ಪಾಕಿಸ್ತಾನದಿಂದ ನಮಗೆ ಮುಕ್ತಿ ನೀಡಿ: ಕಾಶ್ಮೀರಿ ವಿದ್ಯಾರ್ಥಿಗಳ ಅಳಲು

Posted By:
Subscribe to Oneindia Kannada

ಜಂದಾಲಿ, ಆಗಸ್ಟ್ 19: ನಮಗೆ ಪಾಕಿಸ್ತಾನದಿಂದ ಬಿಡುಗಡೆ ನೀಡಿ ಎಂದು ಜಮ್ಮು-ಕಾಶ್ಮೀರ ನ್ಯಾಶನಲ್ ಸ್ಟೂಡೆಂಟ್ ಫೆಡರೇಶನ್(ಜೆಕೆಎನ್ ಎಸ್ ಎಫ್) ನ ವಿದ್ಯಾರ್ಥಿಗಳು ಕಾಶ್ಮೀರದ ಜಂದಾಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಪಾಕ್ ಆಕ್ರಮಿತ ಕಾಶೀರವನ್ನು ಪಾಕಿಸ್ತಾನಿ ಸರ್ಕಾರ ಭಯೋತ್ಪಾದನೆಯ ತವರನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Massive rally in Kashimr demanding freedom from pakistan

'ನಮಗೆ ಈ ಗುಲಾಮಗಿರಿಯಿಂದ ಮುಕ್ತಿಬೇಕಿದೆ. ನಮ್ಮ ಸುಂದರವಾದ ರಾಜ್ಯ ಪಾಕಿಸ್ತಾನದ ಸಹಾಯವಿಲ್ಲದೆ ಬೆಳೆಯಬಲ್ಲದು. ನಮಗೆ ಸಾಕಷ್ಟು ಪ್ರತಿಭೆಯಿದೆ, ಸಂಪನ್ಮೂಲವಿದೆ. ನಾವು ಯಾರಿಗೂ ಹೆದರುವ ಅಗತ್ಯವಿಲ್ಲ, ನಾವೆಂದೂ ಪಾಕಿಸ್ತಾನದ ಭಾಗವಾಗಲು ಇಷ್ಟಪಡುವುದಿಲ್ಲ' ಎಂದು ಜೆಕೆಎನ್ ಎಸ್ ಎಫ್ ಮುಖ್ಯಸ್ಥೆ ಲಿಯಾಖತ್ ಖಾನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Jammu anad Kashmir studnets federation organised a massive rally in Jandali, in Kashmi. where youths of Pak occupied Kashmir protest to demand freedom from pakistan, and blame pakistan for converting Kashmir into terror land.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ