ಮಣಿಪುರ ಹಿಂಸಾಚಾರ: ಪಿಎಂ ಮೋದಿ ಹಳೆ ಟ್ವೀಟ್ ಕೆದಕಿ ಬಿಜೆಪಿ ವಿರುದ್ಧ ಆಪ್ ಸಂಸದ ರಾಘವ್ ಚಡ್ಡಾ ವಾಗ್ದಾಳಿ

ಇಂಫಾಲ, ಜುಲೈ. 24: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಮಣಿಪುರದ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಟ್ವೀಟ್ ಅನ್ನು ಉಲ್ಲೇಖಿಸುವ ಮೂಲಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 2017 ರಲ್ಲಿ ಮಣಿಪುರದ ಕುರಿತು ಟ್ವೀಟ್ ಮಾಡಿದ್ದರು. "ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದವರಿಗೆ ಮಣಿಪುರವನ್ನು ಆಳುವ ಹಕ್ಕಿಲ್ಲ". ಎಂದಿದ್ದರು. ಆಗ ಕಾಂಗ್ರೆಸ್ ಪಕ್ಷದ ಒಕ್ರಾಮ್ ಇಬೋಬಿ ಸಿಂಗ್ ಮಣಿಪುದಲ್ಲಿ ಮುಖ್ಯಮಂತ್ರಿಯಾಗಿದ್ದರು. ಇದೇ ಟ್ವೀಟ್ ಅನ್ನು ರಾಘವ್ ಚಡ್ಡಾ ಕೆದಕಿದ್ದಾರೆ.

Manipur violence: Raghav Chadha slams bjp govt by digging PM Modis old tweet

ಪಿಎಂ ಮೋದಿ ಅವರ ಹಲೆಯ ಟ್ವೀಟ್ ಅನ್ನು ಪ್ರಿಂಟ್ ತೆಗೆದು ಎಎಪಿ ಸಂಸದ ರಾಘವ್ ಚಡ್ಡಾ ಭಿತ್ತಿ ಫಲಕದ ರೀತಿ ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತೆಗೆದುಹಾಕಬೇಕು ಮತ್ತು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಮೇ 4 ರಂದು ಮಣಿಪುರದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿರುವ ಎರಡು ಸಮುದಾಯದಲ್ಲಿ ಒಂದು ಸಮುದಾಯಕ್ಕೆ ಸೇರಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೆಲವು ಪುರುಷರು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಬುಧವಾರ ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

Manipur violence: Raghav Chadha slams bjp govt by digging PM Modis old tweet

ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ವಿಪಕ್ಷ ನಾಯಕರು ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸುತ್ತಿದ್ದಾರೆ. ಮಣಿಪುರದ ಪರಿಸ್ಥಿತಿಯ ಬಗ್ಗೆ ಗುರುವಾರ ಮತ್ತು ಶುಕ್ರವಾರ ಸಂಸತ್ತಿನ ಮುಂಗಾರು ಅಧಿವೇಶದಲ್ಲಿ ಬೃಹತ್ ಘೋಷಣೆಗಳು ಮತ್ತು ಪ್ರತಿಭಟನೆಗಳು ನಡೆದಿವೆ. ಪ್ರತಿಪಕ್ಷಗಳು ಸದನಗಳಲ್ಲಿ ಪ್ರಧಾನಿ ಮೋದಿಯವರ ಚರ್ಚೆ ಮತ್ತು ಹೇಳಿಕೆಗೆ ಒತ್ತಾಯಿಸಿವೆ.

ಮಣಿಪುರದ ಬಗ್ಗೆ ಪ್ರಧಾನಿ ಮೋದಿಯವರ ಮೊದಲ ಹೇಳಿಕೆ

ಗುರುವಾರ ಸಂಸತ್ ಅಧಿವೇಶನದ ಮೊದಲು, ಮಣಿಪುರದ ಪರಿಸ್ಥಿತಿಯ ಕುರಿತು ತಮ್ಮ ಮೊದಲ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, "ಇದು ಯಾವುದೇ ಸಮಾಜಕ್ಕೆ ನಾಚಿಕೆಗೇಡಿನ ಘಟನೆ. ಇದನ್ನು ಯಾರು ಮಾಡಿದರು ಮತ್ತು ಯಾರು ಹೊಣೆಗಾರರು ಎಂಬುದು ಇನ್ನೊಂದು ವಿಷಯ ಆದರೆ ಇದು ನಮ್ಮ ದೇಶವನ್ನು ನಾಚಿಕೆಗೇಡು ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅದು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರವೇ ಆಗಿರಲಿ. ಮಹಿಳೆಯ ಗೌರವದ ವಿಷಯವು ಎಲ್ಲ ರಾಜಕೀಯಕ್ಕಿಂತ ದೊಡ್ಡದು" ಎಂದಿದ್ದರು.

Manipur violence: Raghav Chadha slams bjp govt by digging PM Modis old tweet

ಇನ್ನು, ಎಎಪಿ ಸಂಸದ ಸಂಜಯ್ ಸಿಂಗ್ ಅವರ ಅಮಾನತು ಕುರಿತು ಎಎಪಿ ಸಂಸದ ರಾಘವ್ ಚಡ್ಡಾ ಮಾತನಾಡಿ "ರಾಜ್ಯಸಭಾ ಅಧ್ಯಕ್ಷ ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸಿರುವುದು ಅತ್ಯಂತ ದುರದೃಷ್ಟಕರ. ಇದು ಸರಿಯಲ್ಲ, ಇದು ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿದೆ. ಸದನವನ್ನು ಮುಂದೂಡಿದ ನಂತರ ನಾವು ಸಭಾಪತಿಯವರ ಬಳಿಗೆ ಹೋಗಿ ಈ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದೆವು. ಬಿಎಸಿ ಸಭೆಯ ವೇಳೆಯೂ ನಮ್ಮ ಮಾತು ಕೇಳಿ ಬರದ ಕಾರಣ ಎಲ್ಲರೂ ಹೊರ ನಡೆದೆವು. ಅಧ್ಯಕ್ಷರು ಸಂಸದರ ಜತೆ ಮಾತನಾಡಬೇಕು ಮತ್ತು ಆರೋಗ್ಯಕರ ಚರ್ಚೆಗಳನ್ನು ಮಾಡಿಸಬೇಕು" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+