ಪ್ರಧಾನಿ ಮೋದಿಯವರ ಭಾಷಣದಲ್ಲಿ ಪದೇ ಪದೇ ಹೇಳುವ 3 ಪದಗಳು...

ದೆಹಲಿ ಆಗಸ್ಟ್ 15: ಭಾರತದ 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ನಂತರ ಪ್ರಧಾನಿ ಮೋದಿ ವೇದಿಕೆಯಿಂದ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ಭಾಷಣದ ವೇಳೆ ವೇದಿಕೆಯಿಂದ ಅವರು ಹೇಳಿದ ಮೂರು ಮಾತುಗಳು ಸದ್ಯ ಸುದ್ದಿಯಾಗಿವೆ.

ಧ್ವಜಾರೋಹಣದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಪದೇ ಪದೇ ತಮ್ಮ ಬಾಂಧವ್ಯವನ್ನು ತೋರಿಸಿದರು. ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳನ್ನು ಉದ್ದೇಶಿಸಿ 'ನನ್ನ ಪ್ರೀತಿಯ ಕುಟುಂಬ ಸದಸ್ಯರೇ...' ಎಂದು ಹೇಳಿದರು. 'ನನ್ನ ಪ್ರೀತಿಯ ಕುಟುಂಬ ಸದಸ್ಯರು' ಈ ಮೂರು ಪದಗಳನ್ನು ಪ್ರಧಾನಿ ಮೋದಿಯವರು ಹಲವು ಬಾರಿ ಹೇಳಿದರು.

Mere pyar deshvasiyon..., why these three words dominate PM Modis speech..

ಪ್ರಧಾನಿ ಮೋದಿ ಪದೇ ಪದೇ ಹೇಳಿದ ಈ ಮೂರು ಪದಗಳು ಇಡೀ ಭಾಷಣದಲ್ಲಿ ಪ್ರಾಬಲ್ಯ ಹೊಂದಿವೆ. ಅಂದಹಾಗೆ ಇದೀಗ ಈ ಮೂರು ಪದಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಮಾಧ್ಯಮಗಳಲ್ಲೂ ಸುದ್ದಿಯಾಗಿವೆ.

ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿ ಮೋದಿಯವರು ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೆ ಜನಸಂಖ್ಯೆಯಲ್ಲಿ ನಮ್ಮದು ನಂಬರ್ ಒನ್ ದೇಶ ಎಂದು ಹೇಳಿದರು. ಈ ಬೃಹತ್ ದೇಶದಲ್ಲಿ ಇರುವ 140 ಕೋಟಿ ನನ್ನ ಸಹೋದರರು, ಸಹೋದರಿಯರು, ನನ್ನ ಕುಟುಂಬ ಸದಸ್ಯರು... ಇಂದು ಅವರು ಸ್ವಾತಂತ್ರ್ಯದ ಹಬ್ಬವನ್ನು ಆಚರಿಸುತ್ತಿದ್ದಾರೆ. ದೇಶದ ಕೋಟ್ಯಂತರ ಜನರಿಗೆ, ದೇಶ ಮತ್ತು ಪ್ರಪಂಚದಲ್ಲಿ ಭಾರತವನ್ನು ಪ್ರೀತಿಸುವ ಮತ್ತು ಗೌರವಿಸುವ ಕೋಟ್ಯಂತರ ಜನರಿಗೆ ಈ ಮಹಾನ್ ಹಬ್ಬದಂದು ನಾನು ಅನೇಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ನನ್ನ ಕುಟುಂಬದ ಸದಸ್ಯರಾದ ಪೂಜ್ಯ ಬಾಪು ಅವರ ನೇತೃತ್ವದಲ್ಲಿ ತ್ಯಾಗ ಬಲಿದಾನ ಮಾಡಿದ ಅಸಂಖ್ಯಾತ ವೀರರಿಗೆ ತಲೆಬಾಗುತ್ತೇನೆ ಎಂದು ಹೇಳಿದರು. ಆ ತಲೆಮಾರಿನಲ್ಲಿ ಕೊಡುಗೆ ನೀಡದ ವ್ಯಕ್ತಿಯೇ ಇರುತ್ತಿರಲಿಲ್ಲ. ಕೊಡುಗೆ ನೀಡಿದವರು, ತ್ಯಾಗ, ಬಲಿದಾನ, ತಪಸ್ಸು ಮಾಡಿದವರು ಅನೇಕರಿದ್ದಾರೆ. ಅವರೆಲ್ಲರಿಗೂ ಗೌರವಪೂರ್ವಕವಾಗಿ ತಲೆಬಾಗುತ್ತೇನೆ.

ದೇಶವನ್ನು ತಮ್ಮ ಕುಂಟುಬ ಎಂದು ಭಾವಿಸಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಪದೇ ಪದೇ ದೇಶವಾಸಿಗಳನ್ನು ತಮ್ಮ ಕುಟುಂಬದ ಸದಸ್ಯರು ಎಂದು ಸಂಬೋಧಿಸುತ್ತಿದ್ದರು. ಪ್ರಧಾನಿ ಮೋದಿ, 'ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಈ ಬಾರಿಯ ನೈಸರ್ಗಿಕ ವಿಕೋಪವು ದೇಶದ ಅನೇಕ ಭಾಗಗಳಲ್ಲಿ ಊಹಿಸಲಾಗದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದನ್ನು ಎದುರಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ'' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+