Get Updates
Get notified of breaking news, exclusive insights, and must-see stories!
Live

Mizoram Election Results 2023 Live: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಅಧಿಕಾರ ಯಾರಿಗೆ?

Mizoram Election Results 2023 Live: ಬಹುನಿರೀಕ್ಷೆಯ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ನ.30ಕ್ಕೆ ಪೂರ್ಣಗೊಂಡಿದ್ದು, ಭಾನುವಾರ ಡಿ.3 ರಂದು ನಾಲ್ಕು ರಾಜ್ಯಗಳ ಅಧಿಕೃತ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಚಂಡೀಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಮಿಜೋರಾಂ ರಾಜ್ಯದ ಮತ ಎಣಿಕೆಯನ್ನು ಇಂದಿಗೆ (ಸೋಮವಾರ, ಡಿ.4) ಮುಂದೂಡಲಾಗಿತ್ತು. ಇಂದು ಈಶಾನ್ಯ ರಾಜ್ಯದ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಅಪ್ಡೇಟ್ ಮಾಹಿತಿಯನ್ನು ನೀವು 'ಒನ್ ಇಂಡಿಯಾ ಕನ್ನಡ' ನೇರ ಪ್ರಸಾರದಲ್ಲಿ ತಿಳಿಯಬಹುದು.

Mizoram Election Results 2023 Live

12:48 PM, 4 Dec
ಮಿಜೋರಾಂ

ಮುಖ್ಯಮಂತ್ರಿ ಅಭ್ಯರ್ಥಿಗೆ ಗೆಲುವು:-

ZPMನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸೆರ್ಚಿಪ್ ಕ್ಷೇತ್ರದಿಂದ ವಿಜೇತರಾಗಿದ್ದಾರೆ. ಅವರು 2,982 ಮತಗಳಿಂದ ಎಂಎನ್‌ಎಫ್‌ನ ಜೆಎಂ ವಾಂಚಾಂಗ್ ಅವರನ್ನು ಸೋಲಿಸಿದರು.

11:55 AM, 4 Dec
ಮಿಜೋರಾಂ

ಬಹುಮತ ಪಡೆಯುತ್ತ ಝಡ್‌ಪಿಎಂ ಪಕ್ಷ ಮುನ್ನಡೆ. 26 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಝಡ್‌ಪಿಎಂ ಪಕ್ಷ. ಎಂಎನ್‌ಎಫ್‌ 11 ಕ್ಷೇತ್ರಗಳಲ್ಲಿ ಮುನ್ನಡೆ. ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಮುನ್ನಡೆ, ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್

11:48 AM, 4 Dec
ತೆಲಂಗಾಣ

ತೆಲಂಗಾಣ

ತೆಲಂಗಾಣದ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

11:24 AM, 4 Dec
ಮಿಜೋರಾಂ

ಮಿಜೋರಾಂನಲ್ಲಿ ಉಪ ಮುಖ್ಯಮಂತ್ರಿ ಸೋಲು:-

ಮಿಜೋರಾಂನಲ್ಲಿ ಇಂದು ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಆಯೋಗದ ಪ್ರಕಾರ, ಮಿಜೋರಾಂ ಉಪ ಮುಖ್ಯಮಂತ್ರಿ ಮತ್ತು ಎಂಎನ್‌ಎಫ್ ಅಭ್ಯರ್ಥಿ ಟವ್ನ್ಲುಯಾ ಅವರು ZPM ಅಭ್ಯರ್ಥಿ ವಿರುದ್ಧ ಟುಯಿಚಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಸೋತಿದ್ದಾರೆ.

11:03 AM, 4 Dec

ಗೆಲುವಿನ ಖಾತೆ ತೆರೆದ ಝಡ್‌ಪಿಎಂ, 2 ಕ್ಷೇತ್ರಗಳಲ್ಲಿ ಗೆಲುವು, 27 ಕ್ಷೇತ್ರಗಳಲ್ಲಿ ಮುನ್ನಡೆ. ಎಂಎನ್‌ಎಫ್‌ 7 ಕ್ಷೇತ್ರಗಳಲ್ಲಿ ಮುನ್ನಡೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ, ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್.

9:52 AM, 4 Dec
ಮಿಜೋರಾಂ

ಭಾರಿ ಮುನ್ನಡೆ ಪಡೆದುಕೊಂಡ ಝಡ್‌ಪಿಎಂ, ಬರೋಬ್ಬರಿ 22 ಸ್ಥಾನಗಳಲ್ಲಿ ಮುನ್ನಡೆ. ಎಂಎನ್‌ಎಫ್ ಪಕ್ಷಕ್ಕೆ 11 ಸ್ಥಾನಗಳಲ್ಲಿ ಮುನ್ನಡೆ, 3 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಮುನ್ನಡೆ. ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ.

9:42 AM, 4 Dec
ಮಿಜೋರಾಂ

ಮತ್ತೆ ಮೇಲುಗೈ ಸಾಧಿಸಿದ ಝಡ್‌ಪಿಎಂ, 16 ಕ್ಷೇತ್ರಗಳಲ್ಲಿ ಝಡ್‌ಪಿಎಂ ಪಕ್ಷಕ್ಕೆ ಮುನ್ನಡೆ. 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಡಳಿತಾರೂಢ ಎಂಎನ್‌ಎಫ್‌ ಪಕ್ಷ. ಕಾಂಗ್ರೆಸ್‌ಗೆ 9 ಸ್ಥಾನಗಳಲ್ಲಿ ಮುನ್ನಡೆ. ಬಿಜೆಪಿ 2 ಮತ್ತು ಪಕ್ಷೇತರ ತಲಾ 2 ಕ್ಷೇತ್ರಗಳಲ್ಲಿ ಮುನ್ನಡೆ.

9:36 AM, 4 Dec
ಮಿಜೋರಾಂ

ಮಿಜೋರಾಂನಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಚಿತ್ರಣ. ಎಂಎನ್‌ಎಫ್‌ ಮತ್ತು ಝಡ್‌ಪಿಎಂ ಪಕ್ಷಗಳಿಗೆ ತಲಾ 14 ಕ್ಷೇತ್ರಗಳಲ್ಲಿ ಮುನ್ನಡೆ. 9 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡ ಕಾಂಗ್ರೆಸ್. ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಮುನ್ನಡೆ.

9:10 AM, 4 Dec
ಮಿಜೋರಾಂ

ಝಡ್‌ಪಿಎಂ ಪಕ್ಷಕ್ಕೆ ಭಾರಿ ಮುನ್ನಡೆ, ಮ್ಯಾಜಿಕ್ ನಂಬರ್ ದಾಟಿ 22 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡ ಝಡ್‌ಪಿಎಂ. 9 ಕ್ಷೇತ್ರಗಳಲ್ಲಿ ಎಂಎನ್‌ಎಫ್‌ ಪಕ್ಷಕ್ಕೆ ಮುನ್ನಡೆ. ಕಾಂಗ್ರೆಸ್‌ಗೆ 7 ಕ್ಷೇತ್ರಗಳಲ್ಲಿ ಮುನ್ನಡೆ.

8:49 AM, 4 Dec
ಮಿಜೋರಾಂ

ಕುತೂಹಲ ಘಟ್ಟದತ್ತ ಮಿಜೋರಾಂ ಫಲಿತಾಂಶ, ಎಂಎನ್‌ಎಫ್‌ 11, ಐಡ್‌ಪಿಎಂ 10 ಕ್ಷೇತ್ರಗಳಲ್ಲಿ ಮುನ್ನಡೆ. ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ. ಕಾಂಗ್ರೆಸ್‌ಗೆ 6 ಕ್ಷೇತ್ರಗಳಲ್ಲಿ ಮುನ್ನಡೆ. ಇನ್ನೂ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆಯದ ಬಿಜೆಪಿ

8:45 AM, 4 Dec
ಮಿಜೋರಾಂ

ಮಿಜೋರಾಂ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಎಂಎನ್‌ಎಫ್ ಮತ್ತು ಝಡ್‌ಪಿಎಂ ತಲಾ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದೆ.

8:13 AM, 4 Dec
ಮಿಜೋರಾಂ

ಮಿಜೋರಾಂ ವಿಧಾನಸಭೆ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಸಿಎಂ ಝೋರಮ್‌ತಂಗಾ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ, ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

7:45 AM, 4 Dec
ಮಿಜೋರಾಂ

ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ಅವರು ಭಾನುವಾರ 40 ಸದಸ್ಯರ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 21 ಅನ್ನು ದಾಟುವ ಮೂಲಕ ಎಂಎನ್‌ಎಫ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

7:17 AM, 4 Dec
ಮಿಜೋರಾಂ

ಬಿಗಿ ಭದ್ರತೆಯ ನಡುವೆ 13 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಚ್ ಲಿಯಾಂಜೆಲಾ ಮಾಹಿತಿ ನೀಡಿದ್ದಾರೆ. ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ಬೆಳಗ್ಗೆ 8.30ರಿಂದ ಇವಿಎಂಗಳಲ್ಲಿ ಮತ ಎಣಿಕೆ ನಡೆಯಲಿದೆ.

7:17 AM, 4 Dec
ಮಿಜೋರಾಂ

ನವೆಂಬರ್ 7 ರಂದು ಮಿಜೋರಾಂನಲ್ಲಿ ಮತದಾನ ನಡೆದಿದ್ದು, ರಾಜ್ಯದ 8.57 ಲಕ್ಷ ಮತದಾರರಲ್ಲಿ ಶೇಕಡಾ 80 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

6:19 AM, 4 Dec
ಮಿಜೋರಾಂ

ಮಿಜೋರಾಂ ವಿಧಾನಸಭೆ ಚುನಾವಣೆ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.

9:07 PM, 3 Dec

ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ: ಸಿದ್ದರಾಮಯ್ಯ

ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

8:43 PM, 3 Dec

ಮೂರು ರಾಜ್ಯದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ಧನ್ಯವಾದ ತಿಳಿಸಿದ ಮೋದಿ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ ಮತದಾರರಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

7:38 PM, 3 Dec

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆ ಭರ್ಜರಿ ಬಹುಮತ: ಡಿ ಕೆ ಶಿವಕುಮಾರ್‌

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆ ಭರ್ಜರಿ ಬಹುಮತ ಸಿಕ್ಕಿದ್ದು, ತೆಲಂಗಾಣ ಫಲಿತಾಂಶ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವುದರ ಸಂಕೇತ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

Top Fight - bhadra

image

ಸಂಜೀವ್ ಬೇನಿವಾಲ್

Won

image

ಅಜೀತ್

Lost

Top Fight - Dholpur

image

ಶೋಭಾರಾಣಿ ಕುಶ್ವಾಃ

Won

image

ಶಿವಚರಣ್ ಕುಶ್ವಾಃ

Lost

Top Fight - Dantaramgarh

image

ವೀರೇಂದ್ರ ಸಿಂಗ್‌

Won

image

ರೀತಾ ಸಿಂಗ್

Lost

6:32 PM, 3 Dec

ಬಿಜೆಪಿ ಮುನ್ನಡೆ-ಕಾಂಗ್ರೆಸ್ ಹಿನ್ನಡೆ

BJP won 102 seats and is leading on 13 seats.

Congress won 58 seats and is leading on 11 seats. pic.twitter.com/U027TyqLRn

— ANI (@ANI) December 3, 2023
6:30 PM, 3 Dec

ಪ್ರಧಾನಿ ಮೋದಿ ನಾಯಕತ್ವದಲ್ಲಿ ಜನರು ತಮಗಿರುವ ಅಚಲವಾದ ನಂಬಿಕೆಯನ್ನು ತೋರಿಸಿದ್ದಾರೆ ಎಂದು ವಿಧಾನಸಭಾ ಚುನಾವಣಾ ಫಲಿತಾಂಶಗಳ ಕುರಿತು ಮಣಿಪುರ ಸಿಎಂ ನಾ ಬಿರೇಮ್ ಸಿಂಗ್ ಅವರು ತಿಳಿಸಿದ್ದಾರೆ.

ಮಣಿಪುರ ಸಿಎಂ ಪ್ರತಿಕ್ರಿಯೆ

6:28 PM, 3 Dec

ಡಬಲ್ ಎಂಜಿನ್ ಸರ್ಕಾರದಿಂದ ಕಲ್ಯಾಣ

ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಕುರಿತು ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡಿದ್ದಾರೆ. ಜನರಿಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಮೇಲೆ ನಂಬಿಕೆ ಇದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಜನರ ವಿಶ್ವಾಸವನ್ನು ಮರಳಿ ಗಳಿಸಿದೆ. ರಾಜಸ್ಥಾನದ ಜನರು ಮತ್ತು ಛತ್ತೀಸ್‌ಗಢವು ರಾಜ್ಯಗಳ ಕಲ್ಯಾಣಕ್ಕಾಗಿ ಡಬಲ್ ಎಂಜಿನ್ ಸರ್ಕಾರವನ್ನು ತರುವುದಾಗಿ ಭರವಸೆ ದೊರೆತಿದೆ ಎಂದು ತಿಳಿಸಿದ್ದಾರೆ.

Top Fight - Lachmangarh

image

ಗೋವಿಂದ್ ಸಿಂಗ್ ದೋಟಸಾರ

Won

image

ಸುಭಾಷ್ ಮಹರಿಯಾ

Lost

Top Fight - Kota North

image

ಶಾಂತಿ ಧರಿವಾಲ್

Won

image

ಪ್ರಹ್ಲಾದ್ ಗುಂಜಾಲ್

Lost

Top Fight - Sardarpura

image

ಅಶೋಕ್ ಗೆಹ್ಲೋಟ್

Won

image

ಡಾ.ಮಹೇಂದ್ರ ಸಿಂಗ್ ರಾಥೋಡ್

Lost

Top Fight - Mandawa

image

ರೀಟಾ ಚೌಧರಿ

Won

image

ನರೇಂದ್ರ ಕುಮಾರ್

Lost

Top Fight - ಹುಜೂರ್ನಗರ

image

ನಲ್ಲಮಾಡ ಉತ್ತಮ್ ಕುಮಾರ್ ರೆಡ್ಡಿ

Won

image

ಚಲ್ಲಾ ಶ್ರೀಲತಾ ರೆಡ್ಡಿ

Lost

READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+