Mann Ki Baat 100 Episode: ರಾಜಕೀಯ ಭಾಷೆ ಬಳಸದೇ ಪ್ರಧಾನಿ ಜನರ ಧ್ವನಿಯಾಗಿದ್ದಾರೆ: HP ರಾಜ್ಯಪಾಲ
ನವದೆಹಲಿ, ಏಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ 100 ಸಂಚಿಕೆ ಪೂರೈಸಿದ್ದು, ಈ ಕಾರ್ಯಕ್ರಮವು ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಸಂತೋಷ ವ್ಯಕ್ತಪಡಿಸಿದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್ 100ನೇ ಸಂಚಿಕೆ'ಯನ್ನು ಶಿಮ್ಲಾದ ರಾಜಭವನದಲ್ಲಿ ಪ್ರದರ್ಶಿಸಲಾಯಿತು. ಈ ವೇಳೆ ಮನ್ ಕೀ ಬಾತ್ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿಯವರು ಹಿಮಾಚಲ ಪ್ರದೇಶದ ಅಥವಾ ದೇಶದ ಇತರ ಭಾಗಗಳಿಗೆ ಸಂಬಂಧಿಸಿದ ವಿಷಯ ಹೇಳಿದರೂ ಅದನ್ನು ಸರ್ವರು ಕುತೂಹಲದಿಂದ ಕೇಳುತ್ತಾರೆ. ಈ ಕಾರ್ಯಕ್ರಮ ಆರಂಭದಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ಜನರ ಧ್ವನಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.

100 ಸಂಚಿಕೆ ಪೂರೈಸಿದ ಈ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಯಾವುದೇ ರಾಜಕೀಯ ಭಾಷೆಯನ್ನು ಬಳಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ರಾಜಕೀಯ ಹೊರತಾಗಿ ಸಮಾಜದಲ್ಲಿ ಇದುವರೆಗೂ ಹೊರ ಬರದಂತಹ ವಿಶೇಷ ಸಾಧನೆ, ವಿಷಯ, ವ್ಯಕ್ತಿಯನ್ನು ಗುರುತಿಸುವಲ್ಲಿ ಅವರು ಕಾರ್ಯಕ್ರಮದ ಸಮಯ ಮೀಸಲಿಟ್ಟರು ಎಂದು ಹೇಳಿದರು.
ಇದು ಭಾರತದ ಹೆಮ್ಮೆಯ ಕ್ಷಣ
ಪ್ರಧಾನಮಂತ್ರಿಗಳು ಕಾರ್ಯಕ್ರಮ ಮೂಲಕ ಯಾವ ಪ್ರದೇಶಕ್ಕೆ ಪ್ರವಾಸ ಮಾಡಿದರೂ ಸಹ ಆ ಪ್ರದೇಶದ ಸಂಸ್ಕೃತಿಯನ್ನು ಅವರು ತಲುಪಿದ್ದಾರೆ. ಹಿಮಾಚಲ ಪ್ರದೇಶದಿಂದ ಡ್ರಗ್ಸ್ ನಿರ್ಮೂಲನೆ ಕುರಿತು, ಸಾವಯವ ಕೃಷಿ ಮತ್ತು ರಾಗಿ ಬಗ್ಗೆಯೂ ಅವರು ಮಾತನಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮನ್ ಕಿ ಬಾತ್ 100ನೇ ಸಂಚಿಕೆಯ ಪ್ರಸಾರವಾಗಿದೆ ಎಂದರೆ ನಮ್ಮ ದೇಶವು ಎಲ್ಲಿಯವರೆಗೆ ತಲುಪಿದೆ ಎಂದು ಊಹಿಸಬಹುದು. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮನ್ ಕಿ ಬಾತ್ ಸರಣಿಯ 95 ನೇ ಸಂಚಿಕೆಯಲ್ಲಿ ಪ್ರಧಾನಿ ಪ್ರಸ್ತಾಪಿಸಿದ್ದ ಹಿಮಾಚಲ ಪ್ರದೇಶದ ಸೋಲನ್ ನಿವಾಸಿ ವಿಪುಲ್ ಗೋಯಲ್ ಅವರು ಮನ್ ಕಿ ಬಾತ್ ಸರಣಿಯ 100 ನೇ ಸಂಚಿಕೆಯಲ್ಲಿ 100 ಅತಿಥಿಗಳಲ್ಲಿ ಒಬ್ಬರಾಗಿದ್ದರು.

100ನೇ ಸಂಚಿಕೆಯ ಅತಿಥಿ ಪ್ರತಿಕ್ರಿಯೆ
ಈ ಕುರಿತು ಮಾತನಾಡಿದ ವಿಪುಲ್ ಗೋಯಲ್, ಪ್ರಧಾನಿ ಮೋದಿಯವರು ನನ್ನ ಗುರುತಿಸಿ, ನನ್ನ ಪ್ರಸ್ತಾಪಿಸಿದ್ದರಿಂದ ಹಾಗೂ ಈ ಸಂಚಿಕೆಯಲ್ಲಿ ಅತಿಥಿಗಳಾಗಿ ಆಯ್ಕೆ ಮಾಡಿದ್ದಕ್ಕೆ ಖಷಿ ಇದೆ. ಇದಕ್ಕೂ ಮೊದಲು ಜನರ ನನ್ನನ್ನು ಗುರುತಿಸುತ್ತಿರಲಿಲ್ಲ. ಇದೀಗ ಎಲ್ಲೆಡೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ದೇಶಾದ್ಯಂತ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನೇರ ಪ್ರಸಾರವಾಯಿತು. 2014 ರ ಅಕ್ಟೋಬರ್ 3 ರಂದು ಪ್ರಾರಂಭವಾದ ಈ ಕಾರ್ಯಕ್ರಮವು ಮಹಿಳೆಯರು, ಯುವಕರು ಮತ್ತು ರೈತರು ಮತ್ತಿತರು ಅನೇಕ ಸಾಮಾಜಿಕ ಗುಂಪುಗಳಿಗೆ ಸಲಹೆಯಾಗಿ, ಆಧಾರವಾಗಿ ಶಕ್ತಿಯಾಗಿ ನಿಂತಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications