ಪಾಕಿಸ್ತಾನ ರಾಯಭಾರಿ ಜತೆ ಅಯ್ಯರ್ ಸೀಕ್ರೇಟ್ ಮೀಟಿಂಗ್: ಮೋದಿ ಆರೋಪ
ಅಹಮದಾಬಾದ್, ಡಿಸೆಂಬರ್ 10: "ಗುಜರಾತಿಗೆ ಅವಮಾನ ಮಾಡಿದ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ಹೈಕಮಿಷನರ್ ಜತೆ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ಇದಕ್ಕೇನು ಕಾರಣ?" ಎಂದು ಪ್ರಧಾನ ನರೇಂದ್ರ ಮೋದಿ ಗುಜರಾತಿನ ಜನರನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ತಮಗೆ 'ನೀಚ' ಎಂದ ಮಣಿಶಂಕರ್ ಅಯ್ಯರ್ ರನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿರುವ ಬನಸ್ಕಾಂತ ಜಿಲ್ಲೆಯ ಪಲನ್ಪುರ್ ನಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಪಾಕಿಸ್ತಾನದ ಮಿಲಿಟರಿ ಇಂಟಲಿಜೆನ್ಸ್ ನಲ್ಲಿ ಉನ್ನತ ಸ್ಥಾನದಲ್ಲಿದ್ದವರು ಅಹ್ಮದ್ ಪಟೇಲ್ ರನ್ನು ಮುಖ್ಯಮಂತ್ರಿ ಮಾಡಲು ಸಹಾಯ ಮಾಡುವುದಾಗಿ ಪತ್ರ ಬರೆಯುತ್ತಾರೆ. ಇವರೆಲ್ಲಾ ಯಾಕೆ ಹೀಗೆ ಪತ್ರ ಬರೆಯುತ್ತಾರೆ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬನಸ್ಕಾಂತ ಜಿಲ್ಲೆ ಮಾಡಿರುವ ಪವಾಡವನ್ನು ಇಡೀ ದೇಶದ ಜನರು ನೋಡಿದ್ದಾರೆ. ಅದರಲ್ಲೂ ಆಲೂಗಡ್ಡೆ ಇಳುವರಿಯಲ್ಲಿ ಬನಸ್ಕಾಂತ ರೈತರು ಪವಾಡವನ್ನೇ ಮಾಡಿದ್ದಾರೆ ಎಂದು ಮೋದಿ ಹೊಗಳಿದ್ದಾರೆ.
ಗುಜರಾತಿನಲ್ಲಿ ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು ಡಿಸೆಂಬರ್ 14ರಂದು ಗುರುವಾರ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications