ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ ಉಪವಾಸ ಅಂತ್ಯ

Posted By:
Subscribe to Oneindia Kannada

ನವದೆಹಲಿ, ಜು.26: ಸರಿ ಸುಮಾರು 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಣಿಪುರದ ಉಕ್ಕಿನ ಮಹಿಳೆ ಎನಿಸಿಕೊಂಡಿರುವ ಐರೋಮ್ ಶರ್ಮಿಳಾ ಅವರು ತಮ್ಮ ಉಪವಾಸ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಂಗಳವಾರ(ಜುಲೈ 26) ತಿಳಿಸಿದರು.

ಐರೋಮ್ ಅವರು ಶರ್ಮಿಳಾ ಅವರು ಆಗಸ್ಟ್‌ 9ರಂದು ಉಪವಾಸ ಸತ್ಯಾಗ್ರಹ ಕೊನೆಗೊಳಿಸುವ ಸುದ್ದಿ ಸಿಕ್ಕಿದೆ. ಅಲ್ಲದೆ, ನಂತರ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. [ಅಂತೂ ಉಕ್ಕಿನ ಮಹಿಳೆ ಶರ್ಮಿಳಾಗೆ ಸಿಕ್ಕಿತು ಜಯ ]

ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಶರ್ಮಿಳಾ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ಬಯಸಿರುವುದಾಗಿ ಮಂಗಳವಾರ ಇಂಫಾಲ್‌ ಕೋರ್ಟಿನ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನವೆಂಬರ್ 1, 2000ರಂದು ಮಣಿಪುರದ ಇಂಫಾಲ್‌ ವಿಮಾನ ನಿಲ್ದಾಣದ ಸಮೀಪದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನ ಸಾರ್ವಜನಿಕರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಇದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.ಈಗ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಹುಶಃ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ನ್ಯಾಯಾಂಗ ಬಂಧನದ ವಶದಲ್ಲಿರುವ ಶರ್ಮಿಳಾ

ನ್ಯಾಯಾಂಗ ಬಂಧನದ ವಶದಲ್ಲಿರುವ ಶರ್ಮಿಳಾ

2006ರಲ್ಲಿ ದೆಹಲಿ ಜಂತರ್ ಮಂತರ್ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡ ವೇಳೆ ಐರೋಮ್ ಅವರ ವಿರುದ್ಧ ಐಪಿಸಿ ಸೆಕ್ಷನ್ 309 (ಆತ್ಮಹತ್ಯೆಗೆ ಯತ್ನ) ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ನ್ಯಾಯಾಂಗ ಬಂಧನದ ವಶದಲ್ಲಿರುವ ಶರ್ಮಿಳಾ ಅವರಿಗೆ ಮೂಗಿನ ಮೂಲಕ ನಳಿಕೆಯಿಂದ ದ್ರವ ಆಹಾರ ನೀಡಲಾಗುತ್ತಿದೆ.

ಚುನಾವಣೆಗೆ ಸ್ಪರ್ಧಿಸುವಂತೆ ಈ ಹಿಂದೆ ಆಹ್ವಾನ ಬಂದಿತ್ತು

ಚುನಾವಣೆಗೆ ಸ್ಪರ್ಧಿಸುವಂತೆ ಈ ಹಿಂದೆ ಆಹ್ವಾನ ಬಂದಿತ್ತು

2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ಮತ್ತು ಆಮ್‌ಆದ್ಮಿ ಪಕ್ಷಗಳು ಶರ್ಮಿಳಾ ಬಳಿ ವಿನಂತಿಸಿಕೊಂಡಿದ್ದವು. ಆದರೆ ಶರ್ಮಿಳಾ ಈ ಬೇಡಿಕೆ ತಿರಸ್ಕರಿಸಿದ್ದು 'ನಾನು ರಾಜಕಾರಣಿಯಲ್ಲ, ಸಾಮಾಜಿಕ ಹೋರಾಟಗಾರ್ತಿ, ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ' ಎಂದು ಹೇಳಿದ್ದರು.

ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿ ಸಿಕ್ಕಿದೆ

ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿ ಸಿಕ್ಕಿದೆ

ಮಾನವ ಹಕ್ಕುಗಳ ಹೋರಾಟಕ್ಕೆ ಸಂಬಂಧಿಸಿ ಶರ್ಮಿಳಾ ಅವರಿಗೆ ಗ್ವಾನ್‌ಗು, ಮಲೆಯಾಳಂ ಫೌಂಡೇಶನ್‌ನಿಂದ 'ಮೈಲಮ್ಮಾ', ಮತ್ತು ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.

ಏತಕ್ಕಾಗಿ ಹೋರಾಟ

ಏತಕ್ಕಾಗಿ ಹೋರಾಟ

ಸಶಸ್ತ್ರ ಪಡೆಗಳಿಗೆ ಈ ಕಾಯ್ದೆ ವಿಶೇಷಾಧಿಕಾರ ನೀಡುತ್ತದೆ. ಅನುಮಾನ ಬಂದವರನ್ನು ಬಂಧಿಸುವ ಮತ್ತು ಹತ್ಯೆ ಮಾಡುವ ಅಧಿಕಾರ ಪೊಲೀಸರಿಗೆ ದೊರೆಯುತ್ತದೆ. ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರಕ್ಕೆ ಈ ಕಾನೂನು ಅನ್ವಯಿಸುತ್ತದೆ.

ಮಣಿಪುರ ಸೇರಿದಂತೆ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ನೀಡಿರುವುದನ್ನು ವಿರೋಧಿಸಿ ಹೋರಾಟ ಆರಂಭ.ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ಕಾಯ್ದೆ ಸಪ್ಟೆಂಬರ್ 11, 1958ರಲ್ಲಿ ಜಾರಿಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manipur's activist Irom Sharmila will break her fast on August 9, nearly 16 years after she started her fast in protest against the Armed Forces (Special Powers) Act (AFSPA) in the State.
Please Wait while comments are loading...