ಮೋದಿ ಹೊಗಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಶಶಿ

ನವದೆಹಲಿ, ಜೂ.6 : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕೇಂದ್ರ ಮಾಜಿ ಸಚಿವ ತಿರುವನಂತಪುರ ಸಂಸದ ಡಾ.ಶಶಿ ತರೂರ್ ಅವರು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ ಅವರನ್ನು ಶ್ಲಾಘಿಸಿದ ಶಶಿಗೆ ಮಣಿ ಶಂಕರ್ ಅಯ್ಯರ್ ಹೊಸ ಬಿರುದು ಕೊಟ್ಟಿದ್ದಾರೆ.

ಶಶಿ ತರೂರ್ ತಮ್ಮ ಹೇಳಿಕೆಯಲ್ಲಿ ಪ್ರೌಢಿಮೆ ಮೆರೆದಿಲ್ಲ, ಊಸರವಳ್ಳಿ ರೀತಿಯಲ್ಲಿ ಬಣ್ಣ ಬದಲಾಯಿಸುತ್ತಾ ಈ ರೀತಿ ಹೇಳಿಕೆ ನೀಡುವುದು ಶಶಿಗೆ ಮಾಮೂಲಿಯಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕ ತರೂರ್ ಅವರು ಮೋದಿ ಮತ್ತು ಅವರ ಸರ್ಕಾರ ಕೈಗೊಂಡ ಕೆಲ ಕ್ರಮಗಳ ಬಗ್ಗೆ ಬುಧವಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮೋದಿಯವರು ವಿಶಾಲ ಹೃದಯಿಯಾಗಿ ಮತ್ತು ಅವರಿಗೆ ಮತ ಹಾಕದ ವ್ಯಕ್ತಿಗಳು ಸೇರಿಸಿ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಅವರ ನಿಲುವು ಸ್ವಾಗತಾರ್ಹ ಎಂದಿದ್ದರು.

ಸುದ್ದಿವಾಹಿನಿ ಜತೆ ಮಾತನಾಡಿದ ತರೂರ್ ಮೋದಿ ಶ್ಲಾಘಿಸಿದ್ದಕ್ಕೆ ತಮ್ಮನ್ನು ಮೋದಿ ಫ್ಯಾನ್ ಎಂದು ಕರೆಯಬೇಕಾಗಿಲ್ಲ. ನೀವು ಟಿಆರ್‌ಪಿ ಗಳಿಸಲು ನಾನು ಮೋದಿ ಫ್ಯಾನ್ ಎನ್ನಲೂ ಹಿಂಜರಿಯುವುದಿಲ್ಲ ಎಂದಿದ್ದಾರೆ.[ಮೋದಿಯನ್ನ ಹಾಡಿಹೊಗಳಿದ ಶಶಿ ತರೂರ್]

ಆದರೆ, ಶಶಿ ಸ್ಪಷ್ಟನೆಯಿಂದ ಕಾಂಗ್ರೆಸ್ ಹೈಕಮಾಂಡ್ ತೃಪ್ತಿಯಾಗಿಲ್ಲ ಎಂದು ತಿಳಿದು ಬಂದಿಲ್ಲ. ಅಯ್ಯರ್ ಅವರು ತಮ್ಮ ಆಕ್ರೋಶದ ಮಾತುಗಳನ್ನು ಮುಂದುವರೆಸುತ್ತಾ ಶಶಿ ಅವರಂಧ ಪ್ರಾಜ್ಞರು ಈ ರೀತಿ ಹೇಳಿಕೆ ನೀಡಿರುವುದು ತೀವ್ರ ಬೇಸರ ತರಿಸಿದೆ ಎಂದಿದ್ದಾರೆ. ಮೋದಿ ಅವರನ್ನು ಚಹಾವಾಲ ಎಂದು ಕರೆದು ದೇಶವಿಡೀ ಸಂಚಲನ ಮೂಡಿಸಿದ್ದು ಇದೇ ಅಯ್ಯರ್ ಎಂಬುದನ್ನು ಮರೆಯುವಂತಿಲ್ಲ. [ಶಶಿ ಕೊಚ್ಚಿಯಲ್ಲಿ]

ಶಶಿ ಹೇಳಿಕೆಯಿಂದ ಹಿಂದೆ ಸರಿದ ಕಾಂಗ್ರೆಸ್

ಶಶಿ ಹೇಳಿಕೆಯಿಂದ ಹಿಂದೆ ಸರಿದ ಕಾಂಗ್ರೆಸ್

ಮೋದಿಯವರನ್ನು ಹೊಗಳಿದ್ದು ತರೂರ್ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ವತಿಯಿಂದ ಮೋದಿಯವರ ಸರ್ಕಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಈಗ ಸೂಕ್ತ ಸಮಯವಲ್ಲ ಎಂದು ವಕ್ತಾರೆ ಶೋಭಾ ಓಝಾ ಹೇಳಿದ್ದಾರೆ.

ಟೀಕೆಗಳಿಗೆ ನಾನು ಬಗ್ಗುವುದಿಲ್ಲ : ಶಶಿ

ಟೀಕೆಗಳಿಗೆ ನಾನು ಬಗ್ಗುವುದಿಲ್ಲ ಎಂದ ಶಶಿ ತರೂರು

ಮೋದಿ ಶ್ಲಾಘಿಸಿ ಶಶಿ ಬರೆದ ಲೇಖನ

ನರೇಂದ್ರ ಮೋದಿ ಆಡಳಿತ ಶೈಲಿ ಶ್ಲಾಘಿಸಿ ಶಶಿ ಬರೆದ ಲೇಖನದ ಲಿಂಕ್ ಇಲ್ಲಿದೆ

ಶಶಿಗೆ ಬುದ್ಧಿವಾದ ಹೇಳಲು ಅಯ್ಯರ್ ಯಾರು

ಶಶಿಗೆ ಬುದ್ಧಿವಾದ ಹೇಳಲು ಅಯ್ಯರ್ ಯಾರು, ಇದು ರಾಜಕೀಯದಾಟವಷ್ಟೇ?

ಅಪ್ರಬುದ್ಧ ಎಂದು ಕರೆಯುವುದೇಕೆ?

ಶಶಿ ತರೂರು ಹೇಳಿಕೆ ಅಪ್ರಬುದ್ಧ ಎಂದು ಕರೆಯುವುದೇಕೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+