'ಮನೀಶ್ ಸಿಸೋಡಿಯಾ ಬಿಜೆಪಿ ಸೇರಿದರೆ ಇಂದೇ ಬಿಡುಗಡೆಯಾಗ್ತಾರೆ': ಅರವಿಂದ ಕೇಜ್ರಿವಾಲ್
"ಭ್ರಷ್ಟಾಚಾರ ವಿಷಯವಲ್ಲ. ಮಂತ್ರಿಗಳು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಉದ್ದೇಶವಾಗಿತ್ತು" ಎಂದು ಸಿಸೋಡಿಯಾ ಬಂಧನದ ನಂತರ ಮಾಧ್ಯಮದೊಂದಿಗಿನ ಸಂವಾದದಲ್ಲಿ ಕೇಜ್ರಿವಾಲ್ ಹೇಳಿದರು.
ನವದೆಹಲಿ ಮಾರ್ಚ್ 1: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮದ್ಯ ನೀತಿ ಹಗರಣ ನೆಪ ಮಾತ್ರ. ಮನೀಶ್ ಸಿಸೋಡಿಯಾ ಬಿಜೆಪಿಗೆ ಸೇರಿದರೆ ನಾಳೆಯೇ ಅವರು ಮುಕ್ತರಾಗುತ್ತಾರೆ ಎಂದು ಹೇಳಿದರು.
"ಇದು ಭ್ರಷ್ಟಾಚಾರ ವಿಷಯವಲ್ಲ. ಮಂತ್ರಿಗಳು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಉದ್ದೇಶವಾಗಿತ್ತು" ಎಂದು ಸಿಸೋಡಿಯಾ ಬಂಧನದ ನಂತರ ಮಾಧ್ಯಮದೊಂದಿಗಿನ ಸಂವಾದದಲ್ಲಿ ಕೇಜ್ರಿವಾಲ್ ಹೇಳಿದರು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಎಎಪಿ ಸರ್ಕಾರದ ಕೆಲಸವನ್ನು ತಡೆಯಲು ಸಿಸೋಡಿಯಾ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ಆಪಾದಿತ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರನ್ನು ಪ್ರಕರಣದಲ್ಲಿ ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ. ಅವರು ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ನಿರ್ವಹಿಸುತ್ತಿದ್ದ 18 ಖಾತೆಗಳನ್ನು ಉಳಿದ ಐದು ಸಚಿವರಲ್ಲಿ ಇಬ್ಬರ ನಡುವೆ ಹಂಚಿಕೆ ಮಾಡಲಾಗಿದೆ. "ಬಿಜೆಪಿ ಎಎಪಿಗೆ ಕೆಲಸದಲ್ಲಿ ಅಡ್ಡಿಯಾಗುತ್ತಿದೆ. ನಾವು ಪಂಜಾಬ್ ಗೆದ್ದಾಗಿನಿಂದ ಅವರು ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು.

ಮನೀಶ್ ಸಿಸೋಡಿಯಾ ಬಂಧನ
2021 - 22 ರ ಅಬಕಾರಿ ನೀತಿಯ ರಚನೆ, ಟೆಂಡರ್ ಪ್ರಯೋಜನಗಳನ್ನು ಖಾಸಗಿ ವ್ಯಕ್ತಿಗಳಿಗೆ ವಿಸ್ತರಿಸುವುದು ಮತ್ತು ಅನುಷ್ಠಾನದಲ್ಲಿ ಅಕ್ರಮಗಳ ಬಗೆಗೀನ ತನಿಖೆಗಾಗಿ ಉಪಮುಖ್ಯಮಂತ್ರಿ ಮತ್ತು ಉಸ್ತುವಾರಿ ಅಬಕಾರಿ ಸಚಿವ, ದೆಹಲಿಯ ಜಿಎನ್‌ಸಿಟಿಡಿ ಮತ್ತು ಇತರ 14 ಜನರ ವಿರುದ್ಧ ತ್ವರಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications