ಮೋದಿ ಸಂಪುಟದ ಹೊಸ ಸಚಿವರ ಖಾತೆಗಳು
ನವದೆಹಲಿ, ನ.10 : ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ ಬೆನ್ನಲ್ಲೇ ಕೆಲವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರು ಖಾತೆಯನ್ನು ಕಳೆದುಕೊಂಡಿದ್ದು, ಕಾನೂನು ಖಾತೆ ನೀಡಲಾಗಿದೆ. ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ಜಿ.ಎಂ.ಸಿದ್ದೇಶ್ವರ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಜವಾಬ್ದಾರಿ ನೀಡಲಾಗಿದೆ.
ಭಾನುವಾರ ರಾತ್ರಿ ನೂತನ ಸಚಿವರಿಗೆ ಖಾತೆಗಳನ್ನು ನೀಡಿರುವ ಪ್ರಧಾನಿ ಮೋದಿ, ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಮೋದಿ ಅವರ ಆಪ್ತರಾದ ಸುರೇಶ್ ಪ್ರಭು ಅವರಿಗೆ ರೈಲ್ವೆ ಖಾತೆ ವಹಿಸಲಾಗಿದೆ. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ತೆಲುಗು ದೇಶಂನ ಅಶೋಕ್ ಗಜಪತಿರಾಜ್ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು. ಅವರೀಗ ಶಿವಸೇನಾ ಅನಂತಗೀತೆ ಅವರಿಗೆ ಕಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಚಿವರ ಖಾತೆ ವಿವರ ಇಲ್ಲಿದೆ
ಸಂಪುಟ ದರ್ಜೆ ಸಚಿವರು
* ಮನೋಹರ್ ಪಾರಿಕ್ಕರ್ - ರಕ್ಷಣೆ
* ಸುರೇಶ್ ಪ್ರಭು - ರೈಲ್ವೆ
* ಜೆ.ಪಿ.ನಡ್ಡಾ - ಆರೋಗ್ಯ
* ಚೌಧುರಿ ಬೀರೇಂದರ್ ಸಿಂಗ್ - ಗ್ರಾಮೀಣಾಭಿವೃದ್ಧಿ
ಸ್ವತಂತ್ರ ಖಾತೆ ಸಚಿವರು [ಹೊಸ ಸಚಿವರ ಪ್ರಮಾಣ ವಚನದ ಚಿತ್ರಗಳು]
* ಬಂಡಾರು ದತ್ತಾತ್ರೇಯ - ಕಾರ್ಮಿಕ
* ರಾಜೀವ್ ಪ್ರತಾಪ್ ರೂಡಿ - ಕೌಶಲ್ಯಾಭಿವೃದ್ಧಿ
* ಮಹೇಶ್ ಶರ್ಮಾ - ಸಂಸ್ಕೃತಿ, ಪ್ರವಾಸ
ಬದಲಾದ ಖಾತೆಗಳು
* ಡಿ.ವಿ.ಸದಾನಂದ ಗೌಡ - ಕಾನೂನು ಮತ್ತು ನ್ಯಾಯಾಂಗ
* ಅರುಣ್ ಜೇಟ್ಲಿ - ವಿತ್ತ, ವಾರ್ತಾ ಪ್ರಸಾರ
* ಹರ್ಷವರ್ಧನ್ - ವಿಜ್ಞಾನ-ತಂತ್ರಜ್ಞಾನ
* ರಾವ್ ಇಂದ್ರಜಿತ್ - ರಕ್ಷಣೆ (ರಾಜ್ಯ)
* ಜಿ.ಎಂ. ಸಿದ್ದೇಶ್ವರ - ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ (ರಾಜ್ಯ)
ರಾಜ್ಯಖಾತೆ ಸಚಿವರು
* ಮುಖ್ಯಾರ್ ಅಬ್ಬಾಸ್ ನಖ್ವಿ - ಅಲ್ಪಸಂಖ್ಯಾತ, ಸಂಸದೀಯ
* ರಾಮ ಕೃಪಾಲ್ ಯಾದವ್ - ಕುಡಿಯುವ ನೀರು
* ಹರಿಭಾಯಿ ಚೌಧುರಿ - ಗೃಹ
* ಸನ್ವರ್ ಲಾಲ್ ಜಾಟ್ - ನೀರಾವರಿ
* ಮೋಹನ್ ಭಾಯ್ ಕುಂದಾರಿಯಾ - ಕೃಷಿ
* ಗಿರಿರಾಜ್ ಸಿಂಗ್ - ಸಣ್ಣ ಕೈಗಾರಿಕೆ
* ಹನ್ಸರಾನ್ ಗಂಗಾರಾಮ್ ಅಹಿರ್ - ರಸಗೊಬ್ಬರ, ರಾಸಾಯನಿಕ
* ಕಠೇರಿಯಾ - ಶಿಕ್ಷಣ
* ವೈ.ಎಸ್.ಚೌಧುರಿ - ವಿಜ್ಞಾನ
* ರಾಜವರ್ಧನ್ ಸಿಂಗ್ ರಾಥೋಡ್ - ವಾರ್ತಾ
* ಬಾಬುಲ್ ಸುಪ್ರಿಯೋ - ನಗರಾಭಿವೃದ್ಧಿ
* ಜಯಂತ್ ಸಿನ್ಹಾ - ಹಣಕಾಸು
* ಸಾಧ್ವಿ ಜ್ಯೋತಿ - ಆಹಾರ ಸಂಸ್ಕರಣೆ
* ವಿಜಯ್ ಸಂಪ್ಲಾ - ಸಮಾಜ ಕಲ್ಯಾಣ












Click it and Unblock the Notifications