ಟಿಎಂಸಿಯಿಂದ ಬಿಜೆಪಿ ಹಠಾವೋ ದೇಶ್ ಬಚಾವೋ ಆಂದೋಲನ!
ಕೋಲ್ಕತ್ತಾ, ಜುಲೈ 21: "ಬಿಜೆಪಿ ವಿರುದ್ಧ ಆಗಸ್ಟ್ 15 ರಿಂದ ಬಿಜೆಪಿ ಹಠಾವೋ, ದೇಶ್ ಬಚಾವೋ ಆಂದೋಲನ" ಆರಂಭಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದೆಲ್ಲೆಡೆ ಗುಂಪುಗೂಡಿಕೊಂಡು ಹಲ್ಲೆ ನಡೆಸುವ ಘಟನೆಗಳು ನಡೆಯುತ್ತಿವೆ. ಅವರು ದೇಶದಲ್ಲಿ ತಾಲಿಬಾನ್ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ನಲ್ಲಿಯೂ ಒಳ್ಳೆಯ ಜನರಿದ್ದಾರೆ. ಅವರಿಗೆ ನಾನು ಗೌರವ ನೀಡುತ್ತೇನೆ. ಆದರೆ ಕೆಲವರು ಮಾತ್ರ ಕೆಸರೆರೆಚಾಟ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

"ದೇಶದಲ್ಲಿ ನಡೆಯುತ್ತಿರುವ ಇಂಥ ಅನಾಚಾರ, ಹಿಂಸೆ ಪ್ರಕರಣಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ನಾವು ಆಗಸ್ಟ್ 15 ರಿಂದ ಬಿಜೆಪಿ ಹಠಾವೋ ದೇಶ್ ಬಚಾವೋ ಆಂದೋಲನ ಆರಂಭಿಸುತ್ತಿದ್ದೇವೆ. ಇದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಬಂಗಾಳದ ಜನರು ಹೊಸ ಹಾದಿ ತೋರಲಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.












Click it and Unblock the Notifications