ಕಲ್ಲು ಗಣಿಯೊಳಗೆ ಹಠಾತ್‌ ಪ್ರವಾಹ, 13 ಕಾರ್ಮಿಕರು ಸತ್ತಿರುವ ಶಂಕೆ

ಶಿಲ್ಲಾಂಗ್, ಡಿಸೆಂಬರ್ 14: ಮೆಘಾಲಯ ರಾಜ್ಯದ ಈಸ್ಟ್‌ ಜೈನ್‌ಟಿಯಾ ಹಿಲ್ಸ್‌ ಎಂಬಲ್ಲಿ ಕಲ್ಲು ಗಣಿಗಾರಿಕೆ ಸುರಂಗದೊಳಕ್ಕೆ ಪ್ರವಾಹ ಒಳನುಗ್ಗಿದ ಕಾರಣ 13 ಜನ ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಗಣಿಯಲ್ಲಿ ಇನ್ನೂ ಹಲವು ಕಾರ್ಮಿಕರಿದ್ದು, ಬದುಕಿರಬಹುದಾದ ಕಾರ್ಮಿಕರ ರಕ್ಷಣೆಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಪಂಪ್‌ಗಳ ಮೂಲಕ ಸುರಂಗದೊಳಗಿನ ನೀರನ್ನು ಹೊರಕ್ಕೆ ಅಟ್ಟಲಾಗುತ್ತಿದೆ.

ಬುಧವಾರ ರಾತ್ರಿಯೇ ಘಟನೆ ನಡೆದಿದೆ. ಆದರೆ ಘಟನೆ ನಿನ್ನೆ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ಇದೊಂದು ಅಕ್ರಮ ಕಲ್ಲು ಗಣಿಗಾರಿಕೆ ಸುರಂಗವಾಗಿತ್ತು ಎನ್ನಲಾಗಿದೆ.

Meghalaya: sudden flood in coal mine 13 miners feared dead

ದೊಡ್ಡ ಬಂಡೆಯೊಂದಕ್ಕೆ ರಂಧ್ರ ಕೊರೆಯುವಾಗ ಹಠಾತ್ ನೀರು ನುಗ್ಗಿ ಗಣಿ ಪೂರಾ ಜಲದಿಂದ ಆವೃತ್ತವಾಗಿದೆ. ಬಂಡೆ ಕೊರೆಯುವಲ್ಲಿ 13 ಜನ ಕಾರ್ಮಿಕರು ನಿರತರಾಗಿದ್ದರು ಎನ್ನಲಾಗಿದ್ದು, ಅಷ್ಟೂ ಮಂದಿ ಅಸುನೀಗಿದ್ದಾರೆ ಎಂಬ ಶಂಕೆ ಇದೆ. ಗಣಿಯಲ್ಲಿ ಇನ್ನೂ ಕೆಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

2012ರಲ್ಲಿ ಸೌತ್ ಗ್ಯಾರೋ ಹಿಲ್ಸ್‍ನ ನಂಗಲ್‍ಬಿಬ್ರಾ ಪ್ರದೇಶದ ಬಳಿ ಅಕ್ರಮ ಕಲ್ಲಿದ್ದಲು ಗಣಿಯೊಳಗೆ ಪ್ರವಾಹದಿಂದಾಗಿ 15 ಮಂದಿ ಜಲಸಮಾಧಿಯಾದರು. ಅವರ ಮೃತದೇಹಗಳು ಪತ್ತೆಯಾಗಲೇ ಇಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದ ಎಲ್ಲ ಅವೈಜ್ಞಾನಿಕ ಮತ್ತು ಅಸುರಕ್ಷಿತ ಕಲ್ಲಿದ್ದಲು ಗಣಿಗಳನ್ನು ನಿಷೇಧಿಸಿದೆ. ಆದರೂ ಸಹ ಅಲ್ಲಿಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+