ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಹಾಕಿ, ಬೂಸ್ಟರ್ ಡೋಸ್ ತೆಗೆದುಕೊಳ್ಳಿ: ಮತ್ತೆ ಹೆಚ್ಚುತ್ತಿರುವ ಕೋವಿಡ್‌ ಬಗ್ಗೆ ಎಚ್ಚರಿಸಿದ ನೀತಿ ಆಯೋಗ

|
Google Oneindia Kannada News

ನವದೆಹಲಿ, ಡಿಸೆಂಬರ್‌ 21: ಜಗತ್ತಿನಾದ್ಯಂತ ಕೋವಿಡ್‌ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಇದು ಭಾರತವನ್ನೂ ಆತಂಕಕ್ಕೆ ದೂಡಿದೆ. ಈ ವಿಚಾರವಾಗಿ ನೀತಿ ಆಯೋಗ ಜನರಿಗೆ ಎಚ್ಚರಿಕೆ ನೀಡಿದೆ.

ಇಂದು ಮಾಧ್ಯಮ ಗೋಷ್ಠಿ ನಡೆಸಿದ ನೀತಿ ಆಯೋಗದ(ಆರೋಗ್ಯ) ಸದಸ್ಯ, ಡಾ.ವಿ.ಕೆ.ಪೌಲ್ ಅವರು, ಮಾಸ್ಕ್ ಧರಿಸಲು ಹಾಗೂ ಕೋವಿಡ್‌ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ.

ಭಾರತ-ಚೀನಾ ಗಡಿ ಕುರಿತು ಚರ್ಚೆ ನಡೆಸುವಂತೆ ಪಟ್ಟು: ಸಂಸತ್‌ನಿಂದ ಹೊರನಡೆದ ಪ್ರತಿಪಕ್ಷ ನಾಯಕರು ಭಾರತ-ಚೀನಾ ಗಡಿ ಕುರಿತು ಚರ್ಚೆ ನಡೆಸುವಂತೆ ಪಟ್ಟು: ಸಂಸತ್‌ನಿಂದ ಹೊರನಡೆದ ಪ್ರತಿಪಕ್ಷ ನಾಯಕರು

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 27-28 ರಷ್ಟು ಜನರು ಮಾತ್ರ ಬೂಸ್ಟರ್‌ ಡೋಸ್‌ ಅನ್ನು ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘Mask up, take booster dose’: VK Pauls appeal amid China Covid surge

ಜನನಿಬಿಡ ಸ್ಥಳಗಳಲ್ಲಿ ಓಡಾಡುವವರು ಮಾಸ್ಕ್‌ ಧರಿಸಿಕೊಳ್ಳಲು ಹಾಗೂ ಕೋವಿಡ್‌ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ.

ಭಯಭೀತರಾಗಬೇಡಿ ಎಂದು ಜನರಿಗೆ ಒತ್ತಾಯಿಸಿದ್ದಾರೆ. ಇದುವರೆಗೆ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಜನಸಂದಣಿ ಇರುವ ಪ್ರದೇಶಗಳಲ್ಲಿ ಜನರು ಮಾಸ್ಕ್‌ ಧರಿಸಬೇಕು. ಕೊಮೊರ್ಬಿಡಿಟಿ ಹೊಂದಿರುವವರು ಅಥವಾ ವಯಸ್ಸಾದವರು ವಿಶೇಷವಾಗಿ ಇದನ್ನು ಅನುಸರಿಸಬೇಕು' ಎಂದು ಪೌಲ್‌ ಹೇಳಿದ್ದಾರೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪರಿಶೀಲನಾ ಸಭೆಯ ನಡೆಸಿದ್ದಾರೆ. ಆ ಬಳಿಕ ಪೌಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ.

‘Mask up, take booster dose’: VK Pauls appeal amid China Covid surge

'ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ನಾನು ಇಂದು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲು ಬಲಪಡಿಸಲು ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ' ಎಂದು ಮಾಂಡವಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆರೋಗ್ಯ ಕಾರ್ಯದರ್ಶಿಗಳು, ಔಷಧೀಯ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಆಯುಷ್ ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿದ್ದರು.

ಜಪಾನ್, ಯುಎಸ್, ರಿಪಬ್ಲಿಕ್ ಆಫ್ ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ತಿಳಿಸಿದೆ.

ಚೀನಾದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಿವೆ ಎಂದು ವರದಿಯಾಗಿದೆ. ಈ ಚಳಿಗಾಲದಲ್ಲಿ ಚೀನಾ ದೇಶದಲ್ಲಿ ಮೂರು ಕೋವಿಡ್‌ ಅಲೆಗಳು ಸಕ್ರಿಯವಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್‌ ಸಾಂಕ್ರಾಮಿಕವು ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಆ ನಂತರ, ಜಗತ್ತಿನಾದ್ಯಂತ ಹರಡಿ ದೊಡ್ಡ ದುರಂತವನ್ನೇ ಸೃಷ್ಟಿ ಮಾಡಿತ್ತು. ಭಾರತದಲ್ಲಿಯೂ ಲಕ್ಷಾಂತರ ಜನರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದರು.

English summary
There has been a rise in the number of Covid cases across the globe. This has also worried India. Niti Aayog has warned people about this issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X