ಮಲ್ಯ, ನೀರವ್ ಪರಾರಿಗೆ ಬಿಜೆಪಿ ನಾಯಕರಿಂದ ನೆರವು: ರಾಹುಲ್ ಗಾಂಧಿ
ಲಂಡನ್, ಆಗಸ್ಟ್ 26: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿನ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ನಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡುತ್ತಾ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು ದೇಶದಿಂದ ಪರಾರಿಯಾಗಲು ಬಿಜೆಪಿ ನೆರವಾಗಿದೆ ಎಂದು ಆರೋಪಿಸಿದ್ದಾರೆ. ವಿಜಯ್ ಮಲ್ಯ ಅವರು ಭಾರತವನ್ನು ತೊರೆಯುವ ಮುನ್ನ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಂತರ ಭಾರತದ ಜೈಲಿನ ಬಗ್ಗೆ ಮಲ್ಯ ಅವರು ಆಕ್ಷೇಪವೆತ್ತಿರುವ ಬಗ್ಗೆ ಪತ್ರಕರ್ತರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಭಾರತದ ಜೈಲುಗಳು ಸುರಕ್ಷಿತವಾಗಿವೆ. ಮಲ್ಯ ಅವರು 9000 ಕೋಟಿ ರು ಸಾಲ ಮಾಡಿ, ಪರಾರಿಯಾಗಿದ್ದರೆಂದ ಮಾತ್ರಕ್ಕೆ ವಿಶೇಷವಾದ ಜೈಲು ನೀಡಬೇಕಾಗಿಲ್ಲ ಎಂದಿದ್ದಾರೆ.

ಆರ್ಥಿಕ ವ್ಯವಹಾರ ಅಪರಾಧಿಗಳ ಬಗ್ಗೆ ಮೋದಿ ಸರ್ಕಾರವು ಮೃದು ಧೋರಣೆ ಹೊಂದಿದೆ.35 ಸಾವಿರ ಕೋಟಿ ಅವ್ಯವಹಾರಕ್ಕೆ ಕಾರಣವಾಗಿರುವ ಮೆಹುಲ್ ಚೋಕ್ಸಿ, ನೀರವ್ ಮೋದಿ ಅವರನ್ನು ಪರಾರಿಯಾಗಲು ನೆರವಾಗಿದ್ದಾರೆ. ಉದ್ಯೋಗ ಸೃಷ್ಟಿಯ ಪ್ರಶ್ನೆ ಬಂದರೆ, ನೀರವ್ ಮೋದಿ ಅವರು ಎಷ್ಟು ಉದ್ಯೋಗ ನೀಡಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು.












Click it and Unblock the Notifications