ದೆಹಲಿಯ ಸಂಸತ್ ಭವನದಲ್ಲಿ ಬೆಂಕಿ ಅವಘಡ

ನವದೆಹಲಿ, ಏಪ್ರಿಲ್, 10: ನವದೆಹಲಿಯ ಸಂಸತ್‌ ಭವನದ ಕೊಠಡಿಯೊಂದರಲ್ಲಿ ಭಾನುವಾರ ಮಧ್ಯಾಹ್ನ ಸಣ್ಣ ಬೆಂಕಿ ಅವಘಡ ಸಂಭವಿಸಿ ದಟ್ಟ ಹೊಗೆ ಕವಿದಿದ್ದ ಪ್ರಕರಣ ವರದಿಯಾಗಿದೆ.

2 ಮಹಡಿಯ ಕೊಠಡಿ ಸಂಖ್ಯೆ 212ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ದಟ್ಟ ಹೊಗೆ ಕಾರಿಡಾರ್‌ ಆವರಿಸಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

fire

ಬೆಂಕಿ ಕಾಣಿಸಿಕೊಂಡ ಮಹಡಿಯ ಕೆಳ ಅಂತಸ್ಥಿನಲ್ಲಿ ಜೆಡಿಯು ಸಭೆ ನಡೆಯುತ್ತಿತ್ತು. ಇನ್ನೊಂದೆಡೆ ಬೆಂಕಿ ಹತ್ತಿಕೊಳ್ಳಲು ಹವಾ ನಿಯಂತ್ರಣ ಯಂತ್ರದಲ್ಲಿ ಉಂಟಾದ ದೋಷ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ 1.30 ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಂಸತ್ ಭವನದ ನಿರ್ವಹಣೆ ಹೊತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+