ತಕರಾರಿಲ್ಲದೆ ಮುಸ್ಲಿಂ ಮಹಿಳೆಯರ ಪೂಜೆ ಸ್ವೀಕರಿಸಿದ ಗೋವು!

ವಾರಣಾಸಿ, ಅ, 20 : ಜೈನರ ಪರ್ಯೂಷಣದ ವಿಚಾರವಾಗಿ ಆರಂಭವಾದ ಮಾಂಸ ಮಾರಾಟ, ನಿಷೇಧ, ಸಂಗ್ರಹದ ವಾದ ಪ್ರತಿವಾದ, ಪ್ರತಿಭಟನೆಗಳು ಇಂದಿಗೂ ಕೊನೆಗೊಂಡಿಲ್ಲ. ಇದರಿಂದ ದೇಶದಲ್ಲಿನ ಶಾಂತಿ ಕೊಂಚ ಕದಡಿದಂತೆ ಭಾಸವಾಗುತ್ತಿದೆ.

ಕಳೆದ ಒಂದು ತಿಂಗಳ ಹಿಂದೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಮಾಂಸ ಸಂಗ್ರಹಣೆ ಆರೋಪಿಸಿ ಮಹಮ್ಮದ್ ಇಖ್ಲಾಕ್ ನನ್ನು ಹತ್ಯೆ ಮಾಡಲಾಗಿತ್ತು. ಇದರಿಂದ ದೇಶಾದ್ಯಂತ ಬೃಹತ್ ಹೋರಾಟಗಳು ನಡೆದವು. ಆದರೂ ಅಲ್ಲಲ್ಲಿ ಕೋಮು ಸೌಹಾರ್ದತೆ ಮೂಡಿಸುವ ಘಟನೆಗಳು ನಡೆಯುತ್ತಿವೆ. ವಾರಾಣಾಸಿಯಲ್ಲಿ ಮುಸ್ಲಿಂ ಮಹಿಳಾ ಸಂಘವು ಹಿಂದೂಗಳ ಪವಿತ್ರ ದೇವರಾದ ಗೋವಿಗೆ ಆಹಾರ ನೀಡಿ ಪೂಜಿಸಿತು.[ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ]

ಒಂದು ತಿಂಗಳ ಹಿಂದೆ ಮೆಕ್ಕಾದ ಮಸೀದಿಯಲ್ಲಿ ಸಂಭವಿಸಿದ ಕ್ರೇನ್ ದುರಂತದಿಂದ ಹಾಗೂ ಜನರ ಕಾಲ್ತುಳಿತಕ್ಕೆ ನೂರಾರು ಮಂದಿ ಹಜ್ ಯಾತ್ರಿಗಳು ಸಾವನ್ನಪ್ಪಿದ್ದರು. ಈ ಅವಘಡದಿಂದ ಪಾರಾದ ಮುಸ್ಲಿಂ ಬಾಂಧವರು ಹಜ್ ಯಾತ್ರೆ ಮುಗಿಸಿ ಮರಳಿ ತವರಿಗೆ ಬರುತ್ತಿದ್ದಾರೆ.[700 ಬಲಿಪಡೆದ ಮೆಕ್ಕಾ ಕಾಲ್ತುಳಿತ ದುರಂತದ ಚಿತ್ರಗಳು]

ಬೀಫ್ ಪಾರ್ಟಿ ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ರಷಿದ್ ಅವರ ಮುಖಕ್ಕೆ ವಿಷ್ಣು ಗುಪ್ತ ನೇತೃತ್ವ ಹಿಂದೂ ಸೇನಾ ಕಾರ್ಯಕರ್ತರು ಅಕ್ಟೋಬರ್ 19ರ ಸೋಮವಾರದಂದು ಮಸಿ ಬಳಿದಿದ್ದರು. ಇದನ್ನು ವಿರೋಧಿಸಿ ಶಾಸಕ ರಷಿದ್ ಮತ್ತು ಬೆಂಬಲಿಗರು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.

ಇಷ್ಟೆಲ್ಲಾ ಗಲಾಟೆ ಗದ್ದಲಗಳ ನಡುವೆ ಕರ್ನಾಟಕ, ಆಂಧ್ರಪ್ರದೇಶ, ಕೊಲ್ಕತ್ತಾ ನಾನಾ ಕಡೆ, ದಸರಾ, ದುರ್ಗಾಪೂಜೆ ಸಂಭ್ರಮಗಳು ದೇಶದಲ್ಲಿ ಕದಡಿದ ಶಾಂತಿಯನ್ನು ಮರುಸೃಷ್ಠಿಸುತ್ತಿದೆ. ಈ ಎಲ್ಲಾ ಘಟನೆಗಳನ್ನು ಚಿತ್ರಗಳಲ್ಲಿ ನೋಡೋಣ.

ಮುಸ್ಲಿಂ ಮಹಿಳೆಯರಿಂದ ಗೋವಿಗೆ ಆಹಾರ

ಮುಸ್ಲಿಂ ಮಹಿಳೆಯರಿಂದ ಗೋವಿಗೆ ಆಹಾರ

ವಾರಾಣಾಸಿಯಲ್ಲಿ ಮುಸ್ಲಿಂ ಮಹಿಳಾ ಸಂಘವು ಹಿಂದೂಗಳ ಪವಿತ್ರ ದೇವರಾದ ಗೋವಿಗೆ ಆಹಾರ ನೀಡಿ ಕೋಮು ಸೌಹಾರ್ದತೆ ಪೂರಕವಾಗಿ ನಿಂತಿತು. ಸೌಹಾರ್ದತಾ ಬೆಳವಣಿಗೆಗೆ ಗೋವು ಸಹಕರಿಸಿತು.[ಜಮ್ಮು ಮತ್ತು ಕಾಶ್ಮೀರದಲ್ಲಿ ದನದ ಮಾಂಸ ಮಾರಾಟ ಬ್ಯಾನ್]

ನಾನು ರಾಜನ ರೀತಿ ಕಾಣಿಸ್ತಿನಾ

ನಾನು ರಾಜನ ರೀತಿ ಕಾಣಿಸ್ತಿನಾ

ಬಾಲಿವುಡ್ ಚಿತ್ರರಂಗದಲ್ಲಿ ಖಳನಾಯಕ ಪಾತ್ರಧಾರಿಯಾಗಿ ನಾಡಿನ ಜನರ ಮನಗೆದ್ದ ರಣಜಿತ್ ಅವರು ರಾಮಲೀಲಾ ನಾಟಕದಲ್ಲಿ ಅಭಿನಯಿಸಲು ಬಣ್ಣ ಹಚ್ಚಿದರು. ನಾನು ಈಗ ಖಳನಾಯಕ ಅಲ್ಲ ರಾಜ!

ಮೊಹರಂ ಐದನೇ ದಿನ

ಮೊಹರಂ ಐದನೇ ದಿನ

ಅಜ್ಮೀರದಲ್ಲಿ ಮುಸಲ್ಮಾನ ಬಾಂಧವರು ಮೊಹರಂನ ಐದನೇ ದಿನವನ್ನು ಸಾವಿರಾರು ಮಂದಿ ಸಮಾಗಮದಲ್ಲಿ ಬಹಳ ಸಂಭ್ರಮದಿಂದ ಆಚರಿಸಿದರು.[ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಆರಂಭ]

ಮಸಿ ಬಳಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ

ಮಸಿ ಬಳಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ

ಬೀಫ್ ಪಾರ್ಟಿ ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ರಷಿದ್ ಅವರ ಮುಖಕ್ಕೆ ವಿಷ್ಣು ಗುಪ್ತ ನೇತೃತ್ವ ಹಿಂದೂ ಸೇನಾ ಕಾರ್ಯಕರ್ತರು ಅಕ್ಟೋಬರ್ 19ರ ಸೋಮವಾರದಂದು ಮಸೀ ಬಳಿದಿದ್ದಾರೆ. ಇದನ್ನು ವಿರೋಧಿಸಿದ ಶಾಸಕ ರಷಿದ್ ಮತ್ತು ಬೆಂಬಲಿಗರು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.[ಬೀಫ್ ಪಾರ್ಟಿ ಕೊಟ್ಟಿದ್ದ ಕಾಶ್ಮೀರ ಪಕ್ಷೇತರ ಶಾಸಕನ ಮುಖಕ್ಕೆ ಮಸಿ]

ಪ್ರಪಂಚದ ಅತಿದೊಡ್ಡ ದುರ್ಗಾದೇವಿ

ಪ್ರಪಂಚದ ಅತಿದೊಡ್ಡ ದುರ್ಗಾದೇವಿ

ಕೊಲ್ಕತ್ತಾದಲ್ಲಿ ಅಕ್ಟೋಬರ್ 18ರ ಭಾನುವಾರದಂದು ಭಕ್ತರ ನಡುವೆ ಸಣ್ಣ ನೂಕುನುಗ್ಗಲು ಏರ್ಪಟ್ಟ ಪರಿಣಾಮ ಪ್ರಪಂಚದ ಅತಿ ದೊಡ್ಡದಾದ ದುರ್ಗಾದೇವಿ ವಿಗ್ರಹ ನೋಡಲು ಆಗಮಿಸುವ ಭಕ್ತಾಧಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ

ಸ್ವಾಗತ ಕೋರುತ್ತಿರುವ ಬಿದಿರು ಬೊಂಬೆಗಳು

ಸ್ವಾಗತ ಕೋರುತ್ತಿರುವ ಬಿದಿರು ಬೊಂಬೆಗಳು

ಕೊಲ್ಕತ್ತಾದಲ್ಲಿ ದುರ್ಗಾದೇವಿ ಭಕ್ತರು ದುರ್ಗಾದೇವಿಗೊಂದು ನಮನ ಸಲ್ಲಿಸಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಭಕ್ತಾಧಿಗಳನ್ನು ಬಿದಿರು ಬೊಂಬೆಗಳು ಭವ್ಯ ಸ್ವಾಗತ ನೀಡುತ್ತಿದೆ

ಹಾರ ಹಾಕಿ ಸ್ವಾಗತ ಕೋರಿದ ಸಂಬಂಧಿಗಳು

ಹಾರ ಹಾಕಿ ಸ್ವಾಗತ ಕೋರಿದ ಸಂಬಂಧಿಗಳು

ಮುಸಲ್ಮಾನ ಬಂಧವರು ಕೈಗೊಂಡಿದ್ದ ಹಜ್ ಯಾತ್ರೆ ಸಂದರ್ಭದಲ್ಲಿ ಆದ ಕ್ರೇನ್ ದುರಂತ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ಇದರಿಂದ ಕಂಗಾಲಾದ ಹಜ್ ಯಾತ್ರಿಕರ ಸಂಬಂಧಿಕರು ಸದಾ ಆತಂಕದಲ್ಲಿ ತೊಳಲಾಡುತ್ತಿದ್ದರು. ಆದರೆ ಇದೀಗ ಹಜ್ ಯಾತ್ರೆಯ ಮೊದಲ ತಂಡ ತಮ್ಮ ಯಾತ್ರೆ ಮುಗಿಸಿ ತವರಿಗೆ ತಲುಪಿದೆ. ಆಗ ಸಂಬಂಧಿಕರು ತಮ್ಮವರನ್ನು ಅಪ್ಪಿಕೊಂಡದ್ದು ಹೀಗೆ.[ಮೆಕ್ಕಾದಲ್ಲಿ ಕುಸಿದು ಬಿದ್ದ ಕ್ರೇನ್, 100 ಸಾವು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+