ರಾಹುಲ್ ಬೆನ್ನ ಹಿಂದಿರುವ ಪಂಚ ಪ್ರಮುಖರು ಯಾರು?
ಬೆಂಗಳೂರು, ಡಿಸೆಂಬರ್ 18: ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ತಮ್ಮ ಸುತ್ತ ಮುತ್ತಲಿನ ಆಪ್ತ ಬಳಗವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಅವರ ಹಾದಿ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಐವರಿಗೆ ನೀಡಲಾಗಿದೆ.
19 ವರ್ಷಗಳ ಕಾಲ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದ 70 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಅವರು 47 ವರ್ಷದ ತಮ್ಮ ಪುತ್ರ ಮತ್ತು ಇಷ್ಟು ದಿನ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಲ್ಲಿದ್ದ ರಾಹುಲ್ ಗಾಂಧಿಯವರಿಗೆ ಪ್ರಮಾಣಪತ್ರ ನೀಡುವ ಮೂಲಕ ಡಿಸೆಂಬರ್ 16ರಂದು ಅಧಿಕಾರ ಹಸ್ತಾಂತರಿಸಿದರು. ರಾಹುಲ್ ಅವರು 87ನೇ ಅಧ್ಯಕ್ಷರಾದರು.

ಕಳೆದೊಂದು ದಶಕದಿಂದ ಅನೇಕ ಹಲವಾರು ಬಾರಿ ಅಧ್ಯಕ್ಷರಾಗಲು ರಾಹುಲ್ ಗೆ ಅವಕಾಶ ಕೂಡಿಬಂದಿತ್ತು. ಆದರೆ, 2014ರ ಲೋಕಸಭೆ ಚುನಾವಣೆ ನಂತರ ರಾಹುಲ್ ಅವರನ್ನು ಕಾಂಗ್ರೆಸ್ ಮುನ್ನಡೆಸುವಂತೆ ಒತ್ತಡ ಹೆಚ್ಚಾಗತೊಡಗಿತು.
ರಾಹುಲ್ ತಂಡಕ್ಕೆ ಮುಂದಿನ ಸವಾಲು:ಬಹುಶಃ ಏಪ್ರಿಲ್ ಅಥವಾ ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ನಂತರ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಮಧ್ಯಪ್ರದೇಶ, ಛತ್ತೀಸಘಡ ರಾಜಸ್ಥಾನದಲ್ಲಿಯೂ 2018ರಲ್ಲಿ ಚುನಾವಣೆ ನಡೆಯಬೇಕಿದೆ.
ರಾಹುಲ್ ಅವರ ಆಂತರಿಕ ಐವರು: ಕನಿಷ್ಕಾ ಸಿಂಗ್, ಕೆಬಿ ಬೈಜು, ಕೌಶಲ್ ವಿದ್ಯಾರ್ಥಿ, ಸಚಿನ್ ರಾವ್ ಹಾಗೂ ಅಲಂಕಾರ್ ಸವಾಯಿ.
ರಾಹುಲ್ ಆಪ್ತ ಯುವ ಪಡೆ: ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವೋರಾ, ಕೃಷ್ಣ ಭೈರೇಗೌಡ ಇದ್ದಾರೆ. ಮಂಡ್ಯದ ಮಾಜಿ ಸಂಸದೆ ದಿವ್ಯಾಸ್ಪಂದನ (ರಮ್ಯಾ) ಅವರು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಬ್ಬಿಸಿ, ಬಿಜೆಪಿ ವಿರುದ್ಧ ನೇರ ಹೋರಾಟ ನಡೆಸಿದ್ದು, ಇದು ಕರ್ನಾಟಕದಲ್ಲೂ ಭಾರಿ ಸಂಚಲನ ಮೂಡಿಸುತ್ತಿದೆ.











Click it and Unblock the Notifications