ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಂಡಿದ್ದಕ್ಕೆ ಶಾಲೆಗೇ ಬೆಂಕಿ!

|
Google Oneindia Kannada News

ಕಕ್ಚಿಂಗ್, ಏಪ್ರಿಲ್ 27: ಮಣಿಪುರದ ಅತ್ಯಂತ ಹಳೆಯ ಕ್ರಿಶ್ಚಿಯನ್ ಮಿಷನರಿ ಶಾಲೆಗಳಲ್ಲಿ ಒಂದಾದ ಸೇಂಟ್ ಜೋಸೆಫ್ ಹೈಯರ್ ಸೆಕೆಂಡರಿ ಸ್ಕೂಲ್‌ಗೆ ಕಿಡಿಗೇಡಿಗಳು ಶುಕ್ರವಾರ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ವಿದ್ಯಾರ್ಥಿಗಳಿಂದ ಹತ್ಯೆಯಾದ ಬಾಲಕನ ದೇಹ ಹೂಳಿದ ಶಾಲಾ ಆಡಳಿತವಿದ್ಯಾರ್ಥಿಗಳಿಂದ ಹತ್ಯೆಯಾದ ಬಾಲಕನ ದೇಹ ಹೂಳಿದ ಶಾಲಾ ಆಡಳಿತ

ಆರು ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡ ಬಳಿಕ ಈ ಘಟನೆ ನಡೆದಿದ್ದು, ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

manipur St. Joseph Higher Secondary School burnt disciplinary action against students

'ಒಟ್ಟು 10 ಕೊಠಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅವುಗಳಲ್ಲಿ ಎರಡು ಕೊಠಡಿಗಳಲ್ಲಿ ಮಹತ್ವದ ದಾಖಲೆಗಳು, ಕಡತಗಳು ಮತ್ತು ಸಲಕರಣೆಗಳು ಇದ್ದವು' ಎಂದು ಶಾಲೆಯ ಪ್ರಾಂಶುಪಾಲ ಫಾದರ್ ಡೊಮಿನಿಕ್ ಹೇಳಿದ್ದಾರೆ.

ಶಾಲೆಯಲ್ಲಿ ಸುಮಾರು 1,400 ವಿದ್ಯಾರ್ಥಿಗಳು ಓದುತ್ತಿದ್ದು, ವಿದ್ಯಾರ್ಥಿಗಳುಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರೊಬ್ಬರನ್ನು ಅವಮಾನಿಸಿದ್ದರು ಮತ್ತು ಶಾಲೆಯ ಘನತೆಗೆ ಧಕ್ಕೆ ತಂದಿದ್ದರು ಎಂದು ಅವರ ವಿರುದ್ಧ ಒಂದು ವಾರದ ಹಿಂದೆ ಶಿಸ್ತುಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ, ತರಗತಿಗೆ ಹಾಜರಾಗಲು ಅವರಿಗೆ ಅವಕಾಶ ನೀಡಲಾಗಿತ್ತು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ರೈತನ ಮಿತ್ರ ಯಾರು? ಎಂದು ಪ್ರಶ್ನೆ ಕೇಳಿದ ಶಿಕ್ಷಕನಿಗೆ ಅಮಾನತ್ತಿನ ಶಿಕ್ಷೆ! ರೈತನ ಮಿತ್ರ ಯಾರು? ಎಂದು ಪ್ರಶ್ನೆ ಕೇಳಿದ ಶಿಕ್ಷಕನಿಗೆ ಅಮಾನತ್ತಿನ ಶಿಕ್ಷೆ!

ಈ ದುಷ್ಕೃತ್ಯದಲ್ಲಿ ಸ್ಥಳೀಯ ಸಂಘಟನೆಯೊಂದರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

English summary
St. Joseph Higher Secondary School in Manipur was burnt on Friday after disciplinary action was taken against six students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X