ಮೋದಿ ಸಂಪುಟದಲ್ಲಿ ಸ್ಥಾನ ವಂಚಿತರಾದ ಬಿಜೆಪಿ ಪ್ರಮುಖರು

Recommended Video

      ಈ ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ ಸಂಪುಟದಲ್ಲಿ ಅವಕಾಶ ಇಲ್ಲ | oneindia

      ನವದೆಹಲಿ, ಮೇ 31: ನರೇಂದ್ರ ಮೋದಿ ಅವರು ನಿನ್ನೆಯಷ್ಟೆ ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ 58 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

      ಮೋದಿ ಅವರ ಕಳೆದ ಅವಧಿಯಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದ್ದ ಬಹುತೇಕ ಮಂದಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಕೆಲವು ಭಾರಿ ಖ್ಯಾತ ಮುಖಂಡರು ಈ ಬಾರಿ ಸಂಪುಟ ಸೇರುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

      ನಿನ್ನೆ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ 16 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಹಳೆಬರನ್ನು ಸರಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಆದರೆ ಯಾರಿಗೆ ಅವಕಾಶ ನಿರಾಕರಿಸಲಾಗಿದೆ. ಇಲ್ಲಿದೆ ಪಟ್ಟಿ.

      ಸಂಪುಟದಿಂದ ಹೊರಗುಳಿದ ಅರುಣ್ ಜೇಟ್ಲಿ

      ಸಂಪುಟದಿಂದ ಹೊರಗುಳಿದ ಅರುಣ್ ಜೇಟ್ಲಿ

      ಕಳೆದ ಬಾರಿ ವಿತ್ತ ಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದ ಅರುಣ್ ಜೇಟ್ಲಿ ಅವರು, ತಾವೇ ಸಂಪುಟದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಮೋದಿ ಅವರು ಅವರ ಮನವೊಲಿಸುವ ಯತ್ನ ಮಾಡಿದರಾದರೂ ಅದು ಸಫಲವಾಗಲಿಲ್ಲ. ಹಾಗಾಗಿ ಈ ಬಾರಿ ಅರುಣ್ ಜೇಟ್ಲಿ ಮೋದಿ ಸಂಪುಟದಲ್ಲಿ ಇರುವುದಿಲ್ಲ.

      ಸುಷ್ಮಾ ಸ್ವರಾಜ್ ಕೂಡಾ ಇಲ್ಲ

      ಸುಷ್ಮಾ ಸ್ವರಾಜ್ ಕೂಡಾ ಇಲ್ಲ

      ಅಟಲ್ ಜೀ ಅವರ ಸಂಪುಟದಲ್ಲಿ ಸಚಿವೆಯಾಗಿ, ಕಳೆದ ಅವಧಿಯ ಮೋದಿ ಸಂಪುಟದಲ್ಲೂ ಅವರು ಅತ್ಯಂತ ಕ್ರಿಯಾಶೀಲವಾಗಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಈ ಬಾರಿ ಅವರು ಸಂಪುಟದಲ್ಲಿ ಇರುವುದಿಲ್ಲ. ಇದು ಅವರ ಸ್ವಂತ ನಿರ್ಧಾರವಾಗಿದೆ.

      ಉಮಾಭಾರತಿಗೆ ಸಂಪುಟದಲ್ಲಿ ಅವಕಾಶವಿಲ್ಲ

      ಉಮಾಭಾರತಿಗೆ ಸಂಪುಟದಲ್ಲಿ ಅವಕಾಶವಿಲ್ಲ

      ಉಮಾಭಾರತಿ ಅವರು ಬಿಜೆಪಿಯ ಪ್ರಮುಖ ಮುಖಂಡರಲ್ಲಿ ಒಬ್ಬರು ಅವರು ಕಳೆದ ಅವಧಿಯಲ್ಲಿ ಜಲ ಸಂಪನ್ಮೂಲ ಖಾತೆ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಅವರಿಗೆ ಈ ಬಾರಿ ಅವಕಾಶ ನೀಡಲಾಗಿಲ್ಲ. ಅವರ ಅತಿಯಾದ ಹಿಂದೂಪರ ನಡವಳಿಕೆಗಳಿಂದ ಅವರಿಗೆ ಮಂತ್ರಿ ಸ್ಥಾನ ತಪ್ಪಿದೆ ಎನ್ನಲಾಗುತ್ತಿದೆ.

      ಮನೇಕಾ ಗಾಂಧಿಗಿಲ್ಲ ಸಚಿವ ಸ್ಥಾನವಿಲ್ಲ

      ಮನೇಕಾ ಗಾಂಧಿಗಿಲ್ಲ ಸಚಿವ ಸ್ಥಾನವಿಲ್ಲ

      ಗಾಂಧಿ ಕುಟುಂಬದ ಕುಡಿ ಬಿಜೆಪಿ ಮಾಜಿ ಸಚಿವೆ ಮನೇಕಾ ಗಾಂಧಿ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ. ಕಳೆದ ಬಾರಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನಿರ್ವಹಿಸಿದ್ದರು. ಅವರಿಗೆ ಸಭಾಪತಿ ಸ್ಥಾನ ನೀಡುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ.

      ರಾಜವರ್ಧನ್ ಸಿಂಗ್ ರಾಥೋಡ್‌ಗೆ ಅವಕಾಶ ನಿರಾಕರಣೆ

      ರಾಜವರ್ಧನ್ ಸಿಂಗ್ ರಾಥೋಡ್‌ಗೆ ಅವಕಾಶ ನಿರಾಕರಣೆ

      ಕ್ರೀಡಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ರಾಜವರ್ಧನ್ ಸಿಂಗ್ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡಲಾಗಿಲ್ಲ. ಕಳೆದ ಬಾರಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದ ಅವರು ಭಾರಿ ಅಂತರದಿಂದ ವಿಜಯ ಸಾಧಿಸಿದ್ದರು, ಮೊದಲ ಬಾರಿಗೆ ಅವರಿಗೆ ಸಚಿವ ಸ್ಥಾನ ದೊರೆತಿತ್ತು, ಆದರೆ ಈ ಬಾರಿ ಅವರಿಗೆ ಅವಕಾಶ ದೊರೆತಿಲ್ಲ.

      ಸುರೇಶ್ ಪ್ರಭುಗೆ ಇಲ್ಲ ಅವಕಾಶ

      ಸುರೇಶ್ ಪ್ರಭುಗೆ ಇಲ್ಲ ಅವಕಾಶ

      ಸುರೇಶ್ ಪ್ರಭು ಅವರೂ ಸಹ ಬಿಜೆಪಿಯ ಹಿರಿಯ ಮುಖಂಡರು, ಶಿವಸೇನೆಯಿಂದ ರಾಜಕೀಯ ಪ್ರಾರಂಭಿಸಿದ್ದರೂ ಸಹ ನಂತರ ಬಿಜೆಪಿ ಸೇರಿ ಪಕ್ಷ ಸಂಘಟನೆ ಮಾಡಿದರು. ಕಳೆದ ಬಾರಿ ನಾಗರೀಕ ವಿಮಾನಯಾನ, ವಾಣಿಜ್ಯೋದ್ಯಮ ಖಾತೆಯನ್ನು ನಿರ್ವಹಿಸಿದ್ದರು. ಈ ಬಾರಿ ಇನ್ನೂ ಉತ್ತಮ ಖಾತೆಯನ್ನು ಅವರಿಗೆ ನೀಡುವ ನಿರೀಕ್ಷೆ ಇತ್ತು ಆದರೆ ನಿರೀಕ್ಷೆ ಹುಸಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+