ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೈಕುಲುಕಿ ಕೈ ಒರೆಸಿಕೊಂಡ ಮೈಕ್ರೋಸಾಫ್ಟ್ ಸಿಇಒ!

|
Google Oneindia Kannada News

ನವದೆಹಲಿ, ಸೆ 30: ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಕೈಕುಲುಕಿದ ನಂತರ ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ ಕೈ ಒರೆಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ಶನಿವಾರ (ಸೆ26) ಸಿಲಿಕಾನ್ ವ್ಯಾಲಿಯಲ್ಲಿ ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ಸತ್ಯಾ ನಡೆಲ್ಲಾ ಸಹಿತ ಪ್ರತಿಷ್ಠಿತ ಕಂಪೆನಿಯ ಸಿಇಒಗಳು ಭಾಗವಹಿಸಿದ್ದರು. (ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ)

ಈ ಸಂದರ್ಭದಲ್ಲಿ ಮೋದಿಯವರನ್ನು ಭೇಟಿಯಾದ ನಡೆಲ್ಲಾ, ಅವರ ಕೈಕುಲುಕಿದ ನಂತರ ಸ್ವಲ್ಪ ಮುಂದೆ ಬಂದು ಎರಡೂ ಕೈ ಒರೆಸಿಕೊಂಡ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿದೆ. (ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮೋಡಿ)

ಮೋದಿಯವರನ್ನು ಅವಮಾನಿಸಲೆಂದೇ ನಡೆಲ್ಲಾ ಈ ರೀತಿ ವರ್ತಿಸಿದ್ದಾರೆಂದು ಮೋದಿ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಗುಲ್ಲೆಬ್ಬಿಸುತ್ತಿದ್ದಾರೆ. ಇದು ನಡೆಲ್ಲಾ ಅವರ ಹವ್ಯಾಸವೂ ಆಗಿರಬಹುದೆಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.[ಎಚ್ಚರ, ಹಸ್ತಲಾಘವವನ್ನು ಲಘುವಾಗಿ ಪರಿಗಣಿಸದಿರಿ]

ವಿಡಿಯೋದಲ್ಲಿ ಸ್ಪಷ್ಟ

ವಿಡಿಯೋದಲ್ಲಿ ಸ್ಪಷ್ಟ

ನರೇಂದ್ರ ಮೋದಿ ಕೈಕುಲುಕಿದ ನಂತರ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ ಕೈ ಒರೆಸಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮೋದಿ ಕೈಕುಲುಕಿದ ನಂತರ ನಡೆಲ್ಲಾ ಮುಗಳ್ನಗುತ್ತಾ ತನ್ನ ಎರಡೂ ಕೈಗಳನ್ನು ಒರೆಸಿಕೊಳ್ಳುತ್ತಿದ್ದರು.

ಡಿಜಿಟಲ್ ಇಂಡಿಯಾ ಕಾರ್ಯಕ್ರಮ

ಡಿಜಿಟಲ್ ಇಂಡಿಯಾ ಕಾರ್ಯಕ್ರಮ

ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕಂಪೆನಿಗಳ ಸಿಇಒಗಳನ್ನು ಮೋದಿ ಭೇಟಿಯಾಗಿ, ಕೈಕುಲುಕುತ್ತಿದ್ದರು. ಈ ಸಂದರ್ಭದಲ್ಲಿ ಮೋದಿ ಭೇಟಿಯ ನಂತರ ಸತ್ಯಾ ನಡೆಲ್ಲಾ ಕೈ ಒರೆಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ನಡೆಲ್ಲಾ ಹವ್ಯಾಸವಿರಬಹುದು

ಕೈಕುಲುಕಿದ ನಂತರ ಕೈ ಒರೆಸಿಕೊಳ್ಳುವುದು ನಡೆಲ್ಲಾ ಹವ್ಯಾಸವಿರಬಹುದು, ಇದರಲ್ಲೇನಿದೆ?

ನಡೆಲ್ಲಾ ಕೈಒರೆಸಿಕೊಳ್ಳುತ್ತಾರೆ

ನಡೆಲ್ಲಾ ಕೈಒರೆಸಿಕೊಳ್ಳುತ್ತಾರೆ, ಮೋದಿ ಕ್ಯಾಮರಾದವರನ್ನು ಪಕ್ಕಕ್ಕೆ ಎಳೆಯುತ್ತಾರೆ.

ಮೈಕ್ರೋಸಾಫ್ಟ್ ಸಿಇಒ ಸಹಿತ ಹಲವರ ಭೇಟಿ

ಮೈಕ್ರೋಸಾಫ್ಟ್ ಸಿಇಒ ಸಹಿತ ಹಲವರ ಭೇಟಿ

ಮೈಕ್ರೋಸಾಫ್ಟ್ , ಕ್ವಾಲ್ ಕಾಮ್, ಸಿಸ್ಕೋ, ಅಡೋಬ್, ಗೂಗಲ್, ಆಪಲ್, ಟೆಸ್ಲಾ ಸೇರಿದಂತೆ ಅನೇಕ ಸಂಸ್ಥೆಗಳ ಉದ್ಯಮಿಗಳನ್ನು ಮೋದಿ ಈ ಸಂದರ್ಭದಲ್ಲಿ ಭೇಟಿ ಮಾಡಿದ್ದರು.

English summary
Microsoft CEO Satya Nadella caught brushing hands after handshake with Indian Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X