ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿ ಈಗ ಪೊಲೀಸರ ಅತಿಥಿ!

ನಾಸಿಕ್: ಏನೋ ಮಾಡಲು ಹೋಗಿ ಕೆಲವರು ಏನೇನೋ ಎಡವಟ್ಟು ಮಾಡಿಕೊಳ್ಳುತ್ತಾರೆ. ಹೀಗೆ ಪಾಕಿಸ್ತಾನ ಪರ ಸ್ಟೇಟಸ್ ಹಾಕಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿಗಳ ಕಥೆಯನ್ನು ಮರೆಯುವ ಮುನ್ನ, ಕಾರ್ಮಿಕನ ಬಂಧನವಾಗಿದೆ. ಸ್ವಾತಂತ್ರ್ಯ ಸಂಭ್ರಮ ಮೇಳೈಸುವಾಗ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕಾರ್ಮಿಕ ಕಂಬಿ ಎಣಿಸುತ್ತಿದ್ದಾನೆ. ಹಾಗಾದರೆ ಘಟನೆ ನಡೆದಿದ್ದು ಹೇಗೆ? ಪಾಕಿಸ್ತಾನ ಪರ ಈತ ಘೋಷಣೆ ಕೂಗಿದ್ದು ಏಕೆ? ಮುಂದೆ ಓದಿ.

ಮಹಾರಾಷ್ಟ್ರದಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿವೆ. ಮಹಾರಾಷ್ಟ್ರ ರಾಜ್ಯದ ನಾಸಿಕ್‌ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ 25 ವರ್ಷದ ಯುವಕನೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಯುವಕನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ಸಂಭ್ರಮಕ್ಕೆ ಜಗತ್ತೇ ಶುಭಾಶಯ ಕೋರಿದೆ. ಹೀಗೆ ಮಹಾರಾಷ್ಟ್ರದಲ್ಲೂ ಭಾರಿ ಅದ್ಧೂರಿಯಿಂದ ಸಮಾರಂಭ ನಡೆಯುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಮಾಡಿದ ಎಡವಟ್ಟು ಸಂಚಲನ ಸೃಷ್ಟಿಸಿದೆ.

Man arrested for allegedly Shouting Pro-Pakistan Slogans In Nasik

ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಮಹಾರಾಷ್ಟ್ರದ ನಾಸಿಕ್‌ನಿಂದ 60 ಕಿಲೋ ಮೀಟರ್ ದೂರದಲ್ಲಿನ ಚಾಂದ್‌ವಾಡ್‌ ಟೋಲ್‌ ಪ್ಲಾಜಾದಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗೆ ಕಾರ್ಯಕ್ರಮ ನಡೆಯುವಾಗ ಟೋಲ್‌ ಪ್ಲಾಜಾ ಕಾರ್ಮಿಕ ಪಾಕಿಸ್ತಾನ‌ ಪರ ಘೋಷಣೆ ಕೂಗಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಟೋಲ್‌ ಪ್ಲಾಜಾದ ವ್ಯವಸ್ಥಾಪಕ ದೂರು ಕೊಟ್ಟಿದ್ದು, ಇದೀಗ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿ ಬಂಧಿಸಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುತ್ತಮುತ್ತಲ ಭಾಗದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ. ಬಂಧಿತನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪೊಲೀಸ್‌ ಠಾಣೆಯೆದುರು ಪ್ರತಿಭಟನೆ ನಡೆದಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಚಾಂದ್‌ವಾಡ್‌ ಪ್ರದೇಶದ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ಪದೇ ಪದೆ ಇಂತಹ ಘಟನೆಗಳು ಮಹರಾಷ್ಟ್ರದಲ್ಲಿ ವರದಿ ಆಗಿವೆ. ಈ ಘಟನೆಗೂ ಮುನ್ನ ವಿದ್ಯಾರ್ಥಿಗಳು ತಮ್ಮ ಸ್ಟೇಟಸ್‌ನಲ್ಲಿ ಪಾಕ್ ಬೆಂಬಲಿಸುವ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪ ಕೇಳಿಬಂದಿತ್ತು.

Man arrested for allegedly Shouting Pro-Pakistan Slogans In Nasik

ಪಾಕಿಸ್ತಾನ ಪರ ಸ್ಟೇಟಸ್ ಹಾಕಿದ್ದರು!

ಇದೀಗ ಪಾಕ್ ಪರ ಘೋಷಣೆ ಕೂಗಿರುವ ಘಟನೆ ವರದಿಯಾಗಿದ್ದು, ಇದಕ್ಕೂ ಮೊದಲು ಇನ್ನೊಂದು ಘಟನೆ ವರದಿಯಾಗಿತ್ತು. ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15ರಂದು ನಡೆದರೆ, ಪಾಕಿಸ್ತಾನದಲ್ಲಿ ಆಗಸ್ಟ್ 14ಕ್ಕೆ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಹೀಗೆ ಪಾಕ್‌ನ ಸ್ವಾತಂತ್ರ್ಯ ದಿನಾಚರಣೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂಬೈ ಪೊಲೀಸರು ಘಟನೆ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆದು ನಂತರ ರಿಲೀಸ್ ಮಾಡಿದ್ದರು. ಹೀಗೆ ಮುಂಬೈ ಘಟನೆಯ ಕಹಿ ನೆನಪಲ್ಲೇ ಮತ್ತೊಂದು ಇಂತಹದ್ದೇ ಘಟನೆ ವರದಿಯಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್

ಅವರು ಕಾಲೇಜು ವಿದ್ಯಾರ್ಥಿಗಳು, ಓದುವ ವಯಸ್ಸಲ್ಲಿ ಇಂತಹ ಕೆಲಸ ಮಾಡಿದ್ದರು. ಆದರೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸ್ ಪಡೆ ಎಚ್ಚರಿಕೆ ನೀಡಿ ರಿಲೀಸ್ ಮಾಡಿತ್ತು, ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಧ್ವಜದ ವಿಡಿಯೋ ಪೋಸ್ಟ್ ಮಾಡಿದ್ರು ಅಂತಾ ಪೊಲೀಸರು ತಿಳಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದರು.

ಈ ಬಗ್ಗೆ ಸಾಮಾಜಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಕೊಲಬಾ ಮೂಲದ ಉದ್ಯಮಿ ದೂರು ನೀಡಿದ್ರು. ದೂರಿನ ಹಿನ್ನೆಲೆ ವಿದ್ಯಾರ್ಥಿಗಳನ್ನು ಬಂಧಿಸಿ ಬುದ್ಧಿ ಹೇಳಿದ್ದರು ಪೊಲೀಸರು. ಹಾಗೇ ಖಡಕ್ ವಾರ್ನಿಂಗ್ ಕೂಡ ಕೊಟ್ಟು ಬಿಟ್ಟು ಕಳುಹಿಸಿದ್ರು. ಹೀಗೆ ನೆರೆಯ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಭ್ರಮದ ನಡುವೆ ಎರಡೆರಡು ಘಟನೆಗಳು ಸದ್ದು ಮಾಡಿವೆ. ಹಾಗೇ ಎರಡೂ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+