ಉದ್ಯೋಗ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ ಶೇ 74 ಭಾರತೀಯ ನೌಕರರು- ಕಾರಣವೇನು? ವರದಿ, ವಿವರ
ನವದೆಹಲಿ, ಜೂನ್ 02: ಶೇ 74 ಭಾರತೀಯ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ. ಮೈಕ್ರೊಸಾಫ್ಟ್ ಕಂಪನಿಯು ಮಾಡಿರುವ ಸಮೀಕ್ಷೆಯೊಂದರಲ್ಲಿ ಇದು ತಿಳಿದುಬಂದಿದೆ. ಈ ಸಮೀಕ್ಷೆಯ ವರದಿ ಪ್ರಕಾರ, ಶೇ 74 ಭಾರತೀಯ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುವ ಚಿಂತೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ.
ಮೈಕ್ರೋಸಾಫ್ಟ್ ವರ್ಕ್ ಟ್ರೆಂಡ್ ಇಂಡೆಕ್ಸ್ 2023 ವರದಿಯ ಪ್ರಕಾರ, 90 ಪ್ರತಿಶತ ಭಾರತೀಯ ಉದ್ಯೋಗದಾತರು ತಾವು ನೇಮಿಸಿಕೊಳ್ಳುವ ಉದ್ಯೋಗಿಗಳಿಗೆ ಕೃತಕ ಬುದ್ಧಿಮತ್ತೆ ( Artificial Intelligence ) ಬೆಳವಣಿಗೆಗೆ ಸಿದ್ಧರಾಗಬೇಕೆಂದು ಬಯಸಿದ್ದಾರೆ. ಇದಕ್ಕಾಗಿ ಹೊಸ ಕೌಶಲ್ಯಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಭಾರತದಿಂದ ಸುಮಾರು 1,000 ಸೇರಿದಂತೆ 31 ದೇಶಗಳಾದ್ಯಂತ 31,000 ಜನರ ಸಮೀಕ್ಷೆಯನ್ನು ಆಧರಿಸಿದ ಮೈಕ್ರೊಸಾಫ್ಟ್ ವರದಿಯನ್ನು ತಯಾರಿಸಿದೆ. 74 ಪ್ರತಿಶತ ಭಾರತೀಯ ನೌಕರರು ತಮ್ಮ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ ಬದಲಾಯಿಸುವ ಆತಂಕವನ್ನು ಹೊಂದಿದ್ದಾರೆಂದು ಸಂಶೋಧನೆಯು ಹೇಳಿದೆ.
ಶೇಕಡಾ 83 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆಯು ತಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಬಹುದು ಎಂದು ನಂಬಿದ್ದಾರೆ. ಆದರೆ, ಇದರಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಶೇ 84 ಉದ್ಯೋಗದಾತರು ಉದ್ಯೋಗಿಗಳಲ್ಲಿ ಹೊಸತನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ಕೃತಕ ಬುದ್ದಿಮತ್ತೆಯ ತಜ್ಞರಾಗುವುದಲ್ಲದೇ ದಿನನಿತ್ಯದ ಪ್ರಾಂಪ್ಟ್ ಎಂಜಿನಿಯರಿಂಗ್‌ನಂತಹ ಹೊಸ ಪ್ರಮುಖ ಸಾಮರ್ಥ್ಯಗಳನ್ನು ಉದ್ಯೋಗಿಗಳು ಹೊಂದಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಶತ 90 ರಷ್ಟು ಭಾರತೀಯ ಉದ್ಯೋಗದಾತರು ತಾವು ನೇಮಿಸಿಕೊಳ್ಳುವ ಉದ್ಯೋಗಿಗಳಿಗೆ ಕೃತಕ ಬುದ್ದಿಮತ್ತೆ ಬೆಳವಣಿಗೆಗೆ ಬೇಕಿರುವ ಹೊಸ ಕೌಶಲ್ಯಗಳು ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. 78 ಪ್ರತಿಶತ ಭಾರತೀಯ ಉದ್ಯೋಗಿಗಳ ಪ್ರಸ್ತುತ ತಮ್ಮ ಕೆಲಸವನ್ನು ಮಾಡಲು ಸರಿಯಾದ ಸಾಮರ್ಥ್ಯಗಳನ್ನು ಹೊಂದಿಲ್ಲ ಎಂದು ಉದ್ಯೋಗದಾತರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ.












Click it and Unblock the Notifications