ಚಳಿಗಾಲದಲ್ಲಿ ಮಾರುಕಟ್ಟೆಗೆ ಬಂದ ಈ ಮಾವಿನ ಹಣ್ಣಿಗೆ ಭಾರೀ ಡಿಮ್ಯಾಂಡ್‌: ಕೆಜಿಗೆ ಬರೋಬ್ಬರಿ 1,551 ರೂ

ದೆಹಲಿ, ನವೆಂಬರ್‌ 30: ಹಣ್ಣುಗಳ ರಾಜ ಮಾವು. ಎಲ್ಲಾ ಕಾಲದಲ್ಲೂ ಹಣ್ಣು ಪ್ರಿಯರ ಪ್ರಥಮ ಆಯ್ಕೆ ಈ ಹಣ್ಣು. ಆದರೆ ಈ ಹಣ್ಣಿನ ಬೆಳೆಗೆ ಕಾಲದ ಚೌಕಟ್ಟಿದೆ. ವಸಂತ ಮಾಸದ ಬಳಿಕ ಮಾವಿನ ಚಿಗುರು ಆರಂಭವಾಗಿ ಹಣ್ಣಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಮಾವಿನ ಹಣ್ಣುಗಳನ್ನು ಸವಿಯಲು ಇನ್ನೂ ನಾಲ್ಕೈದು ತಿಂಗಳು ಕಾಯಲೇಬೇಕು.

ಇತ್ತೀಚಿನ ಆಧುನಿಕ ಯುಗದಲ್ಲಿ ಎಲ್ಲಾ ಋತುವಿನಲ್ಲೂ ಎಲ್ಲಾ ಬಗೆಯ ಹಣ್ಣುಗಳು ಲಭ್ಯವಿರುತ್ತದೆ. ಆದರೆ ಮಾಸಗಳ ಅನುಗುಣವಾಗಿ ಬೇಸಿಗೆಯಲ್ಲಿ ಬೆಳೆಯುವ ಮಾನಿವ ಹಣ್ಣು ಚಳಿಗಾಲದಲ್ಲೇ ಮಾರುಕಟ್ಟೆಗೆ ಬಂದಿರುವುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಇನ್ನೂ ಮಾವಿನ ಮರದಲ್ಲಿ ಹೂವಾಗುವ ಸಮಯವೇ ಬಂದಿಲ್ಲ, ಅಷ್ಟರಲ್ಲಿ ಮಾವು ಹಣ್ಣಾಗಿ ಮಾರುಕಟ್ಟೆಗೆ ಬಂದಿದೆ ಎಂದರೆ ಅಚ್ಚರಿಯೇ ಸರಿ. ಆದರೂ ಇದು ಸತ್ಯವಾಗಿದೆ.

Mangoes Come Into Market In Winter Season

ಗುಜರಾತ್​ನ ಪೋರಬಂದರ್ ಮಾರ್ಕೆಟಿಂಗ್ ಯಾರ್ಡ್‌ಗೆ ಬೇಸಿಗೆಯಲ್ಲಿ ಬರಬೇಕಿದ್ದ ಕೇಸರ್ ಮಾವು ಮಾರುಕಟ್ಟೆಗೆ ಬಂದಿದೆ. ಚಳಿಗಾಲದಲ್ಲಿ ಬಂದ ಈ ಅಪರೂಪದ ಹಣ್ಣುಗಳ ರಾಜ ಮಾವುವಿಗೆ ಡಿಮ್ಯಾಂಡ್‌ ಜಾಸ್ತಿ ಇದ್ದು, ಬೆಲೆ ಗಗನಕ್ಕೇರಿದೆ. ಈ ಕೇಸರ್ ಮಾವಿನ ಹಣ್ಣು ಮಾರ್ಕೆಟಿಂಗ್ ಯಾರ್ಡ್‌ನ ಹರಾಜಿನಲ್ಲಿ 1 ಕೆಜಿಗೆ ಬರೋಬ್ಬರಿ 1,551 ರೂಪಾಯಿಗೆ ಮಾರಾಟವಾಗಿದೆ. ಗುಜರಾತ್​ನ ಸುದಾಮ ಹಣ್ಣಿನ ಕಂಪನಿಯಲ್ಲಿ 10 ಕೆಜಿ ಮಾವಿನ ಹಣ್ಣಿನ ಎರಡು ಬಾಕ್ಸ್ ಬರೋಬ್ಬರಿ 30 ಸಾವಿರ ರೂಪಾಯಿಗೆ ಮಾರಾಟವಾಗಿವೆ.

ಗಿರ್ ಪ್ರದೇಶದ ಕೇಸರ್ ಮಾವು ಮತ್ತು ಪೋರಬಂದರ್ ಜಿಲ್ಲೆಯ ಸ್ಥಳೀಯ ಮಾವಿಗೆ ಗುಜರಾತ್ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆಯಿದೆ. ಈ ಬಾರಿ ಬೇಸಿಗೆಯ ಬದಲು ಚಳಿಗಾಲದಲ್ಲಿಯೇ ಮಾವು ಉತ್ಪಾದನೆಯಾಗುತ್ತಿದ್ದು, ರೈತರು, ವ್ಯಾಪಾರಸ್ಥರು ಈ ಬಾರಿ ಉತ್ತಮ ಮಾವಿನ ಮಾರಾಟದ ನಿರೀಕ್ಷೆಯಲ್ಲಿದ್ದಾರೆ.

ಕೇಸರ್ ಮಾವು ಹಣ್ಣಿನ ಉಪಯೋಗಗಳು.?

ಬಾಯಿಗೆ ರುಚಿ ನೀಡುವ ಮಾವಿನ ಹಣ್ಣುಗಳು ಆರೋಗ್ಯಕ್ಕೂ ಉಪಯೋಗಕಾರಿ. ಮಾವಿನ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಮತ್ತು ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡುಬರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಮಾವಿನ ಹಣ್ಣು ಮಧುಮೇಹವನ್ನು ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಣೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣುಗಳ ಆರೋಗ್ಯಕ್ಕೂ ಮಾವಿನ ಹಣ್ಣು ಸೇವನೆ ಅತ್ಯುತ್ತಮ. ಮಾವಿನ ಹಣ್ಣು ಸೇವಿಸುವುದರಿಂದ ಮುಖದ ಮೇಲಿನ ಮೊಡವೆಗಳು ಕಡಿಮೆಯಾಗುತ್ತದೆ ಜೊತೆಗೆ ಮುಖದ ಕಾಂತಿ ಕೂಡ ಹೆಚ್ಚುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+