ಮಣಿಪುರ ಚುನಾವಣೆ: ಮೊದಲ ಹಂತದಲ್ಲಿ ಶೇ.78.03ರಷ್ಟು ಮತದಾನ
ಮಣಿಪುರ, ಫೆಬ್ರವರಿ 28: ಮಣಿಪುರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಯಾವುದೇ ಪ್ರಮುಖ ಘಟನೆಗಳಿಲ್ಲದೆ ಸೋಮವಾರ ಮುಕ್ತಾಯಗೊಂಡಿದೆ. ಈ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳ 1,721 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಶಾನ್ಯ ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ 78.03ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇವಿಎಂ ಹಾನಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ರಾಜೇಶ್ ಅಗರವಾಲ್ ಹೇಳಿದ್ದಾರೆ.
ಇಂಫಾಲ್ ಪೂರ್ವದಲ್ಲಿ ಶೇ.76.64ರಷ್ಟು ಮತದಾನವಾಗಿದ್ದರೆ, ಇಂಫಾಲ್ ಪಶ್ಚಿಮದಲ್ಲಿ ಶೇ.82.19ರಷ್ಟು ಮತದಾನವಾಗಿದೆ. ಬಿಷ್ಣುಪುರದಲ್ಲಿ ಶೇ.73.44, ಚುರಾಚಂದಪುರದಲ್ಲಿ ಶೇ.74.45 ಮತ್ತು ಕಾಂಗ್‌ಪೋಕ್ಪಿಯಲ್ಲಿ ಶೇ.82.19 ಮತದಾನ ದಾಖಲಾಗಿದೆ.

ಸೈಕುಲ್, ಸೈತು, ಥನ್ಲೋನ್, ಹೆಂಗ್ಲೆಪ್ ಮತ್ತು ಸಿಂಘತ್ ಕ್ಷೇತ್ರಗಳ ವ್ಯಾಪ್ತಿಯ ಏಳು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಇವಿಎಂಗಳನ್ನು ಹಾನಿಗೊಳಿಸಿರುವ ಘಟನೆಗಳು ವರದಿಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ರಾಜೇಶ್ ಅಗರವಾಲ್ ಹೇಳಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಹಾನಿಗೊಳಗಾದ ಇವಿಎಂಗಳನ್ನು ಬದಲಾಯಿಸಿದ ನಂತರ ಸಿಂಘತ್ ಮತ್ತು ಸೈಕುಲ್‌ನ ಎರಡು ಮತಗಟ್ಟೆಗಳಲ್ಲಿ ಮತದಾನ ಪುನರಾರಂಭವಾಯಿತು ಎಂದು ರಾಜೇಶ್ ಅಗರವಾಲ್ ತಿಳಿಸಿದರು.
ಫೆರ್ಜಾಲ್ ಜಿಲ್ಲೆಯ ತಿಪೈಮುಖ್ ಕ್ಷೇತ್ರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮತಗಟ್ಟೆ ಅಧಿಕಾರಿ ಮೃತಪಟ್ಟಿದ್ದಾರೆ. 8ನೇ ಮಣಿಪುರ ರೈಫಲ್ಸ್‌ನ ಹವಾಲ್ದಾರ್ ಭದ್ರತಾ ಸಿಬ್ಬಂದಿ ಸೋಮವಾರ ಮುಂಜಾನೆ ಅವರ ಬ್ಯಾರಕ್‌ನಲ್ಲಿ ಗುಂಡಿನ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹವಾಲ್ದಾರ್ ತನ್ನ ಸರ್ವಿಸ್ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಹೇಳಿದ್ದು, ಪ್ರಕರಣ ದಾಖಲಾಗಿದೆ. ಆದರೆ ಮತಗಟ್ಟೆ ಅಧಿಕಾರಿ ಹೇಳುವ ಪ್ರಕಾರ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ನಮೂನೆ 17ಎ ಹಾಗೂ ಇತರೆ ದಾಖಲೆಗಳ ಪರಿಶೀಲನೆಯನ್ನು ಚುನಾವಣಾಧಿಕಾರಿಗಳು ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಮಾರ್ಚ್ 1ರಂದು ನಡೆಸಲಿದ್ದಾರೆ ಎಂದು ಸಿಇಒ ತಿಳಿಸಿದರು. ಮರು ಮತದಾನದ ಯಾವುದಾದರೂ ನಿರ್ಧಾರಗಳು ಇದ್ದರೆ, ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುವುದು ಎಂದು ಸಿಇಒ ರಾಜೇಶ್ ಅಗರವಾಲ್ ಹೇಳಿದರು.
ಮೊದಲ ಹಂತದಲ್ಲಿ 5,80,607 ಪುರುಷರು, 6,28,657 ಮಹಿಳೆಯರು ಮತ್ತು 175 ತೃತೀಯ ಲಿಂಗಿಗಳು ಸೇರಿದಂತೆ 12,09,439 ಮತದಾರರು ಮತದಾನದ ಹಕ್ಕು ಪಡೆದಿದ್ದರು.
ಒಟ್ಟು 381 ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ, ನಾಲ್ಕು ಕ್ಷೇತ್ರಗಳು- ಸಿಂಗ್‌ಜಮೇ, ಯೈಸ್ಕುಲ್, ವಾಂಗ್‌ಖೇ ಮತ್ತು ಚುರಾಚಂದ್‌ಪುರ- ಎಲ್ಲಾ ಮಹಿಳಾ ಚುನಾವಣಾ ತಂಡಗಳಿಂದ ನಿರ್ವಹಿಸಲ್ಪಟ್ಟವು ಮತ್ತು ಸೈಕೋಟ್‌ನ ಒಂದು ಮತಗಟ್ಟೆಯು ಸಂಪೂರ್ಣವಾಗಿ PwD ಮತಗಟ್ಟೆ ಸಿಬ್ಬಂದಿಯಿಂದ ನಿರ್ವಹಿಸಲ್ಪಟ್ಟಿದೆ. ಎರಡನೇ ಹಂತದ ಮತದಾನ ಮಾರ್ಚ್ 5 ರಂದು 22 ಕ್ಷೇತ್ರಗಳಲ್ಲಿ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications