ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ದಿನಾಂಕ ಬದಲಾವಣೆ ನಾಗಾ ಮಹಿಳೆಯರ ಆಗ್ರಹ

|
Google Oneindia Kannada News

ಇಂಫಾಲ, ಜನವರಿ 28: ಮಣಿಪುರದಲ್ಲಿ ವಿಧಾನಸಭೆ ಚುನಾವಣೆಗೆ ನಿಗದಿಯಂತೆ ನಡೆಸಲು ಆಯೋಗ ಸಿದ್ಧತೆ ನಡೆಸುತ್ತಿದೆ. ಈ ನಡುವೆ ನಾಗಾ ಮಹಿಳೆಯ ಒಕ್ಕೂಟ (NWU) ಮತದಾನದ ದಿನಾಂಕದ ಬಗ್ಗೆ ತಗಾದೆ ತೆಗೆದಿದೆ. ಮಣಿಪುರದಲ್ಲಿ ಮತದಾನದ ದಿನಾಂಕ ಬದಲಾವಣೆಗೆ ಆಗ್ರಹಿಸಿದೆ.

ಮಣಿಪುರದಲ್ಲಿ ಫೆಬ್ರವರಿ 27ರಂದು ಮತದಾನ ನಿಗದಿಯಾಗಿದೆ. ಆದರೆ, ಭಾನುವಾರದಂದು ಮತದಾನ ಮಾಡಲು ಕ್ರೈಸ್ತ ಸಮುದಾಯಕ್ಕೆ ಕಷ್ಟವಾಗಲಿದೆ ಎಂದು ನಾಗಾ ಮಹಿಳಾ ಸಂಘಟನೆ ವಾದ ಮಂಡಿಸಿದೆ. ಭಾನುವಾರದಂದು ಕ್ರೈಸ್ತರು ಭಾನುವಾರದ ಪ್ರಾರ್ಥನೆಗಾಗಿ ಚರ್ಚ್ ಗೆ ತೆರಳಬೇಕಾಗುತ್ತದೆ. ಹೀಗಾಗಿ, ಅಂದು ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗಲಿದೆ, ಈ ಬಗ್ಗೆ ಗಮನ ಹರಿಸಿ, ಬೇರೆ ದಿನದಂದು ಮತದಾನಕ್ಕೆ ಸೂಚಿಸಿ ಎಂದು ಚುನಾವಣಾ ಆಯೋಗಕ್ಕೆ ನಾಗಾ ಮಹಿಳೆಯರು ಪತ್ರ ಬರೆದಿದ್ದಾರೆ.

'ಚರ್ಚ್‌ಗೆ ಹೋಗಬೇಕು, ಮತದಾನ ದಿನಾಂಕ ಬದಲಾಯಿಸಿ''ಚರ್ಚ್‌ಗೆ ಹೋಗಬೇಕು, ಮತದಾನ ದಿನಾಂಕ ಬದಲಾಯಿಸಿ'

ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಮತದಾನವನ್ನು ಮತ್ತೊಂದು ದಿನಾಂಕಕ್ಕೆ ನಿಗದಿಪಡಿಸುವಂತೆ ಭಾರತದ ಚುನಾವಣಾ ಆಯೋಗವನ್ನು (EC) ಒತ್ತಾಯಿಸಿದೆ. ಮಣಿಪುರದ ಕ್ರೈಸ್ತ ಸಂಘಟನೆಯ ಎನ್ ಪಿ ಎಫ್ ಅಧ್ಯಕ್ಷ, ಅರಣ್ಯ ಮತ್ತು ಪರಿಸರ ಸಚಿವ ಅವಾಂಗ್ ಬೋ ನ್ಯೂಮಾಯಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಬುಡಕಟ್ಟು ವಿದ್ಯಾರ್ಥಿ ಸಂಘಟನೆ, ಕುಕಿ ಇಂಪಿ ಸಂಘಟನೆ ಕೂಡಾ ಇದೇ ರೀತಿ ಬೇಡಿಕೆ ಮುಂದಿಟ್ಟಿವೆ. ಆಯೋಗ ಈ ಬಗ್ಗೆ ಶೀಘ್ರವೇ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

Manipur assembly elections: Naga women’s union urges EC to change first polling date

ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 27ರಂದು 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸೈಕುಲ್, ಕಂಗ್ ಪೊಕ್ಪಿ, ಸೈತು, ತಿಪಾಯಿಮುಖ್, ಥಾಂಲೊನ್, ಹೆಂಗ್ಲೆಪ್, ಚುರಾಚಂದಾಪುರ್, ಸಾಯಿಕೋಟ್ ಹಾಗೂ ಸಿಂಘಾಟ್ ಕ್ಷೇತ್ರಗಳು ಗುಡ್ಡಗಾಡು ಪ್ರದೇಶದಲ್ಲಿದ್ದು ಈ ಪ್ರದೇಶದಲ್ಲಿ ಬಹುತೇಕ ಕ್ರೈಸ್ತ ಸಮುದಾಯದ ಮತದಾರರಿದ್ದಾರೆ. ಎರಡನೇ ಮತದಾನ ಮಾರ್ಚ್ 3 ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ.

ಮಣಿಪುರದ ಜನಸಂಖ್ಯೆಯ ಶೇಕಡಾ 43 ರಷ್ಟು ಬುಡಕಟ್ಟು ಜನಾಂಗದವರು ಮತ್ತು ಪ್ರಧಾನವಾಗಿ ಕ್ರಿಶ್ಚಿಯನ್ನರು ಎಂದು ವಿದ್ಯಾರ್ಥಿಗಳ ಒಕ್ಕೂಟ ಹೇಳಿದೆ. ಭಾನುವಾರದಂದು, "ವಿಶ್ರಾಂತಿ ಮತ್ತು ಆರಾಧನೆಯ ದಿನ", ಅವರು ತಪ್ಪದೇ ಚರ್ಚ್‌ಗೆ ಹೋಗುತ್ತಾರೆ.

ಭಾನುವಾರದ ಮತದಾನದ ದಿನಾಂಕವು ಮಣಿಪುರದ ಬುಡಕಟ್ಟು ಜನರು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಕಳವಳಕಾರಿ ವಿಷಯವಾಗಿದೆ ಎಂದು ಒಕ್ಕೂಟ ಹೇಳಿದೆ. ಚುನಾವಣಾ ಆಯೋಗವು ರಾಜ್ಯದ ಕ್ರೈಸ್ತ ಸಮುದಾಯದ ಆಧ್ಯಾತ್ಮಿಕ ಮೌಲ್ಯಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಮೆಚ್ಚುವ ಸಂವೇದನೆ ಮತ್ತು ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಮಾರ್ಚ್ 10 ರಂದು ಫಲಿತಾಂಶ ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆ. ಇವುಗಳಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ಎಬಿಪಿ ನ್ಯೂಸ್-ಸಿವೋಟರ್ ಒಪಿನಿಯನ್ ಪೋಲ್ ಪ್ರಕಾರ, ಮುಂಬರುವ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಕಟ ಸ್ಪರ್ಧೆ ಏರ್ಪಡಲಿದ್ದು, ಈ ಬಾರಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ ಎಂದು ಸಮೀಕ್ಷೆಯ ವರದಿಯಿಂದ ತಿಳಿದುಬಂದಿದೆ. ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆ ಪ್ರಕಾರ, 60 ಸ್ಥಾನಗಳ ಪೈಕಿ ಬಿಜೆಪಿಗೆ 23 ರಿಂದ 27 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡಲಿರುವ ಕಾಂಗ್ರೆಸ್, 22-26 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್ ಪಿಎಫ್ ಪಕ್ಷವು 2 ರಿಂದ 6 ಸ್ಥಾನ, ಇತರರು 5 ರಿಂದ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ.

English summary
Manipur assembly elections: Naga women’s union urges EC to change first polling date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X