ಷರೀಫ್ ಯುದ್ಧ ಅಂದಿದ್ದಕ್ಕೆ ಗುದ್ದು ಕೊಟ್ಟ ಸಿಂಗ್
ನವದೆದಲಿ, ಡಿ. 5: ಕಾಶ್ಮೀರ ಹಂಚಿಕೆ ವಿವಾದ ಬಗೆ ಹರಿಯದಿದ್ದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಾಲ್ಕನೇ ಯುದ್ಧ ಅನಿವಾರ್ಯವಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ 'ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನಕ್ಕೆ ಭಾರತದ ಜೊತೆ ಯುದ್ಧದಲ್ಲಿ ಜಯಿಸಲು ಸಾದ್ಯವಿಲ್ಲ' ಎಂದು ಮಾತಿನ ಪೆಟ್ಟು ನೀಡಿದ್ದಾರೆ.
ಈ ನಡುವೆ ಭಾರತದ ಜೊತೆ ಪಾಕಿಸ್ತಾನ ನಾಲ್ಕನೇ ಯುದ್ಧ, ಕಾಶ್ಮೀರ ಸಮಸ್ಯೆ, ನವಾಜ್ ಷರೀಫ್ ಹೇಳಿಕೆಯನ್ನು ಉಲ್ಲೇಖಿಸಿ ಉಲ್ಲೇಖಿಸಿ 'ಡಾನ್' ದೈನಿಕ ಮಾಡಿರುವ ವರದಿಯನ್ನು ಪಾಕಿಸ್ತಾನ ಸರ್ಕಾರ ಅಲ್ಲಗೆಳೆದಿದೆ.
ಪಾಕ್ ಆಕ್ರಮಿತ ಕಾಶ್ಮೆರ ಮಂಡಳಿಯನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ತಾನು ಈ ರೀತಿ ಹೇಳಿರಲಿಲ್ಲ ಎಂದು ಪ್ರಧಾನಿ ನವಾಜ್ ಷರೀಫ್ ಕೂಡಾ ಸ್ಪಷ್ಟಪಡಿಸಿದ್ದಾರೆ. ಇದು ಆಧಾರರಹಿತ ವರದಿಯಾಗಿದ್ದು, ತಪ್ಪು ಹಾಗೂ ದುರುದ್ದೇಶದಿಂದ ಬಿತ್ತರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

'ಕಾಶ್ಮೀರವು ಉದ್ವಿಗ್ನತೆಯ ಕೇಂದ್ರ ಬಿಂದುವಾಗಿದೆ ಹಾಗೂ ಅದು ಎರಡು ಪರಮಾಣು ಶಕ್ತ ರಾಷ್ಟ್ರಗಳ ನಡುವಿನ ನಾಲ್ಕನೆಯ ಯುದ್ಧಕ್ಕೆ ಯಾವುದೇ ಕ್ಷಣದಲ್ಲಿ ಪ್ರಚೋದನೆ ನೀಡಬಹುದಾಗಿದೆ' ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ ಎಂದು 'ಡಾನ್' ದೈನಿಕ ವರದಿ ಮಾಡಿತ್ತು.
ಕಾಶ್ಮೀರ ವಿವಾದವು ಒಂದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಅದು ಯಾವುದೇ ಕ್ಷಣದಲ್ಲಿ ಭಾರತದೊಂದಿಗಿನ ಯುದ್ಧಕ್ಕೆ ಪ್ರಚೋದನೆಯಾಗಬಹುದು ಎಂಬ ಮಾಧ್ಯಮ ವರದಿಯು ಸರಿಯಾಗಿಲ್ಲ ಎಂದು ಪಾಕ್ ಸರ್ಕಾರ ಹೇಳಿದೆ.
'ಭಾರತ ಹಾಗೂ ಪಾಕ್ ನಡುವಿನ ಯಾವುದೇ ವಿವಾದವು ಶಾಂತಿಯುತ ವಾಗಿ ಬಗೆಹರಿಯಬೇಕೆಂಬುದು ಪ್ರಧಾನಿ ನವಾಝ್ ಶರೀಫರ ಅಭಿಪ್ರಾಯವಾಗಿದೆ' ಎಂದು ಪ್ರಧಾನಿ ಕಚೇರಿ ಹೊರಡಿಸಿರುವ ಹೇಳಿಕೆ ಸ್ಪಷ್ಟಪಡಿಸಿದೆ. ''ಕಾಶ್ಮೀರ ಸಂಘರ್ಷದ ಕೇಂದ್ರ ಬಿಂದುವಾಗಿದೆ ಮತ್ತು ಯಾವುದೇ ಸಮಯದಲ್ಲಿ ಅದು ಉಭಯ ರಾಷ್ಟ್ರಗಳ ನಡುವೆ ನಾಲ್ಕನೆಯ ಯುದ್ಧಕ್ಕೆ ಚಾಲನೆ ನೀಡಬಹುದಾಗಿದೆ''' ಎಂದು ಪ್ರಧಾನಿ ಯವರು ಹೇಳಿದ್ದಾರೆ ಎಂದು ಪ್ರಭಾವಿ 'ಡಾನ್' ದೈನಿಕ ವರದಿ ಮಾಡಿತ್ತು.
ಪಾಕ್ ಆಕ್ರಮಿತ ಕಾಶ್ಮೀರ ಮಂಡ ಳಿಯು ಭಾರತ-ಪಾಕ್ ಸಂಬಂಧಗಳ ಬಗ್ಗೆ ಚರ್ಚಿಸಿದೆಯಾದರೂ, ಕಾಶ್ಮೀರ ವಿವಾದವು ಸಮರಕ್ಕೆ ನಾಂದಿಯಾಗಲಿದೆ ಎಂಬಂತಹ ಯಾವುದೇ ಹೇಳಿಕೆಗಳನ್ನು ಅದು ಒಳಗೊಂಡಿರಲಿಲ್ಲ ಎಂದು ನವಾಜ್ ಷರೀಫರ ಕಚೇರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.












Click it and Unblock the Notifications