ್ಲಿ ತಾವು ಕೂಡ ಎಂಜೆ ಅಕ್ಬರ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆಯನ್ನು ವಿವರಿಸಿದ್ದಾರೆ. ವಾರದ ಮೀಟಿಂಗ್ ಗಳಲ್ಲಿ ಅಕ್ಬರ್ ಅವರ ಕಣ್ಣು ಮಹಿಳೆಯರ ಸ್ತನಗಳ ಮೇಲೆಯೇ ನೆಟ್ಟಿರುತ್ತಿತ್ತು ಎಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಇದನ್ನು ಪುರುಷ ಪತ್ರಕರ್ತರು ಕೂಡ ಒಪ್ಪಿಕೊಂಡಿದ್ದಾರೆ.

English summary
CNN journalist Majlie de Puy Kamp has alleged that, the then aditor of Asian Age MJ Akbar grabbed, kissed on lips and forced his tongue into my mouth. Huffington Post has published complete story of this journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X