ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ಟಿಕೆಟ್: ಕೊವಿಡ್-19 ಲಸಿಕೆ ಪಡೆಯಲು ಇಂಗ್ಲೆಂಡಿನತ್ತ ಭಾರತೀಯರು!

|
Google Oneindia Kannada News

ನವದೆಹಲಿ, ಡಿಸೆಂಬರ್,03: ವಿಶ್ವದ ಮೊದಲ ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ವಿವಿಧ ರಾಷ್ಟ್ರಗಳಿಂದ ಪ್ರಜೆಗಳು ಇಂಗ್ಲೆಂಡ್ ನತ್ತ ಪ್ರಯಾಣ ಶುರು ಮಾಡಿದ್ದಾರೆ. ಇದಕ್ಕೆ ಭಾರತೀಯರು ಸಹ ಹೊರತಾಗಿಲ್ಲ.

ಭಾರತದಿಂದ ಹಲವು ಮಂದಿ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದಕ್ಕಾಗಿ ಇಂಗ್ಲೆಂಡಿಗೆ ತೆರಳಲು ಮುಂದಾಗಿದ್ದಾರೆ. ಅದಕ್ಕಾಗಿ ಇಂಗ್ಲೆಂಡಿಗೆ ತೆರಳಲು ಯಾವ ರೀತಿ ಟ್ರಾವೆಲ್ ಪ್ಯಾಕೇಜ್ ಗಳಿವೆ ಎಂಬುದರ ಬಗ್ಗೆ ಟ್ರಾವೆಲ್ ಏಜೆಂಟ್ ಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುಕೆಗೆ ಪ್ರಯಾಣ ಬೆಳೆಸಲು ಬಯಸುವ ಭಾರತೀಯರಿಗೆ ಟ್ರಾವೆಲ್ ಏಜೆನ್ಸಿಗಳು ಕೂಡಾ ವಿಶೇಷ ಪ್ಯಾಕೇಜ್ ಘೋಷಿಸುವ ತಯಾರಿಯಲ್ಲಿವೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ? ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

ಬುಧವಾರವಷ್ಟೇ ಜಗತ್ತಿನ ಮೊದಲ ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಸರ್ಕಾರವು ಅನುಮೋದನೆ ನೀಡಿತ್ತು. ಜರ್ಮನ್ ಫಾರ್ಮಾಸೆಂಟಿಕಲ್ ಕಂಪನಿ ಆಗಿರುವ ಬಯೋನೆಟೆಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಭಾಗಿತ್ವದ ಫೈಜರ್ ಕಂಪನಿ ಸಂಶೋಧಿಸಿರುವ ಕೊವಿಡ್-19 ಲಸಿಕೆ ಬಳಸಲು ಸಮ್ಮತಿಸಿತ್ತು. ಇದರ ಬೆನ್ನಲ್ಲೇ ಲಸಿಕೆ ಪಡೆದುಕೊಳ್ಳಲು ಭಾರತೀಯರು ಇಂಗ್ಲೆಂಡಿನತ್ತ ಮುಖ ಮಾಡುತ್ತಿದ್ದಾರೆ.

ಇಂಗ್ಲೆಂಡ್ ಪ್ರಯಾಣಿಸಲು ವಿಶೇಷ ಪ್ಯಾಕೇಜ್ ಘೋಷಣೆ

ಇಂಗ್ಲೆಂಡ್ ಪ್ರಯಾಣಿಸಲು ವಿಶೇಷ ಪ್ಯಾಕೇಜ್ ಘೋಷಣೆ

ಕೊರೊನಾವೈರಸ್ ಸೋಂಕಿಗೆ ಲಸಿಕೆ ಪಡೆದುಕೊಳ್ಳಲು ಇಂಗ್ಲೆಂಡಿಗೆ ತೆರಳುವ ಪ್ರಯಾಣಿಕರನ್ನು ಸೆಳೆಯಲು ಟ್ರಾವೆಲ್ ಏಜೆನ್ಸಿಗಳು ವಿಶೇಷ ಪ್ಯಾಕೇಜ್ ಘೋಷಿಸುತ್ತಿವೆ. ಈ ಪೈಕಿ ಒಂದು ಟ್ರಾವೆಲ್ ಏಜೆನ್ಸಿಯು ಭಾರತೀಯರಿಗಾಗಿ ಮೂರು ದಿನಗಳ ಇಂಗ್ಲೆಂಡ್ ಪ್ರವಾಸದ ಪ್ಯಾಕೇಜ್ ಘೋಷಿಸಿದೆ. ಮುಂದಿನ ವಾರದಿಂದಲೇ ಈ ಪ್ಯಾಕೇಜ್ ಜಾರಿಗೆ ಬರಲಿದ್ದು, ಮೂರು ದಿನಗಳ ಪ್ರಯಾಣದ ಮುಖ್ಯ ಉದ್ದೇಶವೇ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದಕ್ಕಾಗಿದೆ.

ಇಂಗ್ಲೆಂಡಿಗೆ ಪ್ರಯಾಣಿಸುವ ಬಗ್ಗೆ ಏಜೆನ್ಸಿಗಳಲ್ಲಿ ವಿಚಾರಣೆ

ಇಂಗ್ಲೆಂಡಿಗೆ ಪ್ರಯಾಣಿಸುವ ಬಗ್ಗೆ ಏಜೆನ್ಸಿಗಳಲ್ಲಿ ವಿಚಾರಣೆ

ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಅನುಮೋದನೆ ನೀಡಿದ ಬೆನ್ನಲ್ಲೇ ಇಂಗ್ಲೆಂಡಿಗೆ ಪ್ರಯಾಣಿಸುವುದು ಹೇಗೆ, ಎಷ್ಟು ದಿನ ಬೇಕಾಗುತ್ತದೆ, ಎಷ್ಟು ವೆಚ್ಚವಾಗುತ್ತದೆ ಎಂಬ ಇತ್ಯಾದಿ ಮಾಹಿತಿಗಳನ್ನು ಹಲವು ಪ್ರಯಾಣಿಕರು ವಿಚಾರಿಸುತ್ತಿದ್ದಾರೆ ಎಂದು ಮುಂಬೈ ಮೂಲದ ಟ್ರಾವೆಲ್ ಏಜೆನ್ಸಿಯ ಮಾಲೀಕರೊಬ್ಬರು ತಿಳಿಸಿದ್ದಾರೆ. ಕೊವಿಡ್-19 ಲಸಿಕೆ ಪಡೆದುಕೊಂಡು ವಾಪಸ್ಸಾಗುವ ಬಗ್ಗೆ ಟ್ರಾವೆಲ್ ಏಜೆನ್ಸಿಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. "ಆದರೆ ಭಾರತದಲ್ಲಿಯೇ ಇನ್ನೇನು ಕೊರೊನಾವೈರಸ್ ಸೋಂಕಿಗೆ ಲಸಿಕೆ ಬಿಡುಗಡೆಯಾಗುತ್ತದೆ. ಭಾರತೀಯರು ಹೋಗಿ ಇಂಗ್ಲೆಂಡಿನಲ್ಲಿ ಏಕೆ ಲಸಿಕೆ ಪಡೆದುಕೊಳ್ಳಬೇಕು ಎಂದು ನಾನು ಅವರನ್ನು ಪ್ರಶ್ನಿಸಿದೆ. ಇಂಗ್ಲೆಂಡಿನಲ್ಲೂ ಕೂಡಾ ಮೊದಲ ಹಂತದಲ್ಲಿ ವೃದ್ಧರು, ವೈದ್ಯಕೀಯ ಸಿಬ್ಬಂದಿ ಆರೋಗ್ಯ ಕಾರ್ಯಕರ್ತರು ಮತ್ತು ಕೊವಿಡ್-19 ಸೋಂಕಿನಿಂದ ಹೆಚ್ಚು ಅಪಾಯ ಇರುವವರಿಗೆ ಮೊದಲು ಲಸಿಕೆ ನೀಡಬೇಕಿದೆ ಅಂತಾ ತಿಳಿಸಿಕೊಟ್ಟಿರುವುದಾಗಿ" ಟ್ರಾವೆಲ್ ಏಜೆನ್ಸಿ ಮಾಲೀಕ ಹೇಳಿದ್ದಾರೆ.

ಲಸಿಕೆ ಪಡೆಯಲು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ಸಂಗ್ರಹ

ಲಸಿಕೆ ಪಡೆಯಲು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ಸಂಗ್ರಹ

ಇಂಗ್ಲೆಂಡ್ ವೀಸಾ ಹೊಂದಿರುವ ಭಾರತೀಯರು ಲಂಡನ್ ಗೆ ಪ್ರಯಾಣಿಸುವ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದು ಖಾಸಗಿ ಟ್ರಾವೆಲ್ ಕಂಪನಿಯ ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಎಂಬುವವರು ಸ್ಪಷ್ಟನೆ ನೀಡಿದ್ದಾರೆ. ಕೊವಿಡ್-19 ಲಸಿಕೆ ಪಡೆದುಕೊಳ್ಳುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಕ್ವಾರೆಂಟೈನ್ ನಲ್ಲಿ ಇರಿಸಬೇಕಾ. ಇಂಗ್ಲೆಂಡ್ ವೀಸಾ ಹೊಂದಿರುವ ಪ್ರತಿಯೊಬ್ಬ ಭಾರತೀಯರಿಗೆ ಲಸಿಕೆ ನೀಡಲಾಗುತ್ತದೆಯೇ ಎನ್ನುವ ಬಗ್ಗೆ ಇಂಗ್ಲೆಂಡ್ ಸರ್ಕಾರದಿಂದ ಸ್ಪಷ್ಟ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಹೋಟೆಲ್, ಏರ್ ಲೈನ್ಸ್, ಆಸ್ಪತ್ರೆಗಳೊಂದಿಗೆ ಒಪ್ಪಂದ

ಹೋಟೆಲ್, ಏರ್ ಲೈನ್ಸ್, ಆಸ್ಪತ್ರೆಗಳೊಂದಿಗೆ ಒಪ್ಪಂದ

ಕೊರೊನಾವೈರಸ್ ಲಸಿಕೆ ಪಡೆಯುವುದಕ್ಕಾಗಿ ಇಂಗ್ಲೆಂಡಿಗೆ ತೆರಳುವ ಭಾರತೀಯರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ನಿಟ್ಟಿನಲ್ಲಿ ಕಂಪನಿಯು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇಂಗ್ಲೆಂಡಿಗೆ ತೆರಳುವ ವಿಮಾನಯಾನ, ಇಂಗ್ಲೆಂಡಿನ ಹೋಟೆಲ್, ಇಂಗ್ಲೆಂಡಿನ ಆಸ್ಪತ್ರೆಗಳ ಜೊತೆಗೆ ಒಪ್ಪಂದದ ಮಾತುಕತೆ ನಡೆಸಲಾಗುತ್ತಿದೆ. ಈ ಒಪ್ಪಂದಗಳೆಲ್ಲ ಮುಗಿದ ನಂತರದಲ್ಲಿ ಪ್ರಯಾಣಿಕರಿಗೆ ಒಂದು ಪ್ರಯಾಣದ ಪ್ಯಾಕೇಜ್ ಮತ್ತು ಅದರ ಮೊತ್ತವನ್ನು ನಿಗದಿತವಾಗಿ ಘೋಷಿಸಲಾಗುತ್ತದೆ ಎಂದು ಟ್ರಾವೆಲ್ ಏಜೆನ್ಸಿಯ ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಹೇಳಿದ್ದಾರೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada
ಇಂಗ್ಲೆಂಡಿನಲ್ಲಿ ಡಿಸೆಂಬರ್.15ರಿಂದ ಹೊಸ ನಿಯಮ ಜಾರಿ

ಇಂಗ್ಲೆಂಡಿನಲ್ಲಿ ಡಿಸೆಂಬರ್.15ರಿಂದ ಹೊಸ ನಿಯಮ ಜಾರಿ

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಡಿಸೆಂಬರ್.15ರಿಂದ ಹೊಸ ನಿಯಮಗಳನ್ನು ಜಾರಿಗೊಳಿಸಿ ಇಂಗ್ಲೆಂಡ್ ಸರ್ಕಾರವು ಆದೇಶಿಸಿದೆ. ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬರು ಐದು ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿ ಇರಬೇಕು. ಆರನೇ ದಿನ ವ್ಯಕ್ತಿಯನ್ನು ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೊವಿಡ್-19 ಸೋಂಕು ನೆಗೆಟಿವ್ ವರದಿ ಬಂದ ನಂತರವಷ್ಟೇ ಸಾರ್ವಜನಿಕವಾಗಿ ಸಂಚರಿಸಲು ಅನುಮತಿ ನೀಡಲಾಗುತ್ತದೆ.

English summary
Many Indians Keen On Going To UK To Get Covid-19 Vaccine: Travel Agents Receive Enquire. Read Here To Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X