ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆ ಹೆಲಿಕಾಪ್ಟರ್ ಪತನ

|
Google Oneindia Kannada News

ಇಟಾನಗರ, ಅಕ್ಟೋಬರ್ 21; ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತ ನಡೆದ ಸ್ಥಳಕ್ಕೆ ರಸ್ತೆ ಸಂಪರ್ಕವಿಲ್ಲ, ರಕ್ಷಣಾ ತಂಡವನ್ನು ಹೆಲಿಕಾಪ್ಟರ್ ಮೂಲಕ ಕಳಿಸಲಾಗುತ್ತಿದೆ.

ಶುಕ್ರವಾರ ಸಿಯಾಂಗ್ ಜಿಲ್ಲೆಯ ಸಿಂಗಿಂಗ್ ಎಂಬ ಪ್ರದೇಶದಲ್ಲಿ ಭಾರತೀಯ ಸೇನೆಯ ಸುಧಾರಿತ ಹೆಲಿಕಾಪ್ಟರ್ ಪತನಗೊಂಡಿದೆ. ಸೇನೆಯ ಮುಖ್ಯ ಕಚೇರಿಯಿಂದ ಸುಮಾರು 25 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿದೆ.

Fact check: ಕೇದಾರನಾಥ ಹೆಲಿಕಾಪ್ಟರ್ ಪತನದ ವಿಡಿಯೋ-ಫೋಟೋ ವೈರಲ್: ಸತ್ಯ ಗೊತ್ತಾ?Fact check: ಕೇದಾರನಾಥ ಹೆಲಿಕಾಪ್ಟರ್ ಪತನದ ವಿಡಿಯೋ-ಫೋಟೋ ವೈರಲ್: ಸತ್ಯ ಗೊತ್ತಾ?

Military Chopper Crashes Singging Village Arunachal Pradesh

ರಕ್ಷಣಾ ಇಲಾಖೆ ಸಂಪರ್ಕಾಧಿಕಾರಿ ಹೆಲಿಕಾಪ್ಟರ್ ಪತನಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ರಸ್ತೆ ಮೂಲಕ ತಲುಪಲು ಸಾಧ್ಯವಿಲ್ಲ. ವಾಯು ಮಾರ್ಗದ ಮೂಲಕ ರಕ್ಷಣಾ ಪಡೆಗಳನ್ನು ಕಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇದಾರನಾಥ ಹೆಲಿಕಾಪ್ಟರ್ ಅಪಘಾತದ ಹಿಂದಿನ ದಿನ ಪೈಲಟ್ ಪತ್ನಿಗೆ ಹೇಳಿದ್ದೇನು? ಕೇದಾರನಾಥ ಹೆಲಿಕಾಪ್ಟರ್ ಅಪಘಾತದ ಹಿಂದಿನ ದಿನ ಪೈಲಟ್ ಪತ್ನಿಗೆ ಹೇಳಿದ್ದೇನು?

ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು ಹೆಲಿಕಾಪ್ಟರ್ ಪತನಗೊಂಡ ಸ್ಥಳದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಾಡಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಹೊಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಸೇನಾ ಸಿಬ್ಬಂದಿಗಳು ಇದ್ದ ಹೆಲಿಕಾಪ್ಟರ್ ಪ್ರತಿದಿನ ಗಸ್ತಿನಲ್ಲಿತ್ತು. ಬೆಳಗ್ಗೆ 10.43ರ ಸುಮಾರಿಗೆ ಅದು ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಒಂದು ಎಂಐ-17 ಮತ್ತು 2 ಧ್ರುವ ಹೆಲಿಕಾಪ್ಟರ್ ನಿಯೋಜನೆ ಮಾಡಲಾಗಿದೆ.

ತುಮಕೂರಿನ ಎಚ್‌ಎಎಲ್‌ ಹೆಲಿಕಾಪ್ಟರ್ ಕಾರ್ಖಾನೆ ಕಾರ್ಯಾಚರಣೆಗೆ ಸಿದ್ಧ ತುಮಕೂರಿನ ಎಚ್‌ಎಎಲ್‌ ಹೆಲಿಕಾಪ್ಟರ್ ಕಾರ್ಖಾನೆ ಕಾರ್ಯಾಚರಣೆಗೆ ಸಿದ್ಧ

ಎರಡು ಮೃತದೇಹಗಳು ಪತ್ತೆ; ಸೇನಾ ಹೆಲಿಕಾಪ್ಟರ್‌ ಪತನಗೊಂಡ ಸ್ಥಳದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಕೇಂದ್ರ ಸಚಿವ ಕಿರಣ್ ರಿಜುಜು ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಎರಡನೇ ಹೆಲಿಕಾಪ್ಟರ್ ಪತನ ಇದಾಗಿದೆ. ಈ ತಿಂಗಳ ಮೊದಲ ವಾರದಲ್ಲಿ ನಡೆದ ಅಪಘಾತದಲ್ಲಿ ಒಬ್ಬರು ಪೈಲೆಟ್‌ ಸಾವನ್ನಪ್ಪಿದ್ದರು.

English summary
A military chopper crashed near singging village, Arunachal Pradesh. Site of accident not connected by road, rescue team sent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X