ಗುಜರಾತ್‌ನಲ್ಲಿ ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ
ಗುಜರಾತ್, ಜನವರಿ 01: ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು.

ಮೃತರನ್ನು ಮಂಗಾಭಾಯಿ ವಿಜುದಾ ಎಂದು ಗುರುತಿಸಲಾಗಿದ್ದು, ಅವರ ಪುತ್ರಿಯರಾದ ಸೋನಂ (17), ರೇಖಾ (21) ಮತ್ತು ಮಗ ಜಿಗ್ನೇಶ್ (19) ಬೋಟಾಡ್‌ನ ಗಧಾಡಾ ತಾಲೂಕಿನ ನಾನಾ ಸಖ್‌ಪರ್ ಗ್ರಾಮದವರಾಗಿದ್ದಾರೆ. ಈ ಘಟನೆ ಭಾನುವಾರ ಸಂಜೆ 6:30ಕ್ಕೆ ನಿಂಗಲಾ ಮತ್ತು ಆಲಂಪುರ್ ನಿಲ್ದಾಣಗಳ ನಡುವೆ ನಡೆದಿದೆ ಎಂದು ರೈಲ್ವೇ ರಕ್ಷಣಾ ಪಡೆ ಸಬ್ ಇನ್ಸ್‌ಪೆಕ್ಟರ್ ವಿಎಸ್ ಗೋಲೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂಬಂಧಿಕರೊಂದಿಗಿನ ಜಗಳದ ನಂತರ ಕೊಲೆ ಯತ್ನದ ಆರೋಪದ ಮೇಲೆ ವಿಜುದಾ ಬಂಧನಕ್ಕೊಳಗಾದ ನಂತರ ಜಾಮೀನಿನ ಮೇಲೆ ಹೊರಗಿದ್ದರು. ನಾಲ್ವರು ಭಾವನಗರದಿಂದ ಗಾಂಧಿಧಾಮ್‌ಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನ ಮುಂದೆ ಹಾರಿದರು. ಹಳಿಗಳ ಉದ್ದಕ್ಕೂ ಆ ವ್ಯಕ್ತಿ ಮತ್ತು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]












Click it and Unblock the Notifications