ಕಾಶ್ಮೀರದ ಉಗ್ರರು, ಯುವಕರಿಗೆ ಪಾಕ್ ಕಡೆಯಿಂದ ನೇರ ಸೂಚನೆ!
ಇತ್ತೀಚೆಗಿನ ಕಾರ್ಯಾಚರಣೆಗಳಲ್ಲಿ ಬಂಧಿತವಾಗಿರುವ ಉಗ್ರರು ಹಾಗೂ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿತ್ತು. ಕರೆಗಳ ತನಿಖೆಯಲ್ಲಿ ಪಾಕಿಸ್ತಾನದಿಂದಲೇ ನೇರ ನಿರ್ದೇಶನ ಬರುತ್ತಿದ್ದುದು ಸ್ಪಷ್ಟವಾಗಿದೆ.
ಶ್ರೀನಗರ, ಏಪ್ರಿಲ್ 3: ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗುವ ಉಗ್ರರಿಗೆ ಹಾಗೂ ಅಲ್ಲಿನ ಗಲಭೆಗಳಲ್ಲಿ ಕಲ್ಲು ತೂರಾಟ ನಡೆಸುವ ಯುವಕರಿಗೆ ಪಾಕಿಸ್ತಾನದಲ್ಲಿರುವ ಭಾರತ ವಿರೋಧಿ ಗುಂಪುಗಳ ನಾಯಕರಿಂದ ಮೊಬೈಲ್ ಫೋನ್ ಗಳ ಮೂಲಕ ನೇರವಾಗಿ ಸಲಹೆ, ಸೂಚನೆಗಳು ಲಭ್ಯವಾಗುತ್ತಿವೆ ಎಂಬ ಆಘಾತಕಾರಿ ವಿಚಾರ ಬಯಲಿಗೆ ಬಂದಿದೆ.
ಇತ್ತೀಚೆಗಿನ ಕಾರ್ಯಾಚರಣೆಗಳಲ್ಲಿ ಬಂಧಿತವಾಗಿರುವ ಉಗ್ರರು ಹಾಗೂ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿತ್ತು.[ದೇಶದ ಅತೀ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ]

ಈ ಮೊಬೈಲ್ ಫೋನ್ ಗಳಲ್ಲಿನ ಕರೆಗಳನ್ನು ಜಮ್ಮು ಕಾಶ್ಮೀರ ಪೊಲೀಸರು ತನಿಖೆಗೊಳಪಡಿಸಿದಾಗ ಈ ವಿಚಾರ ಬಹಿರಂಗಗೊಂಡಿದೆ.[ಟೂರಿಸಂ ಬೇಕಾ ಟೆರರಿಸಂ ಬೇಕಾ?: ಕಾಶ್ಮೀರಿಗಳಿಗೆ ಮೋದಿ ಪ್ರಶ್ನೆ]
2010ರಿಂದ ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸುತ್ತಿದ್ದ ಮಸಾರತ್ ಅಲಿ ಎಂಬಾತನನ್ನು ಇತ್ತೀಚೆಗೆ ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದವು. ಆತನಿಂದ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳಲ್ಲಿನ ಕರೆ ವಿವರಗಳನ್ನು ಪರಿಶೀಲಿಸಿದಾಗ ಆತನಿಗೆ ಪಾಕಿಸ್ತಾನದಿಂದ ಸಂದೇಶಗಳು ರವಾನೆಯಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಆ ಕರೆಗಳನ್ನು ಸಂಪೂರ್ಣವಾಗಿ ಆಲಿಸಿರುವ ಪೊಲೀಸರು ಮಸಾರತ್ ಅವರಿಗೆ ಪಾಕಿಸ್ತಾನದಿಂದಲೇ ಸಂದೇಶಗಳು ಬಂದಿರುವ ಹೊಸ ಪುರಾವೆಗಳನ್ನು ಸಾಬೀತುಪಡಿಸಲು ಸಾಧ್ಯವಾಯಿತು.
ಈ ಘಟನೆಯು ಈಗ ಸಿಕ್ಕಿಬಿದ್ದಿರುವ ಅನೇಕ ಯುವಕರ ಮೊಬೈಲ್ ಕರೆಗಳ ಬಗ್ಗೆಯೂ ತನಿಖೆ ನಡೆಸಲು ಪೊಲೀಸರನ್ನು ಪ್ರೇರೇಪಿಸಿತ್ತು. ಈ ಹಿನ್ನೆಲೆಯಲ್ಲಿ, ನಡೆಸಲಾದ ತನಿಖೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಎಲ್ಲಾ ಬುಡಮೇಲು ಕೃತ್ಯಗಳಿಗೂ ಪಾಕಿಸ್ತಾನದಿಂದಲೇ ನೇರ ನಿರ್ದೇಶನ ಬರುತ್ತಿದ್ದುದು ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications