ಮೇಘಾಲಯ ಗಣಿ ಕಾರ್ಮಿಕರೆಲ್ಲರೂ ಸತ್ತಿದ್ದಾರೆ: ಕಾಂಗ್ರೆಸ್ ಸಂಸದ

ಶಿಲ್ಲಾಂಗ್, ಡಿಸೆಂಬರ್ 28: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಗಣಿಯಲ್ಲಿ ಸಿಲುಕಿಕೊಂಡ 13 ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ಮೃತರಾಗಿದ್ದಾರೆ ಎಂದು ಮೇಘಾಲಯದ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ ದುರಂತವನ್ನು ಗಂಭಿರವಾಗಿ ಪರಿಗಣಿಸಲಿಲ್ಲ. ಮೊದಲೇ ಇದನ್ನು ಗಂಭಿರವಾಗಿ ಪರಿಗಣಿಸಿದ್ದರೆ ಅವರನ್ನೆಲ್ಲ ರಕ್ಷಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ನಾವು ಕೆಲವು ಸ್ಥಳೀಯರ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಅವರು ಹೇಳಿರುವ ಪ್ರಕಾರ ಈ ಸ್ಥಳದಲ್ಲಿ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಬದುಕಿ ಬರುವ ಯಾವ ಅವಕಾಶವೂ ಇಲ್ಲ ಎಂದು ಸ್ಥಳೀಯರೇ ನನಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

Meghalaya: Very sure most miners have died: Congress MP

ಗಣಿಯೊಳಗೆ ಬಿಲದಂಥ ಪ್ರದೇಶವಿದ್ದು, ಅವರೆಲ್ಲರೂ ಅಲ್ಲಿಯೇ ಸಿಲುಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಿ, ರಕ್ಷಣಾ ಕಾರ್ಯ ನಡೆಸಲಾಗುತ್ತಿತ್ತಯ. ಈ ಆಳ ಪ್ರದೇಶದಲ್ಲಿ ನೀರು ಸಹ ತುಂಬಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ನೀರನ್ನು ಮೇಲಕ್ಕೆತ್ತುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಯಾರದೂ ಕುರುಹು ದೊರೆತಿಲ್ಲದ ಕಾರಣ ಎಲ್ಲರೂ ಮೃತರಾಗಿರಬಹುದು ಎಂದು ಅಂದಾಜಿಸಲಾಗಿದೆ.

ಗಣಿಯ ಯಾವುದೇ ನಕ್ಷೆ ಇಲ್ಲದ ಕಾರಣ, ಇವರೆಲ್ಲ ಎಲ್ಲಿರಬಹದು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಮೇಘಾಲಯದಲ್ಲಿ ಇಲಿಯ ಬಿಲದಂಥ ಈ ಗಣಿಗಳು ಸರ್ವೇಸಾಮಾನ್ಯವಾಗಿದ್ದು, ಇದನ್ನು ಸ್ಥಳೀಯರೇ ಅಗೆದು ಮಾಡಿರುವುದರಿಂದ ಸಾಕಷ್ಟು ಅಪಾಯಕಾರಿಯೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+