ಮಣಿಪುರ: ಕುಕಿಗಳ ವಿರುದ್ಧ ಇಂಫಾಲ್ ಕಣಿವೆಯ ಬೀದಿಗಳಲ್ಲಿ ಮೈತೇಯಿ ಶಕ್ತಿ ಪ್ರದರ್ಶನ!
ಇಂಫಾಲ್, ಜುಲೈ. 30: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಶನಿವಾರ ಸಾವಿರಾರು ಮೈತೇಯಿ ಸಮುದಾಯದ ಜನರು ಬೀದಿಗಿಳಿದು "ಚಿನ್ ಕುಕಿ ನಾರ್ಕೋ ಭಯೋತ್ಪಾದಕರ" ವಿರುದ್ಧ ತಮ್ಮ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೈತೇಯಿಸ್ ಮತ್ತು ಕುಕಿಸ್ ನಡುವಿನ ಸುಮಾರು ಮೂರು ತಿಂಗಳಿಂದ ರಾಜ್ಯದಲ್ಲಿ ಹಿಂಸಾತ್ಮಕ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಈವರೆಗೆ ಸುಮಾರು 150 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
"ಚಿನ್-ಕುಕಿ ನಾರ್ಕೋ ಭಯೋತ್ಪಾದನೆ ವಿರುದ್ಧದ ಬೃಹತ್ ರ‍್ಯಾಲಿ" ಯನ್ನು ಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI) ಆಯೋಜಿಸಿತ್ತು. ಈ ಮೆರವಣಿಗೆ ಥಾವೋ ಮೈದಾನದಿಂದ ಪ್ರಾರಂಭವಾಗಿ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹಪ್ಟಾ ಕಾಂಗ್ಜೆಬುಂಗ್‌ನಲ್ಲಿ ಮುಕ್ತಾಯಗೊಂಡಿದೆ. ಅದಕ್ಕೂ ಮೊದಲು ನಗರದ ಸಂಪೂರ್ಣ ಎಲ್ಲಾ ರಸ್ತೆಗಳ ಮೂಲಕ ಹಾದುಹೋಗು, ಸಾರ್ವಜನಿಕ ಸಭೆ ನಡೆಸಿದೆ.

ಒಂದು ಲಕ್ಷಕ್ಕೂ ಹೆಚ್ಚು ಸಮುದಾಯದ ಜನರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂಫಾಲ್‌ನಲ್ಲಿ ನಡೆದ ಯಾವುದೇ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಪ್ರಮಾಣದ ಜನ ಸೇರಿದ್ದನ್ನು ನೋಡಿರಲಿಲ್ಲ ಎಂದು ಸ್ಥಳೀಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರದ ನಂತರ "ಚಿನ್-ಕುಕಿ ನಾರ್ಕೋ-ಭಯೋತ್ಪಾದನೆ" ಯ ಬೆದರಿಕೆಯ ವಿರುದ್ಧ ದನಿಯೆತ್ತಿದ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI), ರ‍್ಯಾಲಿಯನ್ನು ಆಯೋಜಿಸಿತು. ಮೆರವಣಿಯಲ್ಲಿ ಪ್ರತಿಭಟನಾಕಾರರು ಐದು ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಅದರಲ್ಲಿ ಈ ಹಿಂಸಾಚಾರ ಅಂತ್ಯವಾಗಬೇಕು ಎಂಬುದು ಸೇರಿದೆ.
ಪ್ರಸ್ತುತ ಸಂಘರ್ಷವನ್ನು ಕೊನೆಗೊಳಿಸಬೇಕು ಮತ್ತು ವಿದೇಶಿ "ಚಿನ್-ಕುಕಿ ನಾರ್ಕೋ-ಭಯೋತ್ಪಾದಕರ" ನಿರ್ಮೂಲನೆಯಾಗಬೇಕು. ಪ್ರತ್ಯೇಕ ಆಡಳಿತಕ್ಕಾಗಿ ಬೇಡಿಕೆಯಿಟ್ಟಿರುವ ಕುಕಿಗಳ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಅಥವಾ NRC ಅನುಷ್ಠಾನಕ್ಕೆ ಒತ್ತಾಯಿಸಿದ್ದಾರೆ. "NRC ಕಡ್ಡಾಯವಾಗಿ ಮಣಿಪುರದಲ್ಲಿ ಸಂಪೂರ್ಣವಾಗಿ ಜಾರಿಯಾಗಲಿ'' ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದಲ್ಲದೆ, ಮಣಿಪುರವನ್ನು ಉಳಿಸಲು ಕೆಲವು ಕ್ರಮ ಆಧಾರಿತ ನಿರ್ಣಯಗಳನ್ನು ಅಂಗೀಕರಿಸಲು ಆಗಸ್ಟ್ 5 ರೊಳಗೆ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಮೈತೇಯಿ ಸಮುದಾಯದ ಒತ್ತಾಯಿಸಿದೆ. ನಿಗದಿತ ಸಮಯಕ್ಕೆ ಅಧಿವೇಶನವನ್ನು ಕರೆಯದಿದ್ದರೆ, ಜನರ ನಿರ್ಣಯಗಳ ಪ್ರಕಾರ ತೀವ್ರ ಆಂದೋಲನವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications