ಸೋನಿಯಾಗೆ ಮಿಜೋರಾಂ ಸಮಾಧಾನಕರ ಉಡುಗೊರೆ
ಐಜವಾಲ್ (ಮಿಜೋರಾಂ), ಡಿ. 9 : ಸೋಮವಾರ ಕಾಂಗ್ರೆಸ್ ಪಾಲಿಗೆ ನಿಜಕ್ಕೂ ಶುಭದಿನ. ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕಾಂಗ್ರೆಸ್ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆ ಮೂಲಕ ಮಿಜೋರಾಂ ಜನತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.
ನ.25ರಂದು ಮಿಜೋರಾಂನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಿತು. ಕ್ರಿಶ್ಚಿಯನ್ ಪ್ರಧಾನ ರಾಜ್ಯವಾದ ಮಿಜೋರಾಂನಲ್ಲಿ ಭಾನುವಾರದಂದು ಚರ್ಚ್‌ನ ಕಾರ್ಯಕ್ರಮಗಳು ಇರುವುದರಿಂದ ಮತ ಎಣಿಕೆ ದಿನಾಂಕವನ್ನು ಚುನಾವಣಾ ಆಯೋಗ ಸೋಮವಾರಕ್ಕೆ ಬದಲಾವಣೆ ಮಾಡಿತ್ತು. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆದಿದ್ದು, ಆರು ಮಹಿಳೆಯರು ಸೇರಿದಂತೆ 142 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.

ಎಂಟು ಜಿಲ್ಲೆಗಳ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, 40 ಸ್ಥಾನಗಳ ಮಿಜೋರಾಂ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಾದ 21ರ ಸ್ಥಾನವನ್ನು ಈಗಾಗಲೇ ಕಾಂಗ್ರೆಸ್ ಗೆದ್ದುಕೊಂಡಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಎಂ ಲಾಲ್ ಥಾನ್‌ಹವ್ಲಾ ಎರಡೂ ಕಡೆ ಜಯಭೇರಿ ಬಾರಿಸಿದ್ದಾರೆ. ಸದ್ಯ ರಾಜ್ಯದಲ್ಲಿ 3ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲು ಸಜ್ಜಾಗಿದೆ.
ಸದ್ಯದ ಮಾಹಿತಿಯಂತೆ ಕಾಂಗ್ರೆಸ್ 23 ಸ್ಥಾನಗಳಲ್ಲಿ ಜಯಗಳಿಸಿದ್ದು, ಇನ್ನೂ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಂಎನ್‌ಎಫ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 4 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆಯಲ್ಲಿದೆ.
ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಝೋರಂ ನ್ಯಾಷನಲ್ ಪಾರ್ಟಿ (ಝಡ್‌ಎನ್‌ಪಿ) ಮತ್ತು ಬಿಜೆಪಿ ಅಭ್ಯರ್ಥಿಗಳಿ ಸೇರಿ ಒಟ್ಟು 142 ಮಂದಿ ಚುನಾವಣಾ ಕಣದಲ್ಲಿದ್ದರು. ಚುನಾವಣೆಯಲ್ಲಿ ಶೇ 81 ರಷ್ಟು ಮತದಾನವಾಗಿತ್ತು. (ಕಾಂಗ್ರೆಸ್ ದರ್ಬಾರ್ ಅಂತ್ಯ, ಕೇಸರಿ ಪಥ ನಿರ್ಮಾಣ)
ಕಾಂಗ್ರೆಸ್ - 23
ಎಂಎನ್‌ಎಫ್ - 4
ಝಡ್‌ಎನ್‌ಪಿ -
ಬಿಜೆಪಿ -












Click it and Unblock the Notifications