16 ವರ್ಷದ ಉಪವಾಸ ಅಂತ್ಯಗೊಳಿಸಿದ ಉಕ್ಕಿನ ಮಹಿಳೆ ಶರ್ಮಿಳಾ

ಇಂಫಾಲ, ಆಗಸ್ಟ್, 09: ಹೋರಾಟದ ಹಾದಿಯಲ್ಲಿ 16 ವರ್ಷಗಳ ಉಪವಾಸದ ತಪಸ್ಸನ್ನು ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ ಇಂದು (ಆಗಸ್ಟ್ 9) ಅಂತ್ಯ ಮಾಡಿದ್ದಾರೆ. ರಾಜಕಾರಣದಲ್ಲಿ ತೊಡಗಿ ಜನರ ಸೇವೆ ಮಾಡುವ ಇಂಗಿತವನ್ನು ಶರ್ಮಿಳಾ ವ್ಯಕ್ತಪಡಿಸಿದ್ದಾರೆ.

ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಶರ್ಮಿಳಾ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ಶರ್ಮಿಳಾ ಸಾರ್ವಜನಿಕ ಬದುಕಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.[ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ ಯಾರು?]

Manipur: Irom Sharmila gets bail, yet to end fast

ನ್ಯಾಯಾಂಗ ಬಂಧನದಲ್ಲಿದ್ದ ಶರ್ಮಿಳಾ ಅವರಿಗೆ ಜಾಮೀನು ನೀಡಲಾಗಿದೆ. ಐರೋಮ್‌ ಶರ್ಮಿಳಾ 2000ನೇ ಇಸವಿಯಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. 44 ವರ್ಷದ ಶರ್ಮಿಳಾ ಇದೀಗ ಜನರ ಮುಂದೆ ಮತ್ತೊಂದು ರೂಪದಲ್ಲಿ ಬರಲಿದ್ದಾರೆ.[ಅಂತೂ ಉಕ್ಕಿನ ಮಹಿಳೆ ಶರ್ಮಿಳಾಗೆ ಸಿಕ್ಕಿತು ಜಯ]

16 ವರ್ಷಗಳಿಂದ ಉಪವಾಸ ಮಾಡುತ್ತಿರುವ ಶರ್ಮಿಳಾ ಇದೀಗ ಒಂದೆ ಬಾರಿಗೆ ಘನ ಆಹಾರ ಸೇವಿಸಲು ಸಾಧ್ಯವಿಲ್ಲ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆ ಮಾಡುತ್ತಾ ಮುಂದುವರಿಯಬೇಕಾಗುತ್ತದೆ ಎಂದು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+